ಮಂಗಳೂರು: "ಕಲಿಯುಗದ ಪರಮ ವೀರ ಮಂತ್ರವೇ ದೇವರನ್ನು ಒಲಿಸಿಕೊಳ್ಳುವ ದಾರಿ ಹರಿಕಥಾ ಸಂಕೀರ್ತನೆಯೇ ಆಗಿದೆ. ಈಗಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಸಜ್ಜನರು ಹೆಚ್ಚು ಹೆಚ್ಚು ಗೊಂದಲಗಳಿಂದ ಪಾರಾಗಲು ದೇವಭಕ್ತಿಯನ್ನು ವೃದ್ಧಿಗೊಳಿಸಿದ್ದಾರೆ. ಈ ಮೂಲಕ ನಾವೂ ದೇವರ ಮಹಿಮೆಯನ್ನು ವಿವರಿಸುತ್ತಾ ಮಂದಿಗಳು ಭಕ್ತಿ ಪ್ರವಾಹದೊಂದಿಗೇ ಸಾಗಲು ಪ್ರೇರೇಪಿಸುತ್ತೇವೆ. ಕಥೆ- ಉಪಕಥೆಗಳು ಜೀವನ ಪಥವನ್ನು ಬೇಕಾದಂತೆ ಬದಲಾಯಿಸಿಕೊಳ್ಳಲು ಅನುಕೂಲಿಸುತ್ತದೆ" ಎಂದು ಖ್ಯಾತ ಹರಿದಾಸರಾದ ಚಂದ್ರಕಾಂತ ಭಟ್ ಅಶ್ವಥಪುರ ನುಡಿದರು.
ಅವರು ಕೋಡಿಕಲ್‌ನ ವಿಪ್ರ ವೇದಿಕೆಯ ದಶಮಾನೋತ್ಸವ ಸಂಭ್ರಮ ಸರಣಿಯ ದಶಮ ಕಾರ್ಯಕ್ರಮದಲ್ಲಿ ಉಪನ್ಯಾಸವಿತ್ತರು. ವಿದ್ಯಾಗಣೇಶ್ ರಾವ್ ರವರು ಸ್ವಾಗತಿಸಿದರು. ನೈನಾ ಹರೀಶ್ ರಾವ್‌ರವರು ಕಲಾವಿದರನ್ನು ಪರಿಚಯಿಸಿದರು. ದುರ್ಗಾದಾಸ್ ಕಟೀಲ್ ರವರು ನಿರ್ವಹಿಸಿದರು.
ಸಂಸ್ಥಾಪಕರಲ್ಲೋರ್ವರಾದ ವಿಶ್ವ ಕುಮಾರ್ ಜೋಯಿಸ್, ಹಿರಿಯರಾದ ಜಯರಾಮ ಪದಕಣ್ಣಾಯ, ಪ್ರಭಾವತಿ ಮಡಿ ಹಾಗೂ ವೇದಿಕೆಯ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಿಶೋರ್ ಕೃಷ್ಣರವರು ಧನ್ಯವಾದವಿತ್ತರು. ಹರೀಶ್ ರಾವ್ ಬಾಳ, ಕೆ.ಗಿರೀಶ್ ರವರು ಕಲಾ ಗೌರವವನ್ನು ನಡೆಸಿಕೊಟ್ಟರು. ಬಳಿಕ ಚಂದ್ರಕಾಂತ ಭಟ್ ರವರಿಂದ" ಭಕ್ತ ಭೀಷ್ಮ" ಎಂಬ ಕಥಾ ಕಾಲಕ್ಷೇಪ ನಡೆಯಿತು. ಹಿಮ್ಮೇಳದಲ್ಲಿ ಹಾರ್ಮೋನಿಯಂ ನಲ್ಲಿ ರಮೇಶ ಹೆಬ್ಬಾರ್ ಹಾಗೂ ತಬಲಾದಲ್ಲಿ ಪ್ರದೀಪ ಉಪಾಧ್ಯಾಯ ಸಹಕರಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


