- ನೆಲ್ಲಿಕಟ್ಟೆ - ಬಪ್ಪಳಿಗೆ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ. 100 ಫಲಿತಾಂಶ
- ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಸಾಧನೆಗೆ ಇನ್ನೊಂದು ಗರಿ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ಕಾಲೇಜು ಹಾಗೂ ಬಪ್ಪಳಿಗೆ ವಸತಿಯುತ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳು 2025-26 ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ. 100 ಫಲಿತಾಂಶ ದಾಖಲಿಸಿದೆ. ನೆಲ್ಲಿಕಟ್ಟೆಯ ವಾಣಿಜ್ಯ ವಿಭಾಗ ಶೇ.100 ಫಲಿತಾಂಶವನ್ನು ದಾಖಲಿಸಿ ಸಾಧನೆ ಮೆರೆದಿದೆ. ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಇಂದಿರಾ ನಗರ ಬೆಳ್ಳಾರೆ ನಿವಾಸಿ ರವೀಂದ್ರನಾಥ್ ಹಾಗೂ ಸುಗುಣ ಎ. ರವರ ಪುತ್ರಿ ಶಾರ್ವರೀ ಆರ್. ಎಸ್. 600 ರಲ್ಲಿ 597 ಅಂಕವನ್ನು ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ರಾಂಕ್ ಗಳಿಸಿದ್ದಾರೆ. ನಂದಿಲ ಹೌಸ್ ಹಾರಾಡಿ ನಿವಾಸಿ ದಾಮೋದರ ಎನ್. ಹಾಗು ನವೀನಾ ಕುಮಾರಿ ಕೆ.ಎಸ್. ರವರ ಪುತ್ರ ತ್ರಿಶೂಲ್ ಎನ್.ಡಿ. 594 ಅಂಕವನ್ನು ಪಡೆಯುವ ಮೂಲಕ ರಾಜ್ಯಕ್ಕೆ ಐದನೇ ರಾಂಕ್ ಪಡೆದಿದ್ದಾರೆ. ಬಪ್ಪಳಿಗೆ, ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯ 2025-26ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶವನ್ನು ದಾಖಲಿಸಿದೆ. ವಿಜ್ಞಾನ ವಿಭಾಗದಲ್ಲಿ ಕಡಬ ತಾಲೂಕಿನ ಅಲಂಕಾರು ನಿವಾಸಿ ರಾಜಶೇಖರ್ ಹಾಗೂ ಕೆ. ಗೀತಾ ರವರ ಪುತ್ರ ಗಗನ್ ಕೆ.ಆರ್. 600 ರಲ್ಲಿ 594 ಅಂಕವನ್ನು ಪಡೆಯುವ ಮೂಲಕ ರಾಜ್ಯಕ್ಕೆ ಐದನೇ ರಾಂಕ್ ಗಳಿಸಿದ್ದಾರೆ.
ನೆಲ್ಲಿಕಟ್ಟೆ ಪಿ.ಯು. ಕಾಲೇಜು:
ನೆಲ್ಲಿಕಟ್ಟೆ ಪದವಿಪೂರ್ವ ಕಾಲೇಜಿನಿಂದ 2025-26ರ ಪರೀಕ್ಷೆಗೆ ಹಾಜರಾದ ಒಟ್ಟು 231 ವಿದ್ಯಾರ್ಥಿಗಳಲ್ಲಿ 173 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗು 58 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ಕಾಲೇಜು ಶೇಕಡಾ 100 ಫಲಿತಾಂಶ ದಾಖಲಿಸಿದೆ.
ವಾಣಿಜ್ಯ ವಿಭಾಗದಲ್ಲಿ ಶೆಣೈ ಕಂಪೌಂಡ್ ಮುಖ್ಯ ರಸ್ತೆ ಪುತ್ತೂರು ನಿವಾಸಿ ಎಮ್. ನರಸಿಂಹ ಶೆಣೈ ಹಾಗೂ ಶ್ರೀಲಕ್ಷ್ಮೀ ಎನ್. ಶೆಣೈ ರವರ ಪುತ್ರಿ ಪ್ರತೀಕ್ಷಾ ಶೆಣೈ 600 ರಲ್ಲಿ 594 ಅಂಕ ಪಡೆದರೆ, ವಿಟ್ಲದ ವನಭೋಜನ ನಿವಾಸಿ ಸೌಮ್ಯರಾಜ್ ವಿ. ಹಾಗೂ ಹೇಮಲತಾ ವಿ. ದಂಪತಿ ಪುತ್ರಿ ಅನನ್ಯಾ ವಿ. 593 ಅಂಕ ಪಡೆದು ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು 37 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 6 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇಕಡಾ 100 ಫಲಿತಾಂಶವನ್ನು ದಾಖಲಿಸುವುದರ ಮೂಲಕ ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ.
ಬಪ್ಪಳಿಗೆ ವಸತಿಯುತ ಪಿಯು ಕಾಲೇಜು:
ಬಪ್ಪಳಿಗೆ ಅಂಬಿಕಾ ವಸತಿಯುತ ಪಿಯು ಕಾಲೇಜಿಂದ 2025-26ರ ಪರೀಕ್ಷೆಗೆ ಹಾಜರಾದ ಒಟ್ಟು 216 ವಿದ್ಯಾರ್ಥಿಗಳಲ್ಲಿ 159 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗು 56 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ. 100 ಫಲಿತಾಂಶ ದಾಖಲಿಸಿದೆ. ಬೆಂಗಳೂರಿನ ಅನಂತ ಪದ್ಮನಾಭ ಶರ್ಮ ಹಾಗು ರೇಷ್ಮ ಅನಂತ ಶರ್ಮರವರ ಪುತ್ರ ಅಖಿಲೇಶ್ ಅನಂತ ಶರ್ಮ 591 ಮತ್ತು ಪುತ್ತೂರಿನ ಕುಂಬ್ರ ನಿವಾಸಿ ನಾರಾಯಣ ಪೂಜಾರಿ ಮತ್ತು ದಿವ್ಯ. ಎನ್.ರವರ ಪುತ್ರಿ ಸನ್ನಿಧಿ 591 ಅಂಕವನ್ನು ಪಡೆದಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


