ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ)ದಲ್ಲಿ ಲೆಟೆಕ್ಸ್ ಕಾರ್ಯಾಗಾರ

Upayuktha
0


ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಇದರ ಗಣಿತ ವಿಭಾಗದ ವತಿಯಿಂದ “ಲೆಟೆಕ್ಸ್” ಕಾರ್ಯಾಗಾರವನ್ನು ಮಾರ್ಚ್ 14 ರಂದು ಆಯೋಜಿಸಲಾಯಿತು. ವಿದ್ಯಾರ್ಥಿಗಳಿಗೆ ಲೆಟೆಕ್ಸ್ ನ ಮೂಲಭೂತ ಪರಿಚಯ ಹಾಗೂ ವೃತ್ತಿಪರ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ಅದರ ಬಳಕೆಯನ್ನು ಪರಿಚಯಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.


ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ ಆಂಟನಿ ಪ್ರಕಾಶ್ ಮೊಂತೆರೋ ಅಧ್ಯಕ್ಷತೆ ವಹಿಸಿ ಮಾತನಾಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಲೆಟೆಕ್ಸ್ ನ ಮಹತ್ವವನ್ನು ವಿವರಿಸಿ, ವಿವಿಧ ವಿಷಯಗಳಲ್ಲಿ ವಿಶೇಷವಾಗಿ ದಾಖಲೆಗಳನ್ನು ಸರಿಯಾದ ಹಾಗೂ ವೃತ್ತಿಪರ ರೂಪದಲ್ಲಿ ಸಿದ್ಧಪಡಿಸಲು ಲೆಟೆಕ್ಸ್ ಉಪಯುಕ್ತವಾಗಿರುವುದನ್ನು ತಿಳಿಸಿ, ವಿದ್ಯಾರ್ಥಿಗಳಿಗಾಗಿ ಇಂತಹ ಕಾರ್ಯಾಗಾರವನ್ನು ಆಯೋಜಿಸಿರುವ ಗಣಿತ ವಿಭಾಗದ ಪ್ರಯತ್ನವನ್ನು ಅವರು ಶ್ಲಾಘಿಸಿದರು.


ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಾಮದಪದಾವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹೇಶ್ ಕೆ. ಬಿ. ಅವರು ಲೆಟೆಕ್ಸ್ ಕುರಿತು ಪರಿಚಯಾತ್ಮಕವಾಗಿ ಮಾತನಾಡಿ, ಲೆಟೆಕ್ಸ್ ಬಳಸಿ ಶೈಕ್ಷಣಿಕ ಹಾಗೂ ಸಂಶೋಧನಾ ಉದ್ದೇಶಗಳಿಗೆ ಸೂಕ್ತವಾದ, ಸುಸಂಘಟಿತ ದಾಖಲೆಗಳನ್ನು ಹೇಗೆ ಸಿದ್ಧಪಡಿಸಬಹುದು ಎಂಬುದನ್ನು ವಿವರಿಸಿ ಲೆಟೆಕ್ಸ್ ಅಪ್ಲಿಕೇಶನ್ ಅನ್ನು ಹೇಗೆ ಇನ್‌ಸ್ಟಾಲ್ ಮಾಡುವುದು ಹಾಗೂ ಗಣಿತೀಯ ಸಮೀಕರಣಗಳನ್ನು ಸ್ಪಷ್ಟವಾಗಿ ಮತ್ತು ವೃತ್ತಿಪರ ರೀತಿಯಲ್ಲಿ ಬರೆಯುವ ವಿಧಾನವನ್ನು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಲಾಟೆಕ್ಸ್ ಬಳಸಿ ಗ್ರಾಫ್‌ಗಳು ಮತ್ತು ಇತರ ಅಂಶಗಳನ್ನು ಸೃಷ್ಟಿಸಿ ದಾಖಲೆಗೆ ಸೇರಿಸುವ ವಿಧಾನವನ್ನೂ ಪ್ರದರ್ಶಿಸಿದರು.


ವೇದಿಕೆಯಲ್ಲಿ ಗಣಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ತನುಜಾ ಎನ್.ಪಿ. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿಂದೆ ನಡೆದ ಒರಿಗಾಮಿ ಕಾರ್ಯಾಗಾರಕ್ಕೆ ಸಂಬಂಧಿಸಿದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಜೇತರ ಸೃಜನಶೀಲತೆ ಮತ್ತು ಸಕ್ರಿಯ ಭಾಗವಹಿಸುವಿಕೆಯನ್ನು ಅಭಿನಂದಿಸಲಾಯಿತು.


ದ್ವಿತೀಯ ಬಿಎಸ್ಸಿಯ ಮನಸಾ ಮತ್ತು ತಂಡವು ಪ್ರಾರ್ಥನೆ ಸಲ್ಲಿಸಿ ತೃತೀಯ ಬಿಎಸ್ಸಿ ವಿದ್ಯಾರ್ಥಿನಿಯರಾದ ಗಾಯತ್ರಿ ಸ್ವಾಗತಿಸಿ, ತನುಶ್ರೀ ವಂದಿಸಿ, ಹರ್ಷಿತಾ ಫ್ರೀಸಿಯಾ ಲೋಬೋ ಕಾರ್ಯಕ್ರಮ ನಿರೂಪಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top