ಕಾಸರಗೋಡು: ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ 182ನೇ ನೃತ್ಯ-ಗಾನ ವೈಭವ

Upayuktha
0


ಕಾಸರಗೋಡು: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ 90ನೇ ತ್ರಿಮೂರ್ತಿ ಶಿವ ಜಯಂತಿ ಆಚರಣೆ ಹಾಗೂ ಅಣಂಗೂರು ಸೇವಾ ಕೇಂದ್ರದ ವಾರ್ಷಿಕೋತ್ಸವದಲ್ಲಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ)ಯು 182 ನೇ ನೃತ್ಯ ಗಾನ ಸಾಹಿತ್ಯ ವೈಭವವನ್ನು ಪ್ರದರ್ಶಿಸಿತು.


ಪ್ರತಿ ಕಾರ್ಯಕ್ರಮದಲ್ಲೂ ಹೊಸತನವನ್ನು ಪ್ರದರ್ಶಿಸುವ ಮೊದಲ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಡೆದ ಸಂಸ್ಥೆ ಇದಾಗಿದೆ.

ಕಲಾವಿದರಾದ  ತನುಷ, ಮೋಕ್ಷ, ಸೀತಾರಾಮ, ತೇಜಸ್ವಿನಿ, ಮುಕ್ತಿ,ದಿವಾಕರ, ಸೌಮ್ಯ, ಅಮೃತ್, ಐಶ್ವರ್ಯ, ಭಾಗ್ಯಲಕ್ಷ್ಮಿ, ಅಮಿತ, ಶ್ರೀಜ. ರೇಷ್ಮಾ ಸೇರಿದಂತೆ ಹಲವರು ಗಾನ ನೃತ್ಯ ವೈಭವದಲ್ಲಿ ಪ್ರದರ್ಶನ ನೀಡಿದರು.


ಸಂಸ್ಥೆಯ ಮುಖ್ಯಸ್ಥೆ ಡಾ‌. ವಾಣಿಶ್ರೀ ಸಾಹಿತ್ಯ ಗಾನ ನೃತ್ಯ ಪ್ರಸ್ತುತ ಪಡಿಸಿದರು. ಸಂಘಟಕರು ಕಲಾವಿದರಿಗೆ ಗೌರವ ಸಲ್ಲಿಸಿದರು. ಸಂಸ್ಥೆಯ ಮುಖ್ಯಸ್ಥೆ ಡಾ.ವಾಣಿಶ್ರೀ ಯವರಿಗೆ ಹಾರಹಾಕಿ ಪೇಟ ತೊಡಿಸಿ ಸನ್ಮಾನಿಸಿ ಗೌರವಿಸಿ ಶ್ರೀ ಮಹಾಲಕ್ಷ್ಮಿ  ಶ್ರೀ ನಾರಾಯಣ ದೇವರ ಭಾವಚಿತ್ರ ಕೊಟ್ಟು ಶುಭಕೋರಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗಡಿನಾಡ ಕನ್ನಡ ಸಂಸ್ಥೆಯ ಸಂಗೀತ ರತ್ನ ದಿವಾಕರ ಕಾಸರಗೋಡು ಭಾಗವಹಿಸಿದ್ದರು. ದಿವಾಕರ ಅವರ ಸಂಗೀತ ಸೇವೆಯನ್ನು ಮೆಚ್ಚಿ ಅವರನ್ನೂ ಸನ್ಮಾನಿಸಲಾಯಿತು.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top