ಉಡುಪಿ ಫೋಟೋ ಪತ್ರಕರ್ತ ಆಸ್ಟ್ರೋ ಮೋಹನ್ ಅವರಿಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಗೌರವ

Upayuktha
0

  • ROSE ರೋಸ್ ಅಂತರರಾಷ್ಟ್ರೀಯ ಫೋಟೋಗ್ರಫಿ ಸರ್ಕ್ಯೂಟ್‌ನಲ್ಲಿ 3 ಪಿ ಎಸ್ ಎ (PSA) ಗೋಲ್ಡ್,
  • ಜಡ್ಜಸ್ ಚಾಯ್ಸ್ ಸೇರಿದಂತೆ ಅನೇಕ ಪ್ರಶಸ್ತಿಗಳು



ಉಡುಪಿ: ಅಂತರರಾಷ್ಟ್ರೀಯ ಖ್ಯಾತಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕರು  ಹಾಗೂ ಕ್ಯಾನನ್ಇ  ಓ ಎಸ್  ಮಾಸ್ಟ್ರೋ ಆಗಿರುವ ಉಡುಪಿಯ ಆಸ್ಟ್ರೋ ಮೋಹನ್ ಅವರು ಮತ್ತೊಮ್ಮೆ ಅಂತರರಾಷ್ಟ್ರೀಯ ಛಾಯಾಚಿತ್ರ ವೇದಿಕೆಯಲ್ಲಿ ಮಹತ್ತರ ಸಾಧನೆಮಾಡಿದ್ದು, ರೋಸ್ ಅಂತರರಾಷ್ಟ್ರೀಯ ಫೋಟೋಗ್ರಫಿ ಸರ್ಕ್ಯೂಟ್ ನಲ್ಲಿ 3 ಪಿ ಎಸ್ ಎ ಗೋಲ್ಡ್ ಪದಕಗಳು, ಜಡ್ಜಸ್ಚಾಯ್ಸ್ ಪ್ರಶಸ್ತಿ, ಜಿ ಎನ್  ಜಿ (GNG) ಗೋಲ್ಡ್ ಪದಕ ಹಾಗೂ ಹಾನರೇಬಲ್ ಮೆನ್ಷನ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನುತಮ್ಮದಾಗಿಸಿಕೊಂಡಿದ್ದಾರೆ.


ಈ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ Photographic Society of America ಫೋಟೋಗ್ರಪಿ ಸೊಸೈಟಿ ಆಫ್ ಅಮೆರಿಕ  (PSA), ಇಂಡಿಯಾ ಇಂಟರ್ನ್ಯಾಷನಲ್ ಗ್ರೂಪ್ India International Group (IIG) ಮತ್ತು ಜಿ ಏನ್ ಜಿ ಕ್ಲಬ್ (GNG Club) ಸಂಸ್ಥೆಗಳ ಮಾನ್ಯತೆ (Patronage) ಹೊಂದಿದ್ದು, ವಿಶ್ವದ ಅನೇಕ ಅಂತಾರಾಷ್ಟ್ರೀಯ  ಛಾಯಾಗ್ರಾಹಕರು ಈಸ್ಪರ್ಧೆಯಲ್ಲಿ ಭಾಗವಹಿಸಿದ್ದರು.


ಆಸ್ಟ್ರೋ ಮೋಹನ್ ಅವರ ಶಕ್ತಿಶಾಲಿ ಪತ್ರಿಕಾ ಛಾಯಾಗ್ರಹಣದ  ಚಿತ್ರ  ಬ್ಯಾಟಲ್ ಅಗೈನ್ಸ್ಟ್ ದ ಫ್ಲೇಮ್ಸ್ “Battle Against the Flames” ಫೋಟೋ ಪತ್ರಿಕೋದ್ಯಮ ವಿಭಾಗದಲ್ಲಿ PSA ಗೋಲ್ಡ್ ಪದಕ ಹಾಗೂ ವಿಶೇಷ ಜಡ್ಜಸ್ ಚಾಯ್ಸ್ ಪ್ರಶಸ್ತಿ ಪಡೆದುಕೊಂಡಿದ್ದು, ಸ್ಪರ್ಧೆಯ ಅತ್ಯುತ್ತಮ ಹಾಗೂ ಪ್ರಭಾವಶಾಲಿ ಚಿತ್ರಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ.


