ಈ ಬಾರಿಯ ಉಪ ಚುನಾವಣೆಯಲ್ಲಿ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕೇತ್ರಗಳಲ್ಲಿ ಸೀಟು ಹಂಚಿಕೆಯನ್ನು ನೇೂಡುವಾಗ ಸಿದ್ದರಾಮಯ್ಯನವರ ಅಹಿಂದ ಮಂತ್ರ ಅಥಾ೯ತ್ ಕಾಂಗ್ರೆಸ್ ಪಕ್ಷ ಕಾರ್ಯಕತ೯ರ ಪಕ್ಷ ಅನ್ನುವುದನ್ನು ಅಪ್ಪಟ ಸುಳ್ಳಾಗಿಸಿದೆ.
ಉಪ ಚುನಾವಣೆ ನಡೆಯುವ ಎರಡು ಕ್ಷೇತ್ರಗಳಲ್ಲಿ ಹೇಗಾದರೂ ಮಾಡಿ ಗೆಲ್ಲಲೇಬೇಕು ಅನ್ನುವ ಒಂದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಅನುಕಂಪಕ್ಕೂ ಮಣೆಹಾಕಿದೆ ಜಾತಿಗೂ ಕೈ ಹಾಕಿದೆ. ಈ ಹಿಂದೆ ಗೆದ್ದ ಈ ಎರಡು ಕ್ಷೇತ್ರಗಳನ್ನು ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಆಡಳಿತ ರೂಢ ಕಾಂಗ್ರೆಸ್ ಪಕ್ಷಕ್ಕೂ ಇದೆ. ಅದಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯನವರ ಪಾಲಿಗಂತೂ ನೂರಕ್ಕೆ ನೂರು ಅಗತ್ಯವಿದೆ. ಹಾಗಂತ ಕೇವಲ ಈ ಎರಡು ಅಂಕೆಗಳು ಸರ್ಕಾರದ ಭವಿಷ್ಯವನ್ನು ನಿಧ೯ರಿಸುವುದಿಲ್ಲ ಅನ್ನುವುದು ಸತ್ಯ. ಈ ಹಿಂದೆ ಗೆದ್ದ ಎರಡು ಕ್ಷೇತ್ರಗಳನ್ನು ಕಳೆದುಕೊಳ್ಳುವುದೆಂದರೆ ಸರ್ಕಾರದ ಈ ಎರಡುವರೆ ವರುಷಗಳ ಅಧಿಕಾರದ ವೈಫಲ್ಯವನ್ನು ದಾಖಲಿಸುವ ಬ್ರಹ್ಮಾಸ್ತ್ರವನ್ನಾಗಿ ವಿಪಕ್ಷಗಳು ಮುಂದಿನ ಅವದಿಯಲ್ಲಿ ಬಳಸಿಕೊಳ್ಳುವುದು ಮಾತ್ರ ಶತ ಸಿದ್ಧ. ಹಾಗಾಗಿ ಸಿದ್ದರಾಮಯ್ಯನವರು ತಮ್ಮ "ಅಹಿಂದ"ದ ಮಾತುಗಳನ್ನು ಬದಿಗಿಟ್ಟು ಅನುಕಂಪದ ಜಾತಿಯ ಹಣದ ಪ್ರಾಬಲ್ಯಕ್ಕೆ ಮಣೆಹಾಕಿರುವುದಂತು ನಿಜ.
