ಏ.21 ಕ್ಕೆ ವಿವೇಕಾನಂದ ಸ್ವಾಯತ್ತ ಕಾಲೇಜಿನಲ್ಲಿ ಪ್ರಥಮ ಪದವಿ ಪ್ರದಾನ ಸಮಾರಂಭ "ಸಪ್ತಪರ್ಣೋತ್ಸವ"

Upayuktha
0

ಪದವಿ ಪ್ರದಾನ, ದತ್ತಿ ನಿಧಿ ಮತ್ತು ಪ್ರಾವೀಣ್ಯತಾ ಬಹುಮಾನಗಳ ಪ್ರದಾನ ಕಾರ್ಯಕ್ರಮ 



ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ (ಸ್ಬಾಯತ್ತ) ಕಾಲೇಜಿನ 2024-25 ನೇ ಶೈಕ್ಷಣಿಕ ವರ್ಷದ ಪದವಿ ಹಾಗೂ 2023-24 ಮತ್ತು 2024-25 ನೇ ಶೈಕ್ಷಣಿಕ ವರ್ಷಗಳ ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರಥಮ ಪದವಿ ಪ್ರದಾನ ಸಮಾರಂಭ  ಸಪ್ತಪರ್ಣೋತ್ಸವ  ಇದೇ ಏ.21 ರಂದು ಕಾಲೇಜಿನ ಆವರಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ವಹಿಸಲಿದ್ದು ಮುಖ್ಯ ಅಭ್ಯಾಗತರಾಗಿ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ ಧರ್ಮ,  ವಿಶೇಷ ಅಭ್ಯಾಗತರಾಗಿ ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಕಛೇರಿ ಮಂಗಳೂರು ಇದರ ಜಂಟಿ ನಿರ್ದೇಶಕರಾದ ಡಾ.ಕವಿತಾ ಕೆ.ಆರ್ ಭಾಗವಹಿಸಲಿದ್ದಾರೆ. ಇವರೊಂದಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ.ಶ್ರೀಪತಿ ಕಲ್ಲೂರಾಯ ಹಾಗೂ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಭಾಗವಹಿಸಲಿದ್ದಾರೆ. 

 

 ರ‍್ಯಾಂಕ್ ಪ್ರಧಾನ ಕಾರ್ಯಕ್ರಮ

 

ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯವು 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಒಟ್ಟು ಎಂಟು ರ‍್ಯಾಂಕ್ಗಳನ್ನು ಘೋಷಿಸಿದೆ. ಬಿ. ವಿಭಾಗದಲ್ಲಿ ವೈಷ್ಣವಿ ಶೆಟ್ಟಿ (98.62%) ಪ್ರಥಮ ರ‍್ಯಾಂಕ್, ಬಿಎಸ್ಸಿ ವಿಭಾಗದಲ್ಲಿ ಧನ್ಯಶ್ರೀ ಸಿ.ಡಿ (96.17%) ಪ್ರಥಮ ರ‍್ಯಾಂಕ್, ಬಿಬಿಎ ವಿಭಾಗದಲ್ಲಿ ತನಿಷಾ ಬಿ (93.37%) ಪ್ರಥಮ ರ‍್ಯಾಂಕ್, ಬಿಕಾಂ ವಿಭಾಗದಲ್ಲಿ ಪ್ರಜ್ಞಾ ಕೆ. (96.65%) ಪ್ರಥಮ ರ‍್ಯಾಂಕ್  ಹಾಗೂ ಅಮೃತಾ (96.51%) ದ್ವಿತೀಯ, ಬಿಸಿಎ ವಿಭಾಗದಲ್ಲಿ ಚೈತ್ರಾ ಯು.ಎಂ (96.29%) ಪ್ರಥಮ ರ‍್ಯಾಂಕ್, ಮೇಘನಾ (95.82%) ದ್ವಿತೀಯ ರ‍್ಯಾಂಕ್ ಹಾಗೂ ದೀಕ್ಷಾ ಬಿ (94.22%) ತೃತೀಯ ರ‍್ಯಾಂಕ್ಗಳನ್ನು ಪಡೆದಿರುತ್ತಾರೆ.  ಸ್ನಾತಕೋತ್ತರ ಪದವಿಯಲ್ಲಿ  2023-24 ಸಾಲಿನಲ್ಲಿ ಒಟ್ಟು ನಾಲ್ಕು ರ‍್ಯಾಂಕ್ ಲಭಿಸಿದ್ದು ಎಂಕಾಂ ವಿಭಾಗದಲ್ಲಿ ಧನ್ಯಾಶ್ರೀ (9.03 ಸಿಜಿಪಿಎ) ಪ್ರಥಮ ರ‍್ಯಾಂಕ್, ಎಂಎಸ್ಸಿ ರಸಾಯನ ಶಾಸ್ತ್ರ ದಲ್ಲಿ ವಂದನಾ ಎಸ್.ಎಂ (8.01 ಸಿಜಿಪಿಎ)  ಪ್ರಥಮ ರ‍್ಯಾಂಕ್, ಎಂಎಸ್ಸಿ ಗಣಿತಶಾಸ್ತ್ರ ವಿಭಾಗದಲ್ಲಿ ವಿದ್ಯಾ ವಿ (7.05 ಸಿಜಿಪಿಎ) ಪ್ರಥಮ ರ‍್ಯಾಂಕ್  ಹಾಗೂ ಜೆಎಂಸಿ ವಿಭಾಗದಲ್ಲಿ ಲಾವಣ್ಯ ಎಸ್ (8.66 ಸಿಜಿಪಿಎ) ಪ್ರಥಮ ರ‍್ಯಾಂಕ್ ಗಳಿಸಿರುತ್ತಾರೆ2024-25ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಒಟ್ಟು ಮೂರು ರ‍್ಯಾಂಕ್ಗಳು ಲಭಿಸಿದ್ದು ಎಂಕಾಂ ವಿಭಾಗದಲ್ಲಿ ಲಾವಣ್ಯ ಕೆ (8.82 ಸಿಜಿಪಿಎ) ಪ್ರಥಮ ರ‍್ಯಾಂಕ್, ಎಂಎಸ್ಸಿ ರಸಾಯನಶಾಸ್ತ್ರದಲ್ಲಿ ಮನಸ್ವಿ ಪಿ (7.57 ಸಿಜಿಪಿಎ) ಪ್ರಥಮ ರ‍್ಯಾಂಕ್ ಹಾಗೂ ಜೆಎಂಸಿಯಲ್ಲಿ ಸುಲಕ್ಷಣಾ ಕೆ (8.22 ಸಿಜಿಪಿಎ) ಪ್ರಥಮ ರ‍್ಯಾಂಕ್ ಪಡೆದುಕೊಂಡಿರುತ್ತಾರೆ.

 

ರ‍್ಯಾಂಕ್  ವಿಜೇತರಿಗೆ  ಕಾಲೇಜಿನಲ್ಲಿ ನಡೆಯಲಿರುವ ಸಪ್ತಪರ್ಣೋತ್ಸವ  ಪ್ರಥಮ ಪದವಿ ಪ್ರದಾನ ಸಮಾರಂಭದಲ್ಲಿ ರ‍್ಯಾಂಕ್ ಪ್ರಮಾಣ ಪತ್ರವನ್ನು ಪ್ರದಾನ ಹಾಗೂ ದತ್ತಿ ನಿಧಿ ಮತ್ತು ಪ್ರಾವೀಣ್ಯತಾ ಬಹುಮಾನಗಳ ಪ್ರಧಾನ ಕಾರ್ಯಕ್ರಮವೂ ಸಂದರ್ಭದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಮತ್ತು ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ ಎಚ್.ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

Post a Comment

0 Comments
Post a Comment (0)
To Top