ಉಡುಪಿ: ಸಾರ್ವಜನಿಕ ಸೇವಾಸಂಸ್ಥೆಗಳಲ್ಲಿ AI ಬಳಕೆಯಿಂದ ಹೇಗೆ ಸಮಯದ ಉಳಿತಾಯದೊಂದಿಗೆ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದಾಗಿ ಉಡುಪಿಯ ಕುಂಜಿಬೆಟ್ಟಿನ ವೈಕುಂಠಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಕಾರ್ಯಾಚರಿಸುತ್ತಿರುವ ಉಡುಪಿಯ ಮಾನವಹಕ್ಕು ರಕ್ಷಣಾ ಪ್ರತಿಷ್ಠಾನ ದ ಕಾರ್ಯಾಲಯದಲ್ಲಿ ಸ್ವಯಂ ಸೇವಕರಿಗೆ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ನಡೆಸಿಕೊಟ್ಟವರು ಗುವಾಹಟಿಯ ಇಂಜಿನಿಯರ್ ತನೋಯ್ ಇವರು, ಜರ್ಮನಿಯ ನಗರೋ ಕಂಪೆನಿಯ ಭಾರತದ ಪ್ರತಿನಿಧಿಯಾಗಿದ್ದು ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 13 ವರ್ಷಗಳಿಂದ ತನೋಯ್ ಅವರು ಪ್ರತಿಷ್ಠಾನದ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದು ಪ್ರತಿಷ್ಠಾನದ ಜಾಲತಾಣದ ರಚನಾ ಕಾರ್ಯದಲ್ಲಿಯೂ ಸಲಹಾಗಾರರಾಗಿದ್ದಾರೆ.
ಸಾಮಾಜಿಕ ಕಾರ್ಯದಲ್ಲಿ ಆಸಕ್ತರಾಗಿರುವ ಅವರು ಶುಕ್ರವಾರ ಬೆಳಿಗ್ಗೆ 10-00 ಗಂಟೆಯಿಂದ 12-30 ರ ವರೆಗೆ ಆಧುನಿಕ ಸಮಾಜದಲ್ಲಿ AI ತಾಂತ್ರಿಕತೆಯನ್ನು ನ್ಯಾಯವಾದಿಗಳು ಹೇಗೆ ಉಪಯೋಗಿಸಬಹುದು ಹಾಗೂ ಈ ತಾಂತ್ರಿಕತೆ ದುರುಪಯೋಗವಾಗದಂತೆ ತೆಗೆದುಕೊಳ್ಳಬೇಕಾದ ಜಾಗರೂಕತೆಯ ಕುರಿತು ಮಾಹಿತಿಗಳನ್ನು ಹಂಚಿಕೊಂಡರು. ಕಾರ್ಯಾಗಾರದಲ್ಲಿ ಮಾನವಹಕ್ಕು ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶಾನುಭಾಗ್ ಹಾಗೂ ಅವರ ಶಿಷ್ಯರು ಅಲ್ಲದೆ ಸಾಮಾಜಿಕ ಕಾರ್ಯಕರ್ತರಾದ ನಟೇಶ್, ಚೇತನ್, ಅನಿಲ್ ಮುಂತಾದವರು ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

