ಉತ್ತಮ ಕಲಾವಿದರಾಗಬೇಕಾದರೆ ಮೊದಲು ಉತ್ತಮ ಪ್ರೇಕ್ಷಕರಾಗಬೇಕು: ಕದ್ರಿ ನವನೀತ ಶೆಟ್ಟಿ

Upayuktha
0

ಯಕ್ಷಮಂಜರಿ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ – ತೃತೀಯ ದಿನ





ಕೊಂಚಾಡಿ: ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸುವವರು ಮೊದಲು ಉತ್ತಮ ಪ್ರೇಕ್ಷಕರಾಗಬೇಕು. ಯಕ್ಷಗಾನವನ್ನು ಆಳವಾಗಿ ನೋಡುವುದು, ಕೇಳುವುದು ಹಾಗೂ ಅರಿಯುವುದರಿಂದಲೇ ಒಬ್ಬ ಕಲಾವಿದ ರೂಪುಗೊಳ್ಳುತ್ತಾನೆ ಎಂದು ಯಕ್ಷಗಾನ ಕಲಾವಿದ, ನಾಟಕ ರಚನೆಕಾರ ಹಾಗೂ ವಾಗ್ಮಿಗಳಾದ ಕದ್ರಿ ನವನೀತ ಶೆಟ್ಟಿ ಹೇಳಿದರು.


ಅವರು ಯಕ್ಷ ಸ್ನೇಹ ಕಲಾಪ್ರತಿಷ್ಠಾನ (ರಿ), ಕೊಂಚಾಡಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ ‘ಯಕ್ಷಮಂಜರಿ’ಯ ತೃತೀಯ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಕ್ಷಗಾನ ಕ್ಷೇತ್ರದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು, ಹೊಸ ತಲೆಮಾರಿನ ಕಲಾವಿದರು ಮೊದಲು ಕಲಾಭಿಮಾನಿಗಳಾಗಿ ಬೆಳೆದು, ನಂತರ ಕಲಾವಿದರಾಗಬೇಕೆಂದು ಸಲಹೆ ನೀಡಿದರು.


ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿರುವ ಮಹಿಳಾ ತಾಳಮದ್ದಳೆ ಅಷ್ಟಾಹ ಸಂಭ್ರಮ ಯಶಸ್ವಿಯಾಗಿ ನಡೆಯಲಿ. ಇಂತಹ ಕಾರ್ಯಕ್ರಮಗಳ ಮೂಲಕ ಮಹಿಳೆಯರು ಸಂಘಟಿತರಾಗಿ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಳ್ಳಲಿ ಎಂದು ಅವರು ಹಾರೈಸಿದರು.


ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಶ್ರೀ ದುರ್ಗಾಪರಮೇಶ್ವರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಶ್ರೀ ರಂಗನಾಥ ಭಟ್ ನೆರವೇರಿಸಿ ಆಶೀರ್ವಚನ ನೀಡಿದರು.


ವೇದಿಕೆಯಲ್ಲಿ ಯುವ ಮುಂದಾಳು ಶ್ರೀ ರಾಘವೇಂದ್ರ ಉಡುಪ, ಯಕ್ಷಗಾನ ಕಲಾವಿದ ಹಾಗೂ ಉದ್ಯಮಿಗಳಾದ ಶ್ರೀ ಶಿವಪ್ರಸಾದ್ ಪ್ರಭು, ದುರ್ಗಾಪರಮೇಶ್ವರೀ ವೆಂಕಟರಮಣ ದೇವಸ್ಥಾನದ ಮಹಿಳಾ ವೇದಿಕೆ ಅಧ್ಯಕ್ಷೆ ಜ್ಯೋತಿ ಪ್ರವೀಣ್, ಯಕ್ಷಕಲಾ ಮಹಿಳಾ ತಂಡ ಸುರತ್ಕಲ್‌ನ ಸಂಚಾಲಕಿ ಶ್ರೀಮತಿ ಕೆ. ಕಲಾವತಿ, ಯಕ್ಷ ಸ್ನೇಹ ಕಲಾಪ್ರತಿಷ್ಠಾನದ ಗೌರವಾಧ್ಯಕ್ಷರಾದ ಮಧುಸೂದನ ಅಲೆವೂರಾಯ, ಅಧ್ಯಕ್ಷೆ ಗೀತಾಲಕ್ಷ್ಮೀಶ, ಪ್ರತಿಷ್ಠಾನದ ಪದಾಧಿಕಾರಿಗಳು, ಸದಸ್ಯರು ಹಾಗೂ ನೂರಾರು ಕಲಾಭಿಮಾನಿಗಳು ಉಪಸ್ಥಿತರಿದ್ದರು.


ನಂತರ ಯಕ್ಷಕಲಾ ಮಹಿಳಾ ತಂಡ ಸುರತ್ಕಲ್‌ನ ಮಹಿಳಾ ಕಲಾವಿದರಿಂದ ‘ಕದಂಬ ಕೌಶಿಕೆ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ವಾಗ್ವೈಭವದೊಂದಿಗೆ ನಡೆಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top