ಶಿಶುವಿನ ಮಸಾಜ್ ತೈಲದ ಮಹತ್ವ ಸಾರಲು ಹಿಮಾಲಯ ಬೇಬಿಕೇರ್‌ ನಿಂದ ಹೊಸ ಅಭಿಯಾನ

Upayuktha
0

ಮಸಾಜ್ ಮಗುವನ್ನು ದೈಹಿಕವಾಗಿ, ಭಾವನಾತ್ಮಕವಾಗಿ ಸದೃಢಗೊಳಿಸುತ್ತದೆ: ಎನ್.ವಿ. ಚಕ್ರವರ್ತಿ




ಮಂಗಳೂರು: "ಪ್ರತಿದಿನ ತೋರಿಸುವ ಕಾಳಜಿ, ಬಾಂಧವ್ಯ ಮಗುವಿನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹಿಮಾಲಯ ಬೇಬಿಕೇರ್ ಸಂಸ್ಥೆ ನಂಬುತ್ತದೆ. ಅಲ್ಲದೇ, ಮಗುವಿಗೆ ಮಾಡುವ ಮಸಾಜ್ ಎಂಬುದು ನಮ್ಮ ಸಂಪ್ರದಾಯಬದ್ಧ ಪದ್ಧತಿಯಾಗಿದ್ದು, ಇದು ಮಗುವನ್ನು ದೈಹಿಕವಾಗಿ ಸದೃಢಗೊಳಿಸುವುದಲ್ಲದೆ ಭಾವನಾತ್ಮಕ ಸಂಬಂಧವನ್ನು ವೃದ್ಧಿಸುತ್ತದೆ" ಎಂದು ಹಿಮಾಲಯ ವೆಲ್‌ ನೆಸ್ ಕಂಪನಿಯ ಬೇಬಿಕೇರ್ ವಿಭಾಗದ ನಿರ್ದೇಶಕರಾದ ಎನ್. ವಿ. ಚಕ್ರವರ್ತಿ ಹೇಳಿದ್ದಾರೆ.


ದೇಶದ ಪ್ರಮುಖ ಮತ್ತು ಅತ್ಯಂತ ವಿಶ್ವಾಸಾರ್ಹ ಶಿಶು ಆರೈಕೆ ಬ್ರ್ಯಾಂಡ್ ಆದ ಹಿಮಾಲಯ ಬೇಬಿಕೇರ್ ಸಂಸ್ಥೆಯು ತನ್ನ ಹಿಮಾಲಯ ಬೇಬಿ ಮಸಾಜ್ ಆಯಿಲ್ ಉತ್ಪನ್ನದ ಮಹತ್ವ ಸಾರುವ ಹೊಸ ಅಭಿಯಾನ ಬಿಡುಗಡೆ ಮಾಡಿದ್ದು, ಈ ಸಂದರ್ಭದಲ್ಲಿ ಅವರು ಮಾತನಾಡಿದರು.


ಈ ಅಭಿಯಾನದ ಭಾಗವಾಗಿ ಕಿರುಚಿತ್ರ ಬಿಡುಗಡೆಯಾಗಿದೆ. ಈ ಕಿರುಚಿತ್ರವು ಮಗುವಿನ ದೃಷ್ಟಿಕೋನದಲ್ಲೇ ಕಥೆಯನ್ನು ಹೇಳುತ್ತದೆ. ಬೆಳೆಯುವುದು ಅಂದುಕೊಂಡಷ್ಟು ಸುಲಭವಲ್ಲ, ಅದೊಂದು ಫುಲ್ ಟೈಮ್ ಜಾಬ್ ಎಂಬಂತೆ ಹಾಸ್ಯಭರಿತವಾಗಿ ಇಲ್ಲಿ ವಿವರಿಸಲಾಗಿದೆ. ಸುತ್ತಲಿನ ಪ್ರಪಂಚವನ್ನು ಗಮನಿಸುವುದು, ಹೊಸ ವಿಷಯಗಳನ್ನು ಕಲಿಯುವುದು, ತೂಕ ಹೆಚ್ಚಿಸಿಕೊಳ್ಳುವುದು ಮತ್ತು ಮೊದಲ ಹಲ್ಲು ಮೂಡುವ ಪ್ರಕ್ರಿಯೆ - ಇವೆಲ್ಲವೂ ಮಗುವಿನ ಪಾಲಿಗೆ ದೊಡ್ಡ ಸವಾಲುಗಳಾಗಿರುತ್ತವೆ. ಈ ಹಂತದಲ್ಲಿ ನಿತ್ಯದ ಮಸಾಜ್ ಹೇಗೆ ಮಗುವಿಗೆ ಶಕ್ತಿ ನೀಡುತ್ತದೆ ಎಂಬುದನ್ನು ಚಿತ್ರವು ಕಟ್ಟಿಕೊಡುತ್ತದೆ.


ಹಿಮಾಲಯ ಬೇಬಿ ಮಸಾಜ್ ಆಯಿಲ್ ಅಶ್ವಗಂಧ ಮತ್ತು ಬಲದಂತಹ ನೈಸರ್ಗಿಕ ಪದಾರ್ಥಗಳಿಂದ ಸಮೃದ್ಧವಾಗಿದೆ. ಸಾಂಪ್ರದಾಯಿಕವಾಗಿ ಇವು ಶಿಶುಗಳ ಸ್ನಾಯುಗಳ ಬಲವರ್ಧನೆಗೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಅತ್ಯುತ್ತಮವೆಂದು ಹೆಸರುವಾಸಿಯಾಗಿವೆ. ಈ ತೈಲದ ಬಳಕೆಯಿಂದ ಮಾಡುವ ಮಸಾಜ್ ಕೇವಲ ದೈಹಿಕ ಬೆಳವಣಿಗೆಯಲ್ಲದೆ, ಪೋಷಕರು ಮತ್ತು ಮಗುವಿನ ನಡುವಿನ ಬಾಂಧವ್ಯವನ್ನೂ ಗಟ್ಟಿಗೊಳಿಸುತ್ತದೆ.


ಈ ಹೊಸ ಅಭಿಯಾನವನ್ನು ಪ್ರಮುಖ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಭಾರತದಾದ್ಯಂತ ಇರುವ ಪೋಷಕರನ್ನು ತಲುಪುವ ಉದ್ದೇಶದಿಂದ ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿಯೂ ಇದನ್ನು ರೂಪಿಸಲಾಗಿದೆ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top