ಆಳ್ವಾಸ್ ಸಿಬಿಎಸ್‌ಇ ಫಲಿತಾಂಶ 2026: ಆಳ್ವಾಸ್‌ನ 46 ವಿದ್ಯಾರ್ಥಿಗಳು 95% ಕ್ಕೂ ಹೆಚ್ಚು ಅಂಕದ ಸಾಧನೆ

Upayuktha
0

116 ವಿದ್ಯಾರ್ಥಿಗಳಿಗೆ  90% ಕ್ಕಿಂತ ಅಧಿಕ ಅಂಕಗಳು




ಮೂಡುಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಈ ಬಾರಿಯ ಹತ್ತನೆ ತರಗತಿಯ ಫಲಿತಾಂಶ ಪ್ರಕಟಿಸಿದ್ದು ಸತತ ಆರನೇ ವರ್ಷ ಆಳ್ವಾಸ್ ಶಾಲೆಯು 100% ಫಲಿತಾಂಶ ದಾಖಲಿಸಿದೆ.


ಆಳ್ವಾಸ್ ಶಾಲೆಯ 46 ವಿದ್ಯಾರ್ಥಿಗಳು 95%ಕ್ಕಿಂತ ಹೆಚ್ಚು ಅಂಕ ಪಡೆಯುವ ಮೂಲಕ ಶ್ರೇಷ್ಠ ಸಾಧನೆ ಮೆರೆದಿದ್ದಾರೆ. ಕರ್ನಾಟಕದಒಂದು ಶಾಲೆಯಿಂದ 95 ಶೇಕಡಾಕ್ಕಿಂತ ಹೆಚ್ಚು  ಅಂಕ ಪಡೆದವರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಳ್ವಾಸ್ ಪ್ರಥಮ ಸ್ಥಾನ ಪಡೆದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.



ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಅವರು, ಅನಘಾ ಉಮೇಶ್‌ರಾವ್(99.2%), ಪ್ರಮತ್ ಔರಾದ್ಕರ್ (99%), ಆದ್ಯಾ ಭಟ್ (99%), ಅನುರಾಧ(99%), ವಾತ್ಸಲ್ಯ ಎನ್ (98%), ಧನ್ವಿತ್ ಪಿಬಿ(97.2%), ನಮ್ರತಾ(97.2%), ಮನೋಘ್ನ(97%), ಶ್ವೇತಾ(97%), ಶಿವಾನಿ ಜಿಎ(97%), ವಾಘ್ಮಿ ಪ್ರಶಾಂತ್ (97%), ಅವನಿ ಪಿ ಶೆಟ್ಟಿ (97%), ವಿಭಾಸ್(97%), ಯಕ್ಷಿತಾ (96.4%), ಸೃಜನ್(96.4%), ಗೌತಮ್ (96.4%), ಪ್ರತೀಕ್ಷಾ ಕೆ ಎಂ(96.4%), ಸಾನ್ವಿ( 96.4%), ಜನಿತ್ (96.2%), ಭಾರ್ಗವ್ (96%), ಜಶ್ಮಿತಾ(96%), ಐಶ್ರೀ ಶೆಟ್ಟಿ (96%), ಆದಿಲ್ (96%), ಧೃತಿ (96%), ನಿಶ್ಚಲ್ (96%),  ಹಿತೈಶಿ (96%), ಪ್ರಥಮ್ (96%), ಆದ್ರಿತ್(95.4%), ಸುಮಿತ್( 95.2%), ಐಶಾನಿ(95.2%), ಭೃತಿ(95%), ಪೂರ್ವಿಕ್ (95%), ತರುಂಜನ್(95%), ಸಾಯಿದೀಕ್ಷಾ(95%), ಅಂಜನಾತನಯ್(95%), ಗ್ಲೋರಿ ಪ್ರಕಾಶ್(95%), ಅಂಜನಿ(95%), ದಿವ್ಯಾ(95%), ಧನ್ಯಾ(95%), ನಿಶಾ(95%), ಅಧ್ವಿತಿ(95%), ಯಶಶ್ವಿ (95%), ಸಂಜನಾ(95%), ಹರ್ಷವರ್ಧನ್ (95%) ರೋಹಿತ್(95%), ಸಿದ್ಧಾರ್ಥ(95%) ಅಂಕಗಳನ್ನು ಪಡೆಯುವುದರ ಮೂಲಕ ಸಾಧನೆ ಮೆರೆದಿದ್ದಾರೆ.



