ಬಳ್ಳಾರಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಿಂದ ಬಿಡುಗಡೆಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶ್ರೀಮೇಧಾ ಪಿಯು ಕಾಲೇಜುನಿಂದ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಒಟ್ಟು 26 Distinction, First Class 40, Second Class 13 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ಕುಮಾರಿ ಸೊಮ್ಯತರುಣ್ ಝಾ ಎಂಬ ವಿದ್ಯಾ ರ್ಥಿನಿಯು 600 ಅಂಕಗಳಿಗೆ 588 ಅಂಕಗಳನ್ನು ಪಡೆದು ಶೇ.98% ಪಡೆದು ರಾಜ್ಯಮಟ್ಟದಲ್ಲಿ 13ನೇ ರ್ಯಾಂಕ್ ಪಡೆದಿರುತ್ತಾರೆ, ಹಾಗೂ ಜಿಲ್ಲಾ ಮಟ್ಟದಲ್ಲಿ 9ನೇ ರ್ಯಾಂಕ್ ಪಡೆದಿರುತ್ತಾರೆ. ದ್ವಿತೀಯ ಸ್ಥಾನವನ್ನು ಇಬ್ಬರು ವಿದ್ಯಾರ್ಥಿನಿಯರುಗಳು ಹಂಚಿಕೊಂಡಿರುತ್ತಾರೆ.
ಅದರಲ್ಲಿ ಕುಮಾರಿ ಲಬ್ದಿ ಎಸ್ ಜೈನ್ ಇವರು ಗಳು 600 ಅಂಕಗಳಿಗೆ 582 ಅಂಕಗಳನ್ನು ಪಡೆದು ಶೇ 97% ಪಡೆದಿರುತ್ತಾರೆ.
ಕುಮಾರಿ ಕೆ ಹಚ್ ಎಂ ಶ್ರೇಯಾಂಕಿತ ಇವರುಗಳು 600 ಅಂಕಗಳಿಗೆ 582 ಅಂಕಗಳನ್ನು ಪಡೆದು ಶೇ. 97% ಪಡೆದಿರುತ್ತಾರೆ. ಕುಮಾರಿ ಸಾನ್ವಿ ಎಸ್. ಹಾದಿಮಣಿ ಇವರುಗಳು 600 ಅಂಕಗಳಿಗೆ 576 ಅಂಕಗಳನ್ನು ಪಡೆದು ಶೇ. 96% ಪಡೆದಿರುತ್ತಾರೆ. ಕುಮಾರಿ ಎನ್ ರಕ್ಷಿತ ಇವರುಗಳು 600 ಅಂಕಗಳಿಗೆ 573 ಅಂಕಗಳನ್ನು ಪಡೆದು ಶೇ. 95.5% ಪಡೆದಿರು ತ್ತಾರೆ. ರಿತೀಕ್ ಇವರುಗಳು 600 ಅಂಕಗಳಿಗೆ 571 ಅಂಕಗಳನ್ನು ಪಡೆದು ಶೇ. 95.16% ಪಡೆದಿರುತ್ತಾರೆ. ಕಾಲೇಜು ಶೇಕಡಾವಾರು 95% ರಷ್ಟು ಫಲಿತಾಂಶವನ್ನು ಪಡೆದಿರುತ್ತದೆ ಎಂದು ಕಾಲೇಜ್ ನ ಪ್ರಾಚಾರ್ಯರು ರಾಮ್ ಕಿರಣ್ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