ದಾವಣಗೆರೆ ದಕ್ಷಿಣ ಕ್ಷೇತ್ರ ಮಟ್ಟಿಗೆ ಅಭ್ಯರ್ಥಿಯ ಆಯ್ಕೆ ಸಾಮಾನ್ಯ ಮತದಾರನಿಗೂ ರಾಜಕೀಯದಲ್ಲಿ ತೀರ ಬೇಸರ ತಂದಿರುವುದಂತು ಸತ್ಯ. ಅಜ್ಜನ ಸ್ಥಾನವನ್ನು ಅತ್ಯಂತ ಕಿರಿಯ ವಯಸ್ಸಿನ ಮೊಮ್ಮಗನಿಗೆ ನೀಡಿ ಅತ್ಯಂತ ಬಾಲಿಶವಾದ ರಾಜಕೀಯಕ್ಕೆ ಕಾಂಗ್ರೆಸ್ ಕೈ ಹಾಕಿದೆ ಅನ್ನುವುದು ಅಹಿಂದ ವಲಯದಲ್ಲಿ ಜೇೂರಾಗಿ ಕೇಳಿ ಬರುತ್ತಿರುವ ಪ್ರತಿಕಂಪನದ ಧ್ವನಿ.ಇದಾಗಲೇ ತಂದೆ ತಾಯಿ ಎಲ್ಲರಿಗೂ ಸರ್ಕಾರದ ಮಟ್ಟದಲ್ಲಿ ಉನ್ನತ ಸ್ಥಾನ ಮಾನ ಸಿಕ್ಕಿರುವಾಗ ಕನಿಷ್ಟ ಪಕ್ಷ ಈ ಬಾರಿಯಾದರೂ ಸೇೂಲಲ್ಲಿ ಗೆಲ್ಲಲಿ ಬಹು ಆಕಾಂಕ್ಷಿತರಾದ ಅಲ್ಪಸಂಖ್ಯಾತರಿಗೆ ಒಂದು ಅವಕಾಶ ಕೊಟ್ಟು ನೇೂಡ ಬಹುದಿತ್ತು. ಒಂದಂತೂ ನಿಜ ಈ ಅಲ್ಪಸಂಖ್ಯಾತರಿಗೆ ನೀವು ಸೀಟು ಕೊಡಿ ಬಿಡಿ ಇದು ನಮ್ಮ ವೇೂಟ್ ಬ್ಯಾಂಕ್ ಅನ್ನುವ ಅತಿಯಾದ ನಂಬಿಕೆ ಕಾಂಗ್ರೆಸ್ ಪಕ್ಷಕ್ಕೆ ಇದೆ ಅನ್ನುವುದು ನೂರಕ್ಕೆ ನೂರು ಸತ್ಯ. ಹಾಗಾಗಿ ಚುನಾವಣೆ ಬಂದಾಗಾಗ ಮಾತಿನ ಬಣ್ಣದಲ್ಲಿಯೇ ಅಲ್ಪಸಂಖ್ಯಾತ ಅಟ್ಟಕ್ಕೆ ಏರಿಸಿ ತಾವು ಮಾತ್ರ ಸುಖ ಅನುಭವಿಸುವ ತಂತ್ರಗಾರಿಕೆಯೇ ಅಹಿಂದ ಧ್ವನಿಯ ಒಳಾಥ೯. ಈ ತಂತ್ರಗಾರಿಕೆ ಅಹಿಂದಗಳಿಗೂ ಅಥ೯ವಾಗಿದೆ ಆದರೆ ಈ ಕಾಂಗ್ರೆಸ್ ಬಿಟ್ಟರೆ ಅವರಿಗೆ ಬೇರೆ ಗತಿ ಇಲ್ಲ ಅನ್ನುವ ಮನಃಸ್ಥಿತಿ ಅವರದಾಗಿದೆ.
ಅಂತೂ ಈ ಬಾರಿಯ ಚುನಾವಣೆ ವಂಶಾವಳಿಯ ರಾಜಕಾರಣಕ್ಕೆ ಸರಿಯಾದ ಪಾಠವನ್ನು ಕಲಿಸುವ ಫಲಿತಾಂಶ ವನ್ನಾಗಿ ಪರಿವತಿ೯ಸಬೇಕಾದ ಜವಾಬ್ದಾರಿ ಅಹಿಂದ ವಗ೯ಕ್ಕೂ ಬರಬೇಕಾಗಿದೆ. ಹಾಗೂ ಅಹಿಂದ ಮೀರಿದ ಜಾತಿ ಮತದಾರರಲ್ಲಿಯೂ ಮೂಡಿ ಬರಬೇಕಾಗಿದೆ. ಬಾಗಲಕೋಟೆ ಮತ್ತು ದಕ್ಷಿಣ ದಾವಣಗೆರೆಯಲ್ಲಿ ನಮ್ಮ ಪ್ರಬುದ್ಧ ಮತದಾರರ ಈ ಎರಡು ಗೆರೆಗಳನ್ನು ಧಾಟಿ ನಿಂತು ಹೊಸದೊಂದು ರಾಜಕೀಯ ಪಾಠ ಕಲಿಸ ಬಲ್ಲರೆ ಅನ್ನುವುದನ್ನು ಕಾದು ನೇೂಡಬೇಕಾಗಿದೆ.
- ವಿಶ್ಲೇಷಣೆ: ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


