ಹೊಸ ಕನಸುಗಳ ಹೊಸ ಆರಂಭ

Upayuktha
0


ಸಂತ ಋತುವಿನ ಸೊಬಗು ತುಂಬಿದ ಬೆಳಗ್ಗಿನಲ್ಲಿ ಪ್ರಕೃತಿ ಹೊಸ ಚೈತನ್ಯದಿಂದ ಕಂಗೊಳಿಸುತ್ತಿರುವ ಸಮಯದಲ್ಲಿ ಬರುವ ಹಬ್ಬವೇ ಯುಗಾದಿ. “ಯುಗಾದಿ” ಎಂಬ ಪದವು ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ರೂಪುಗೊಂಡಿದ್ದು, ಅದರ ಅರ್ಥ “ಹೊಸ ಯುಗದ ಆರಂಭ” ಎಂಬುದು. ಈ ದಿನವನ್ನು ಕನ್ನಡಿಗರು ಮತ್ತು ತೆಲುಗು ಜನರು ಹೊಸ ವರ್ಷದ ಪ್ರಾರಂಭದ ದಿನವಾಗಿ ಸಂತೋಷದಿಂದ ಆಚರಿಸುತ್ತಾರೆ.


ಯುಗಾದಿ ಹಬ್ಬ ಬರುವಾಗ ಪ್ರಕೃತಿ ತನ್ನದೇ ಆದ ಒಂದು ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ. ಮರಗಳಲ್ಲಿ ಹೊಸ ಹಸಿರು ಎಲೆಗಳು ಮೂಡುತ್ತವೆ, ಹೂವುಗಳು ಅರಳಿ ಪರಿಮಳವನ್ನು ಹರಡುತ್ತವೆ, ಹಕ್ಕಿಗಳ ಕಲರವವು ಎಲ್ಲೆಡೆ ಸಂತಸದ ಸ್ವರವನ್ನು ಮೂಡಿಸುತ್ತದೆ. ಈ ಪ್ರಕೃತಿಯ ನವೀನತೆ ಮಾನವನ ಮನಸ್ಸಿಗೂ ಹೊಸ ಉತ್ಸಾಹ, ಹೊಸ ಕನಸುಗಳು ಮತ್ತು ಹೊಸ ಆಶೆಯನ್ನು ತುಂಬುತ್ತದೆ.


ಯುಗಾದಿ ದಿನ ಬೆಳಗ್ಗೆಯೇ ಜನರು ಎದ್ದು ಮನೆಗಳನ್ನು ಸ್ವಚ್ಛಗೊಳಿಸಿ, ಬಾಗಿಲಿಗೆ ಮಾವಿನ ಎಲೆಗಳ ತೋರಣ ಕಟ್ಟಿ, ಮನೆಯ ಅಂಗಳದಲ್ಲಿ ಬಣ್ಣಬಣ್ಣದ ರಂಗೋಲಿ ಹಾಕಿ ಮಕ್ಕಳು ಮತ್ತು ದೊಡ್ಡವರು ಹೊಸ ಬಟ್ಟೆಗಳನ್ನು ಧರಿಸುವುದಲ್ಲದೆ ಮನೆಗಳಲ್ಲಿ ವಿಶೇಷವಾದ ತಿಂಡಿ ತಿನಿಸುಗಳನ್ನು ಕೂಡ ತಯಾರಿಸಿ ಹಬ್ಬವನ್ನು ಆಚರಿಸುವರು.


ಯುಗಾದಿಯ ಪ್ರಮುಖ ಆಚರಣೆಗಳಲ್ಲಿ ಒಂದೇ ಬೇವು-ಬೆಲ್ಲ ಸೇವಿಸುವ ಪದ್ಧತಿ. ಬೇವು ಕಹಿಯನ್ನು ಸೂಚಿಸಿದರೆ, ಬೆಲ್ಲ ಸಿಹಿಯನ್ನು ಸೂಚಿಸುತ್ತದೆ.  ಇದು ನಮಗೆ ಜೀವನದಲ್ಲಿ ಸುಖವೂ ದುಃಖವೂ ಎರಡೂ ಸಹಜವಾಗಿವೆ ಎಂಬ ಮಹತ್ವದ ಸಂದೇಶವನ್ನು ತಿಳಿಸುತ್ತದೆ. ಕಷ್ಟಗಳು ಬಂದರೂ ಧೈರ್ಯದಿಂದ ಎದುರಿಸಿ, ಸಂತೋಷ ಬಂದಾಗ ಅದನ್ನು ಹಂಚಿಕೊಳ್ಳಬೇಕು ಎಂಬ ಜೀವನ ಪಾಠವನ್ನು ಕೂಡ ಯುಗಾದಿ ಹಬ್ಬ ಕಲಿಸುತ್ತದೆ.

 ಅದಲ್ಲದೇ ಈ ದಿನ ಪಂಚಾಂಗ ಶ್ರವಣ ಮಾಡುವ ಪದ್ಧತಿಯೂ ಇದೆ. ಪಂಡಿತರು ಹೊಸ ವರ್ಷದ ಫಲಗಳು, ಗ್ರಹಗಳ ಸ್ಥಿತಿ ಮತ್ತು ಭವಿಷ್ಯದ ಬಗ್ಗೆ ವಿವರಿಸುತ್ತಾರೆ. ಜನರು ದೇವಾಲಯಗಳಿಗೆ ಹೋಗಿ ದೇವರ ಆಶೀರ್ವಾದ ಪಡೆದು ತಮ್ಮ ಜೀವನದಲ್ಲಿ ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ಬರಲೆಂದು ಪ್ರಾರ್ಥಿಸುತ್ತಾರೆ.


ಒಟ್ಟಿನಲ್ಲಿ, ಯುಗಾದಿ ಹಬ್ಬವು ಕೇವಲ ಹೊಸ ವರ್ಷದ ಆರಂಭವಲ್ಲ. ಅದು ಹೊಸ ಕನಸುಗಳ ಪ್ರಾರಂಭ, ಹೊಸ ಆಶೆಗಳ ಬೆಳಕು ಮತ್ತು ಜೀವನವನ್ನು ಹೊಸ ಉತ್ಸಾಹದಿಂದ ಆರಂಭಿಸುವ ಒಂದು ಸುಂದರ ಸಂದರ್ಭವಾಗಿದೆ. ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಜೀವನದ ಮೌಲ್ಯಗಳನ್ನು ನೆನಪಿಸುವ ಈ ಯುಗಾದಿ ಹಬ್ಬ ಪ್ರತಿಯೊಬ್ಬರ ಮನದಲ್ಲಿ ಸಂತೋಷ ಮತ್ತು ಒಗ್ಗಟ್ಟಿನ ಭಾವನೆಯನ್ನು ಮೂಡಿಸುತ್ತದೆ.


- ಧನ್ಯ ದಾಮೋದರ ಕೊಲ್ಚಾರ್ 

ಪ್ರಥಮ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top