105ನೇ ವರ್ಷದ ಸಂಭ್ರಮಕ್ಕೆ ಪಾರಂಪರಿಕ ಪ್ರದರ್ಶನ

Upayuktha
0



ಮಂಗಳೂರು: ದಕ್ಷಿಣ ಭಾರತದ ಜವಳಿ ಪರಂಪರೆಯಲ್ಲಿ ಅಚ್ಚಳಿಯದ ಹೆಸರು ಹಾಗೂ ಅತ್ಯುತ್ತಮ ರೇಷ್ಮೆ ನೇಯ್ಗೆಗೆ ಹೆಸರುವಾಸಿಯಾದ ವಿಜಯಲಕ್ಷ್ಮಿ ಸಿಲ್ಕ್ಸ್, ಈಗ 105 ವರ್ಷಗಳ ಅದ್ಭುತ ಮೈಲಿಗಲ್ಲನ್ನು ತಲುಪಿದೆ. ಈ ಸಂಭ್ರಮದ ಅಂಗವಾಗಿ 'ಲೂಮ್, ಲೆಗಸಿ ಮತ್ತು ಲ್ಯಾಂಡ್‍ಮಾರ್ಕ್' ಎಂಬ ಐತಿಹಾಸಿಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.


ದಕ್ಷಿಣ ಭಾರತದ ಜನರು ತಲೆಮಾರುಗಳಿಂದ ರೇಷ್ಮೆಯನ್ನು ಹೇಗೆ ಖರೀದಿಸಿದರು, ಧರಿಸಿದರು ಮತ್ತು ಸಂರಕ್ಷಿಸಿದರು ಎಂಬುದನ್ನು ಬಿಂಬಿಸುವ ಒಂದು ಅಪರೂಪದ ಹಿನ್ನೋಟವಾದ ಈ ಪ್ರದರ್ಶನ ಬೆಂಗಳೂರಿನ 'ಸಭಾ'ದಲ್ಲಿ ಏಪ್ರಿಲ್ 23 ಮತ್ತು 24 ರಂದು ನಡೆಯುತ್ತದೆ. ಇದು ಕೇವಲ ಕೇವಲ ಸೀರೆಗಳ ಪ್ರದರ್ಶನವಲ್ಲ; ಬದಲಾಗಿ ಇದು ಸಾಂಸ್ಕøತಿಕ, ಸಾಮಾಜಿಕ ಮತ್ತು ವಾಣಿಜ್ಯ ಇತಿಹಾಸದ ಜೀವಂತ ದಾಖಲೆಯಾಗಿದೆ ಎಂದು ಪ್ರಕಟಣೆ ಹೇಳಿದೆ.


ಮಹಾರಾಜಕುಮಾರಿ ಕಾಮಾಕ್ಷಿ ದೇವಿ ಒಡೆಯರ್ ಮತ್ತು ರಾಜಕುಮಾರಿ ದರ್ಶಿಕಾ ಕುಮಾರಿ ಅವರ ವಿಶೇಷ ಸಂಗ್ರಹಗಳು ಈ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿರಲಿವೆ. ರೇಷ್ಮೆಯ ವೈವಿಧ್ಯತೆ: ಕರ್ನಾಟಕದ ರೇಷ್ಮೆ ಕೃಷಿ ಸಂಪ್ರದಾಯಗಳು, ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ರಾಜಮನೆತನದ ನೇಯ್ಗೆ ಪರಂಪರೆ ಮತ್ತು ಕಾಂಚೀಪುರದ ದೇವಾಲಯಗಳ ಕಲೆ - ಇವೆಲ್ಲವೂ ಸೇರಿ ಹೇಗೆ 'ಹೆರಿಟೇಜ್ ಸಿಲ್ಕ್' (ಪರಂಪರೆಯ ರೇಷ್ಮೆ) ಎಂಬ ಹೆಸರನ್ನು ಪಡೆದವು ಎಂಬುದನ್ನು ಇಲ್ಲಿ ವಿವರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top