ಮಂಗಳೂರು: ಪ್ರಶಾಂತಿ ಮಹಿಳಾ ಮಂಡಲ (ರಿ) ಸೋನಳಿಕೆ ಮಕ್ಕಳಿಗಾಗಿ ಆಯೋಜಿಸಿದ 4 ದಿವಸದ ಬೇಸಿಗೆ ಶಿಬಿರ ಏಪ್ರಿಲ್ 6 ಸೋಮವಾರದಿಂದ ಏಪ್ರಿಲ್ 9 ಗುರುವಾರದವರೆಗೆ ಮಹಾದೇವಿ ಭಜನಾ ಮಂದಿರ, ಅಳಪೆ ಕರ್ಮಾರಿನಲ್ಲಿ ಜರುಗಿತು. ಕಾರ್ಯಕ್ರಮದ ಕೊನೆಯ ದಿನವಾದ ಗುರುವಾರ ಆರೋಗ್ಯ ಭಾರತಿಯ ಮಂಗಳೂರು ಜಿಲ್ಲಾ ಗೌರವಾಧ್ಯಕ್ಷರಾದ ಡಾ. ಮುರಳೀ ಮೋಹನ ಚೂಂತಾರು ಅವರು ಜಂಕ್ ಫುಡ್ ಮತ್ತು ಫಾಸ್ಟ್ ಫುಡ್ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಹಲ್ಲುಗಳ ಆರೋಗ್ಯ ಸಂರಕ್ಷಣೆಯ ಕುರಿತಾಗಿ ಮಾಹಿತಿಯನ್ನು ನೀಡಿದರು.
ಜಂಕ್ ಆಹಾರ ಮತ್ತು ದಿಡೀರ್ ಆಹಾರ ಸೇವನೆಯಿಂದ ದೇಹದ ಆರೋಗ್ಯ ಹದಗೆಡುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಕುಂದಿಸುತ್ತದೆ. ಹಸಿವು ಇಲ್ಲದಾಗಿ ಜೀರ್ಣ ಶಕ್ತಿ ಕುಂದುತ್ತದೆ, ದೇಹ ರೋಗಗಳ ಹಂದರವಾಗುತ್ತದೆ. ಮ್ಯಾಗಿ, ನೂಡಲ್ಸ್, ಪಿಜ್ಜಾ, ಬರ್ಗರ್, ಪೆಪ್ಸಿ, ಕೋಕ್ ತ್ಯಜಿಸಿ ಎಂದು ಮಕ್ಕಳಿಗೆ ಕಿವಿ ಮಾತು ನುಡಿದರು.
ಶಿಬಿರದಲ್ಲಿ ಸುಮಾರು 38 ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಶಾಂತಿ ಮಹಿಳಾ ಮಂಡಲದ ಶ್ರೀಮತಿ ಶೈಲಜಾ ಸತೀಶ್, ಬಾಲಗೋಕುಲ ಶಿಕ್ಷಕಿ ಶ್ರೀಮತಿ ಅದಿತಿ ಯತೀಶ್ ಹಾಗೂ ಆರೋಗ್ಯ ಭಾರತಿಯ ಮಂಗಳೂರು ಜಿಲ್ಲಾ ಜೊತೆ ಕಾರ್ಯದರ್ಶಿ ಶ್ರೀ ದಿನೇಶ್ ಚಂದ್ರಗಿರಿ ಅವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

