ಸುರತ್ಕಲ್: ಶೈಕ್ಷಣಿಕ ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳು ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡರೆ ಭವಿಷ್ಯಕ್ಕೆ ಅಗತ್ಯವಿರುವ ಅನುಭವಗಳು ಲಭ್ಯವಾಗುತ್ತದೆ. ಮಹಾತ್ಮರ ಮಾತಿನಂತೆ ಸಕರಾತ್ಮಕ ಕನಸುಗಳನ್ನು ಕಟ್ಟಿಕೊಂಡು ಅವುಗಳನ್ನು ಕಠಿಣ ಪರಿಶ್ರಮದ ಮೂಲಕ ನನಸಾಗಿಸಬೇಕು ಎಂದು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇದರ ಸಹಾಯಕ ನಿದೇರ್ಶಕ ಡಾ. ರವಿಪ್ರಕಾಶ್ ವೈ. ನುಡಿದರು.
ಅವರು ಸುರತ್ಕಲ್ ಹಿಂದು ವಿದ್ಯಾದಾಯಿನೀ ಸಂಘ (ರಿ)ಯ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು, ಸುರತ್ಕಲ್‍ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಎಸ್. ಹತ್ವಾರ್ ಮಾತನಾಡಿ ಕಾಲೇಜಿನ ಕಾರ್ಯಚಟುವಟಿಕೆಗಳು ಪ್ರಶಂಸನೀಯವಾಗಿದ್ದು ವಿದ್ಯಾರ್ಥಿಗಳು ಕಾಲೇಜಿನ ಘನತೆಯನ್ನು ಹೆಚ್ಚಿಸುವಂತಹ ಸಾಧನೆಗಳು ಸಾಧಿಸಬೇಕೆಂದರು.
2024-2025ರ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ನಡೆಸಿದ ಪದವಿ ಪರೀಕ್ಷೆಯಲ್ಲಿ ಬಿ.ಎ. ವಿಭಾಗದಲ್ಲಿ ದ್ವಿತೀಯ ರ್ಯಾಂಕ್ ಗಳಿಸಿದ ಸ್ಮಿತಾಸಿ., ಬಿ.ಎಸ್ಸಿ. ವಿಭಾಗದಲ್ಲಿ ತೃತೀಯ ರ್ಯಾಂಕ್ ಗಳಿಸಿದ ದಿಯಾ ರವಿ ಹೊನ್ನಿ ಮತ್ತು ಬಿ.ಕಾಂ. ವಿಭಾಗದಲ್ಲಿ ಒಂಬತ್ತನೇ ರ್ಯಾಂಕ್ ಗಳಿಸಿದ ಹÀರ್ಷಿತಾ ಹರೀಶ್ ಭಂಡಾರಿ ಅವರನ್ನು ಅಭಿನಂದಿಸಲಾಯಿತು.
ಎನ್.ಸಿ.ಸಿ.ಯಲ್ಲಿ ಕ್ಯಾಪ್ಟನ್ ಪದವಿಯಿಂದ ಮೇಜರ್ ಪದವಿಗೆ ಪದೋನ್ನತಿ ಹೊಂದಿದ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಡಾ. ಮೇಜರ್ ಸುಧಾ ಯು., ಪಿ.ಹೆಚ್‍ಡಿ. ಪದವಿ ಪಡೆದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಡಾ. ಭಾರತಿ ಅವರನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ನೆರವು ನೀಡಿದ ಪ್ರೀತಿ ಅಮೀನ್ ದೇರೆಬೈಲ್ ಮತ್ತು ಕಾಲೇಜಿನ ಯಕ್ಷಗಾನ ತರಬೇತುದಾರೆ, 2025ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಪೂರ್ಣಿಮಾ ಯತೀಶ್ ರೈ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಭಟ್ ಎಸ್.ಜಿ. ಸ್ವಾಗತಿಸಿದರು. ಪ್ರಾಂಶುಪಾಲ ಪ್ರೊ. ಹರೀಶ ಆಚಾರ್ಯ ಪಿ. ವಾರ್ಷಿಕ ವರದಿಯನ್ನು ವಾಚಿಸಿದರು.
ಉಪಪ್ರಾಂಶುಪಾಲ ಪ್ರೊ. ನೀಲಪ್ಪ ವಿ. ದಾನಿಗಳ ಪಟ್ಟಿಯನ್ನು ವಾಚಿಸಿದರು.
ಗ್ರಂಥಪಾಲೆ ಡಾ. ಸುಜಾತ ಬಿ. ರ್ಯಾಂಕ್ ವಿಜೇತರ ಪಟ್ಟಿಯನ್ನು, ಉಪನ್ಯಾಸಕರಾದ ದಯಾ ಸುವರ್ಣ ಮತ್ತು ಡಾ. ವಿಜಯಲಕ್ಷ್ಮೀ ಸನ್ಮಾನಿತರ ಪಟ್ಟಿಯನ್ನು ವಾಚಿಸಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯ ಪ್ರವೀಣ್ ಕೆ., ಉಪನ್ಯಾಸಕರಾದ ಡಾ. ಭಾಗ್ಯಲಕ್ಷ್ಮೀ ಎಂ., ಡಾ. ಆಶಾ, ಡಾ. ಆಶಾಲತಾ ಪಿ. ಶೈಲಜಾ ಪ್ರವೀಣ್, ಡಾ. ಶ್ರೀದೇವಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಶಾಂತ್ ಎಂ.ಡಿ. , ಕಛೇರಿ ಅಧೀಕ್ಷಕ ವೆಂಕಪ್ಪ ಮೂಲ್ಯ ಎಂ., ಬಹುಮಾನ ವಿಜೇತರ ಪಟ್ಟಿಗಳನ್ನು ಓದಿದರು.
ಹಿಂದು ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ ಹೆಚ್., ಜೊತೆ ಕಾರ್ಯದರ್ಶಿ ಎಂ. ಜಿ. ರಾಮಚಂದ್ರ, ಸದಸ್ಯ ಪ್ರಸಿದ್ಧ ಪಿ., ಆಡಳಿತಾಧಿಕಾರಿ ಮೃದುಲಾ ಬಿನು, ಮಾಜಿ ಕಾರ್ಯದರ್ಶಿ ಎಂ. ವೆಂಕಟ್ರಾವ್, ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಧನ್ಯ ಕುಮಾರ್ ವೆಂಕಣ್ಣವರ್, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಗಣೇಶ ಆಚಾರ್ಯ ಬಿ., ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಕಾರ್ತಿಕ್ ಜೆ.ಎಸ್., ವಿದ್ಯಾರ್ಥಿ ಸೆನೆಟ್‍ನ ಪದಾಧಿಕಾರಿಗಳು, ಲಲಿತಕಲಾ ಸಂಘದ ಪದಾಧಿಕಾರಿಗಳು, ವಿದ್ಯಾದಾಯಿನೀ ಪ್ರೌಢಶಾಲೆಯ ಸಂಚಾಲಕ ಸುಧಾಕರ್ ರಾವ್ ಪೇಜಾವರ, ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಧ್ಯಾಯ ಶಿವಕುಮಾರ್, ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಕೃಷ್ಣ ಜೋಯಿಸ, ಡಾ. ಕೆ. ಶಿವಶಂಕರ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


