ಮಹಿಳೆ- ಒಂದು ಪರಿಪೂರ್ಣ ವ್ಯಕ್ತಿತ್ವ

Upayuktha
0


ಹಲೋ ಹೇಗಿದ್ದೀರಾ?

ಹೆಣ್ಣು ಎಂಬ್ಬ ಅಂಶದಲ್ಲಿಯೇ ಒಂದು ಅಪರಿಮಿತವಾದ ಶಕ್ತಿ ಇದೆ. ಮಹಿಳೆಗೆ ಜಗತ್ತನ್ನೇ ಬದಲಾಯಿಸುವ ಶಕ್ತಿ ಇದೆ. ಮಹಿಳೆ ಒಂದು ಕುಟುಂಬದ ತಳಹದಿ ಇದ್ದ ಹಾಗೆ. ತೊಟ್ಟಿಲ ತೂಗುವ ಕೈ, ಜಗತ್ತನ್ನೇ ತೂಗಬಲ್ಲದು ಎಂಬುದು ಕೇವಲ ಅತಿಶಯೋಕ್ತಿ ಮಾತ್ರವಲ್ಲ, ಅದು ನಿಜ ಕೂಡ.

ವೈಜ್ಞಾನಿಕ ಆಧಾರದ ಪ್ರಕಾರ, ಹೆಣ್ಣು ಮಕ್ಕಳು ಭಾಷೆಗಳನ್ನು ಕಲಿಯುವುದರಲ್ಲಿ ನಿಪುಣರು ಎಂದು ಹೇಳುತ್ತಾರೆ. ಹೆಣ್ಣು ಮಕ್ಕಳು ಧೀರ್ಘಾಯುಷಿಗಳು ಎಂದೂ ಸಹ ಹೇಳುತ್ತಾರೆ.


ಮಹಿಳೆ ಮನೆಯನ್ನು ಮತ್ತು ಉದ್ಯೋಗವನ್ನು ಸರಿಯಾಗಿ ಬ್ಯಾಲೆನ್ಸ್ ಮಾಡಿಕೊಂಡು ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾಳೆ.

ಹೊಲದಲ್ಲಿ ತಲೆಯ ಮೇಲೆ ಸೂರು ಇಟ್ಟುಕೊಂಡು ಕೆಲಸ ಮಾಡುವ ಮಹಿಳೆ ಯಾವ ಕಾರ್ಪೊರೇಟ್ ಉದ್ಯೋಗಿಗಿಂತ ಹೆಚ್ಚು ಪ್ರೊಡಕ್ಟಿವಿಟಿ ಹೊಂದಿರುತ್ತಾಳೆ.


ನಾವು ಎಷ್ಟೇ ತಂತ್ರಜ್ಞಾನ, ಆಧುನಿಕ ಕಾಲದಲ್ಲಿ ಬಾಳುತ್ತಿದ್ದರೂ, ಈಗಲೂ ಮಹಿಳೆಯೇ ಅಡುಗೆ ಮಾಡಲಿ ಎಂದೇ ಬಯಸುತ್ತೇವೆ. ನಮ್ಮ ಮನೋಧರ್ಮ ಇನ್ನೂ ಬದಲಾಗಿಲ್ಲ ಅನಿಸುತ್ತದೆ.


ನಾವು ನಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಸ್ಕೂಲಿಗೆ ಹಾಕಿ ಕಲಿಸಿದರೂ ಈಗಲೂ ಮಗಳಿಗೆ 18 ವರ್ಷ ಆದ ಕೂಡಲೇ ನಮಗೆ ಗೊತ್ತಿಲ್ಲದಂತೆ ಮಗಳ ಮದುವೆ ಬಗ್ಗೆ ವಿಚಾರ ಮಾಡಲು ಶುರು ಮಾಡುತ್ತೇವೆ. ಅದು ನಮ್ಮ ವಂಶವಾಹಿ ಮನೋಧರ್ಮ ಎನ್ನಬಹುದು.


ನಾವು ಆಚರಿಸುವ ಮಹಿಳಾ ದಿನಾಚರಣೆ. ಕೇವಲ ಒಂದು ದಿನಕ್ಕೆ ಸೀಮಿತವಾಗದೇ ದಿನವೂ ಮಹಿಳೆಗೆ ಸಿಗಬೇಕಾದ ಗೌರವ, ಹಕ್ಕು ಸಿಕ್ಕಿದರೆ ದಿನವೂ ಮಹಿಳಾ. ದಿನಾಚರಣೆ ಆದಂತೆಯೇ ಅಲ್ಲವೇ? ಏನಂತೀರಾ?


-ಗಾಯತ್ರಿ ಸುಂಕದ, ಬದಾಮಿ



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top