ಕಾನನದ ಹಸಿರಲಿ ಅಡಗಿದೆ ಒಂದು ನಾದ,
ಕೃಷ್ಣನ ಕೈಯಲಿ ಅಂದದ ಸಣ್ಣ ಪಾದ.
ನವಿಲು ಗರಿಯು ಮುಡಿಯಲ್ಲಿ ನಲಿವ ಗರಿ,
ಮನದ ನೋವನು ಮರೆಸುವ ಸುಂದರ ಪರಿ ll೦೧ll
ಕೊಳಲಿನ ರಂಧ್ರದಿ ಹರಿಯುವ ಗಾಳಿ ಹಾಡು,
ಮರೆಸುವುದು ಜಗದ ಈ ಕಠಿಣವದ ಬಾಡು.
ಸುತ್ತಲೂ ನೇತಾಡುವ ಮುತ್ತಿನ ಆ ಸರ,
ಭಕ್ತರ ಹೃದಯಕೆ ತರುವುದು ಎನಿತೋ ಹರ ll೦೨ll
ಮಧುರ ಧ್ವನಿಗೆ ಮಾರುಹೋದವು ಹಸುಗಳ ಹಿಂಡು,
ಮೂಡಿತು ಮನದಲಿ ಪ್ರೇಮದ ದೊಡ್ಡ ಗುಂಡು.
ಶ್ಯಾಮನ ಕೊಳಲು ಸದಾ ಇರಲಿ ನಮ್ಮ ಜೊತೆ,
ಬರೆಯಲಿ ಬದುಕಲಿ ಹೊಸದೊಂದು ಶುಭ ಕಥೆ ll೦೩ll
- ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