ಇದೇ ಚಿತ್ರವು ಜನರಲ್ ವಿಭಾಗದಲ್ಲಿಯೂ PSA ಗೋಲ್ಡ್ ಪದಕ ಗಳಿಸಿದ್ದು, ಒಂದೇ ಚಿತ್ರವು ಎರಡು ವಿಭಿನ್ನ ವಿಭಾಗಗಳಲ್ಲಿ ಅಗ್ರಪ್ರಶಸ್ತಿ ಗಳಿಸಿರುವುದು ಅತ್ಯಂತ ಅಪರೂಪದ ಸಾಧನೆಯಾಗಿದೆ.


ಅದೇ ರೀತಿ, ಅವರ ಸಂಸ್ಕೃತಿ ಮತ್ತು ಭಕ್ತಿಯ ಭಾವವನ್ನು ವ್ಯಕ್ತಪಡಿಸುವ ಫೋಟೋ ಟ್ರಾವೆಲ್ ವಿಭಾಗದ ಎಟ್ ದ ಫೀಟ್ ಆಫ್ ಫೈತ್ “At the Feet of Faith” ಎಂಬ ಚಿತ್ರಕ್ಕೆ PSA ಗೋಲ್ಡ್ ಪದಕ, GNG ಗೋಲ್ಡ್ ಪದಕ ಹಾಗೂ ಹಾನರೇಬಲ್ಮೆನ್ಷನ್ ಇ-ಪ್ರಮಾಣಪತ್ರ ಲಭಿಸಿದ್ದು, ಜಾಗತಿಕ ಮಟ್ಟದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಜೀವನ ಶೈಲಿಯನ್ನು ಪ್ರತಿಬಿಂಬಿಸುವಚಿತ್ರವಾಗಿ ಮೆಚ್ಚುಗೆ ಪಡೆದಿದೆ.


ಈ ಸಾಧನೆಯೊಂದಿಗೆ ಆಸ್ಟ್ರೋ ಮೋಹನ್ ಅವರು ಅಂತರರಾಷ್ಟ್ರೀಯ ಛಾಯಾಚಿತ್ರ ಕ್ಷೇತ್ರದಲ್ಲಿ, ವಿಶೇಷವಾಗಿ ಪತ್ರಿಕಾ ಛಾಯಾಗ್ರಾಹಣ  ಹಾಗೂ ಫೋಟೋ ಟ್ರಾವೆಲ್ವಿ ಭಾಗಗಳಲ್ಲಿ ತಮ್ಮ ವಿಶಿಷ್ಟ ಛಾಪನ್ನು ಮತ್ತೊಮ್ಮೆ ಮೂಡಿಸಿದ್ದಾರೆ.


 ಆಸ್ಟ್ರೋ ಮೋಹನ್ ಅವರು ಕಳೆದ ಮೂರು ದಶಕಗಳಿಂದ ಹಿರಿಯ ಪತ್ರಿಕಾ ಛಾಯಾಗ್ರಹಣ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿದ್ದು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನೂರಾರು ಪ್ರಶಸ್ತಿಗಳನ್ನು ಪಡೆದು ಉಡುಪಿ, ಕರ್ನಾಟಕ ಮತ್ತುಭಾರತದ ಹೆಸರನ್ನು ಜಗತ್ತಿನ ಮಟ್ಟದಲ್ಲಿ ಪ್ರಸಿದ್ಧಿಪಡಿಸಿದ್ದಾರೆ.


ಮಾನವ ಜೀವನ, ಸಂಸ್ಕೃತಿ, ಸಂಪ್ರದಾಯ, ಭಕ್ತಿ, ಹಬ್ಬಗಳು ಮತ್ತು ಜೀವನದ ನಿಜವಾದ ಕ್ಷಣಗಳನ್ನು ತಮ್ಮ ಕ್ಯಾಮೆರಾದಮೂಲಕ ಜಗತ್ತಿನ ವೇದಿಕೆಗೆ ಪರಿಚಯಿಸುವ ಕಾರ್ಯವನ್ನು ಅವರು ನಿರಂತರವಾಗಿ ಮಾಡುತ್ತಿದ್ದು, ಈ ಅಂತರರಾಷ್ಟ್ರೀಯಪ್ರಶಸ್ತಿಗಳು ಅವರ ಛಾಯಾಚಿತ್ರ ಜೀವನದ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top