116 ವಿದ್ಯಾರ್ಥಿಗಳು 90% ಗಿಂತ ಹೆಚ್ಚು ಅಂಕ ಗಳಿಸಿದರೆ, 185 ವಿದ್ಯಾರ್ಥಿಗಳು 85%,  ಹಾಗೂ225 ವಿದ್ಯಾರ್ಥಿಗಳು 80%ಕ್ಕಿಂತ ಅಧಿಕಅಂಕವನ್ನು ಗಳಿಸಿದ್ದಾರೆ.

ಸಂಸ್ಕೃತದಲ್ಲಿ 7 ವಿದ್ಯಾರ್ಥಿಗಳು, ಹಿಂದಿಯಲ್ಲಿ 4 ವಿದ್ಯಾರ್ಥಿಗಳು, ಸಮಾಜ ವಿಜ್ಞಾನದಲ್ಲಿ -3, ಕನ್ನಡದಲ್ಲಿ-3, ವಿಜ್ಞಾನ ಹಾಗೂ ಇಂಗ್ಲೀಷ್‌ನಲ್ಲಿ ತಲಾ ಒರ್ವ ವಿದ್ಯಾರ್ಥಿ ಶೇಕಡಾ100 ಅಂಕ ಪಡೆದಿದ್ದಾರೆ. ಇವುಗಳ ಜೊತೆಯಲ್ಲಿ ಐಟಿ ವಿಷಯದಲ್ಲಿ 17 ವಿದ್ಯಾಥಿಗಳು ಶೇಕಡಾ 100 ಅಂಕ ಗಳಿಸಿದ್ದಾರೆ.



ವಿಷಯವಾರು ಅಂಕಗಳಲ್ಲಿ, 36 ವಿದ್ಯಾರ್ಥಿಗಳು 100%,  69 ವಿದ್ಯಾರ್ಥಿಗಳು 99% ಅಂಕ, 117 ವಿದ್ಯಾರ್ಥಿಗಳು 98%, 175 ವಿದ್ಯಾರ್ಥಿಗಳು 97%, 255 ವಿದ್ಯಾರ್ಥಿಗಳು 96%, 335 ವಿದ್ಯಾಥಿಗಳು 95% ಅಂಕಗಳಿಸಿದ್ದಾರೆ.




 ಜಗತ್ತಿನಾದ್ಯಂತ 95%ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು 2.24 ಶೇಕಡಾವಾರು ಆದರೆ, ಆಳ್ವಾಸ್‌ನಲ್ಲಿ 10.33% ವಿದ್ಯಾರ್ಥಿಗಳು ಈ ಸಾಧನೆ ಮೆರೆದಿದ್ದಾರೆ, ಅಂತೆಯೇ ರಾಷ್ಟ್ರಮಟ್ಟದಲ್ಲಿ 90 ಶೇಕಡಾಕ್ಕಿಂತ ಅಧಿಕ 8.96% ಆದರೆ, ಆಳ್ವಾಸ್‌ನಲ್ಲಿ 26% ವಿದ್ಯಾರ್ಥಿಗಳು ಈ ಸಾಧನೆ ಮೆರೆದಿದ್ದಾರೆ.

 ವಿದ್ಯಾರ್ಥಿಗಳಿಗೆ ಪಿಯುಸಿ ಹಾಗೂ ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸುವ ಸಲುವಾಗಿ ಆಳ್ವಾಸ್ ಸಿಬಿಎಸ್‌ಇ ಶಾಲೆಯಲ್ಲಿ ಕಠಿಣವಾದ ಸ್ಟ್ಯಾಂಡರ್ಡ ಮ್ಯಾಥ್ಸ್ ವಿಷಯವನ್ನು ಇತರ ವಿಷಯಗಳೊಂದಿಗೆ ಬೋಧಿಸಲಾಗುತ್ತಿದ್ದು, ಈ ವಿಷಯ ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆ ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ಬೆಳೆಸುತ್ತದೆ.


ಪತ್ರಿಕಾಗೋಷ್ಠಿಯಲ್ಲಿ ಆಡಳಿತಾಧಿಕಾರಿ ಪ್ರೀತಂ ಕುಂದರ್, ಆಳ್ವಾಸ್ ಸಿ.ಬಿ.ಎಸ್.ಇ ಶಾಲೆಯ ಮುಖ್ಯಶಿಕ್ಷಕ ಮೊಹಮ್ಮದ್ ಶಫಿ ಶೇಖ್ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top