ಅಬ್ಬಕ್ಕ @500 ನೆನಪಿನೈಸಿರಿ ಸಂಚಿಕೆ ಲೋಕಾರ್ಪಣೆ

Upayuktha
0


ಉಳ್ಳಾಲ: ಪೋರ್ಚುಗೀಸರನ್ನು ಕೆಚ್ಚೆದೆಯಿಂದ ಹಿಮ್ಮೆಟ್ಟಿಸಿದ್ದ ವೀರರಾಣಿ ಅಬ್ಬಕ್ಕಳು ಈಗಲೂ ನಮಗೆ ಅಪರಿಚಿತರಾಗಿದ್ದು, ಇತಿಹಾಸದ ಪುಟಗಳಲ್ಲಿ ಆಕೆಗೆ ಸಿಗುವ ಸ್ಥಾನಮಾನ ಇನ್ನೂ ಸಿಕ್ಕಿಲ್ಲ. ದೇಶಕ್ಕಾಗಿ ನರಕಯಾತನೆ ಅನುಭವಿಸಿ ಜೀವ ಕೊಟ್ಟಿರುವ ಅದೆಷ್ಟೋ ಹೋರಾಟಗಾರರನ್ನು ನಮ್ಮ ಇತಿಹಾಸವು ಕಡೆಗಣಿಸಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್ ಜಿ. ಅವರು ವಿಷಾದ ವ್ಯಕ್ತಪಡಿಸಿದರು.


ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ ಹಾಗೂ ನಿರ್ಮಲ ಭಾರತ್ ಚಾರಿಟೆಬಲ್ ಟ್ರಸ್ಟ್ ಮಂಗಳೂರು ಇದರ ಸಹಯೋಗದೊಂದಿಗೆ ಉಳ್ಳಾಲ ಶಾರದನಿಕೇತನ ಸಭಾಂಗಣದ ಚನ್ನ ಮರಕಾಲ ವೇದಿಕೆಯಲ್ಲಿ ನಡೆದ ಅಬ್ಬಕ್ಕ-500 ಪ್ರೇರಣಾದಾಯಿ ಉಪನ್ಯಾಸ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.


ಕರಾವಳಿಯ ಜನತೆಗೆ ಗೊತ್ತಿಲ್ಲದ್ದ ಅಬ್ಬಕ್ಕಳ ಚರಿತ್ರೆಯು, ರಾಜ್ಯ ಮತ್ತು ದೇಶಕ್ಕೆಗೊತ್ತಾಗೋದಾದರೂ ಹೇಗೆ.? ಮೊಗಲರು ಹಾಗೂ ಬ್ರಿಟೀಷರ ವಿರುದ್ದ ಹೋರಾಡಿದ ಕೆಲವರ ಹೆಸರನ್ನು ನಾವು ಕೇಳಿದ್ದೇವೆ. ಆದರೆ ಪೋರ್ಚುಗೀಸರ ವಿರುದ್ಧ ಹೋರಾಡಿದವರ ಹೆಸರು ನಮ್ಮ ಇತಿಹಾಸದಲ್ಲೇ ಇಲ್ಲ. ಆ ದೃಷ್ಟಿಯಿಂದ ಪೋರ್ಚುಗೀಸರ ವಿರುದ್ಧ ಹೋರಾಡಿದ ಅಬ್ಬಕ್ಕಳ ಹೆಸರು ಅತ್ಯಂತ ಮಹತ್ವದಾಗಿದ್ದು, ಆಕೆ ನಮ್ಮ ಕರಾವಳಿಯವಳು ಎಂಬುದು ನಮಗೆಲ್ಲರಿಗೂ ಅಭಿಮಾನದ ವಿಚಾರವಾಗಿದೆ ಎಂದರು.


