ಸುರಪುರ: 'ಸುರಪುರ ರಾಜರ ಅಪ್ರತಿಮ ಸಾಹಸಗಾಥೆಯ ದುಂದುಂಮೆ ಪದ ಹಾಡಿ ರಾಜ್ಯಾದ್ಯಂತ ಹೆಸರು ಮಾಡಿರುವ ಇಲ್ಲಿಯ ಲಕ್ಷ್ಮಣ ಗುತ್ತೇದಾರ ಅವರಿಗೆ ಈ ಬಾರಿ ಕರ್ನಾಟಕ ಸರಕಾರ ಪ್ರತಿಷ್ಠಿತ 'ಜಾನಪದಶ್ರೀ' ಪ್ರಶಸ್ತಿ ನೀಡಿ ಗೌರವಿಸಿದೆ, ಇದು ಸಗರನಾಡಿಗೆ ಹೆಮ್ಮೆಯ ವಿಷಯ' ಎಂದು ಯಾದಗಿರಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಹೇಳಿದ್ದಾರೆ
ಅವರು ಇಂದು ತಮ್ಮ ಮನೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಕನಸಿನ ಯೋಜನೆ 'ಮನೆಗೊಂದು ಗ್ರಂಥಾಲಯ'ದ ಅಡಿಯಲ್ಲಿ ಗೃಹ ಗ್ರಂಥಾಲಯವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅವರು ಉದ್ಘಾಟಿಸಿದ ಸಂದರ್ಭದಲ್ಲಿ ಲಕ್ಷ್ಮಣ ಗುತ್ತೆದಾರ ಅವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.
ಡಾ.ಮಾನಸ ಅವರನ್ನು ಗಣ್ಯರು ಸನ್ಮಾನಿಸಿದರು. ಹಿರಿಯ ಸಾಹಿತಿ ಜಾಲವಾದಿ ದಂಪತಿಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಅಧ್ಯಕ್ಷರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಡಾ.ಸುರೇಶ ಸಜ್ಜನ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ,ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಸಂಚಾಲಕ ಪ್ರಕಾಶ ಅಂಗಡಿ, ಸದಸ್ಯರಾದ ಕನಕಪ್ಪ ವಾಗನಗೇರಿ, ದೊಡ್ಡಮಲ್ಲಿಕಾರ್ಜುನ ಉದ್ಧಾರ, ಸಾಜನಶೆಟ್ಟಿ, ದೇವು ಹೆಬ್ಬಾಳ, ವೆಂಕಟೇಶಗೌಡ ಪಾಟೀಲ, ರಾಘವೇಂದ್ರ ಭಕ್ರಿ, ಶಕುಂತಲಾ ಜಾಲವಾದಿ ಮೊದಲಾದವರು ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