ಕಾರ್ಯಕ್ರಮ ಉದ್ಘಾಟಿಸಿದ ಧರ್ಮಸ್ಥಳದ ಅಬ್ಬಕ್ಕ ವಂಶಸ್ಥರಾದ ಅನಿತಾ ಸುರೇಂದ್ರ ಕುಮಾ‌ರ್ ಮಾತನಾಡಿ, ಕಳೆದ ಒಂದು ವರುಷದಿಂದ 'ಅಬ್ಬಕ್ಕ-500' ಸರಣಿ ಕಾರ್ಯಕ್ರಮದಡಿ ಅಬ್ಬಕ್ಕಳ ನೆನಪುಗಳನ್ನು ಮೆಲುಕು ಹಾಕಿ ಅವಳ ಶೌರ್ಯ ಸಾಧನೆಯ ಬಗ್ಗೆ ಜಗತ್ತಿಗೆ ತಿಳಿಯಪಡಿಸುವ ಕಾರ್ಯವನ್ನು ನಡೆಸಿರುವುದು ಶ್ಲಾಘನೀಯ. ರಾಣಿ ಅಬ್ಬಕ್ಕಳ ನೆನಪು ಜನರಲ್ಲಿ ಸದಾ ಉಳಿಯುವಂತೆ ಮಾಡಲು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದರು.


ಇದೇ ವೇಳೆ ವೇದಿಕೆಯಲ್ಲಿ ಅಬ್ಬಕ್ಕ -500ರ ಸಂಭ್ರಮದಲ್ಲಿ ನೆನಪಿನೈಸಿರಿ ಸಂಚಿಕೆಯನ್ನು ಮಾಡಲಾಯಿತು. ಲೋಕಾರ್ಪಣೆ ಮಾಡಲಾಯಿತು. 


ಕಾರ್ಯಕ್ರಮದಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿ ಬಂಟ್ವಾಳ ಇಲ್ಲಿನ ಸಂಸ್ಥಾಪಕರಾದ ಡಾ. ತುಕಾರಾಮ ಪೂಜಾರಿ ಹಾಗೂ ಡಾ.ಆಶಾಲತಾ ಎಸ್ ಸುವರ್ಣ ಇವರಿಗೆ ಗೌರವ ಸನ್ಮಾನ ಮಾಡಲಾಯಿತು. 


ಕಾರ್ಯಕ್ರಮದಲ್ಲಿ ವೀರರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತ ಗುರು ರಾಜಶ್ರೀ ಉಳ್ಳಾಲ್ ನಾಟ್ಯನಿಕೇತನ ಕೊಲ್ಯಾ ಇವರ ಶಿಷ್ಯ ವೃಂದದಿಂದ ನೃತ್ಯ ಮೋಹನ ಹಾಗೂ ವೀರರಾಣಿ ಅಬ್ಬಕ್ಕ ಕಿರು ನೃತ್ಯ ರೂಪಕ ಪ್ರಸ್ತುತ ಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಇಲ್ಲಿನ ಅಧ್ಯಕ್ಷರಾದ ಶ್ರೀ ಜಯ ಸಿ ಕೋಟ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೇಣೂರು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಪ್ರವೀಣ್ ಕುಮಾರ್ ಇಂದ್ರ, ಹೊಸದಿಗಂತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪಿ ಎಸ್ ಪ್ರಕಾಶ್, ಕೆ ಆರ್ ಎಂ ಎಸ್ ಎಸ್ ರಾಜ್ಯಾಧ್ಯಕ್ಷರಾದ ಡಾ. ಗುರುನಾಥ ಬಡಿಗೇರ್, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಂದೀಪ್ ಬೂದಿಹಾಳ್, ನಿರ್ಮಲ ಭಾರತ್ ಚಾರಿಟಬಲ್ ಟ್ರಸ್ಟ್ ಮಂಗಳೂರು ಇದರ ವಿಶ್ವಸ್ಥರಾದ ಶ್ರೀ ಕೆ ರಮೇಶ್ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾಕ್ಟರ್ ಮಾಧವ ಎಂ ಕೆ ಪ್ರಸ್ತಾವಿಸಿ ಸ್ವಾಗತಿಸಿದರು, ಡಾ ಸುಧಾ ಎನ್ ವೈದ್ಯ ನಿರೂಪಿಸಿದರು. ಡಾ ಸುಧಾ ಯು ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top