ವಿಶ್ವವಿಖ್ಯಾತ ಅಮೃತಸರ ಗೋಲ್ಡನ್ ಟೆಂಪಲ್

Upayuktha
0



ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ ಸಿಖ್ ಧರ್ಮಿಯರ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ಇದನ್ನು 16ನೇ ಶತಮಾನದಲ್ಲಿ ಗುರು ರಾಮದಾಸ್ ಅವರು ಸ್ಥಾಪಿಸಿದರು. ನಂತರ 19ನೇ ಶತಮಾನದಲ್ಲಿ ಮಹಾರಾಜ ರಂಜಿತ್ ಸಿಂಗ್ ಅವರು ದೇವಾಲಯಕ್ಕೆ ಚಿನ್ನದ ಲೇಪನ ಮಾಡಿಸಿದರು.


ಸಮಾನತೆ, ಭಕ್ತಿ ಹಾಗೂ ಅದ್ಭುತ ವಾಸ್ತುಶಿಲ್ಪದ ವಿನ್ಯಾಸದ ಕಾರಣದಿಂದ ಅಮೃತಸರದ ಗೋಲ್ಡನ್ ಟೆಂಪಲ್ ವಿಶ್ವವಿಖ್ಯಾತವಾಗಿದೆ. ಪ್ರತಿದಿನ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಾರೆ. ಅಮೃತ ಸರೋವರದ ಮಧ್ಯದಲ್ಲಿರುವ ಈ ದೇವಾಲಯವು ಸುಮಾರು 500 ಕೆ.ಜಿ. ಚಿನ್ನದಿಂದ ಅಲಂಕರಿಸಲ್ಪಟ್ಟಿದೆ.


ಇಲ್ಲಿನ “ಲಂಗರ್” (ಉಚಿತ ಭೋಜನ) ಪದ್ಧತಿ ವಿಶೇಷವಾಗಿದೆ. ಜಾತಿ, ಧರ್ಮ ಬೇಧವಿಲ್ಲದೆ ಎಲ್ಲರಿಗೂ ಉಚಿತವಾಗಿ ಊಟ ನೀಡುವ ಈ ಪರಂಪರೆ ಈ ಪವಿತ್ರ ಕ್ಷೇತ್ರದ ಮಹತ್ವವನ್ನು ಇನ್ನಷ್ಟು ಹೆಚ್ಚಿಸುತ್ತದೆ.


ಗೋಲ್ಡನ್ ಟೆಂಪಲ್‌ಗೆ ಪ್ರವೇಶಿಸುವಾಗ ಪುರುಷರು ತಲೆಗೆ ಶ್ವೇತವರ್ಣದ ಬಟ್ಟೆ ಕಟ್ಟಿಕೊಳ್ಳಬೇಕು. ಮಹಿಳೆಯರು ತಮ್ಮ ವಸ್ತ್ರದ ಸೆರಗಿನಿಂದ ತಲೆಯನ್ನು ಮುಚ್ಚಿಕೊಂಡು ಪ್ರವೇಶಿಸಬೇಕು.


ಅಮೃತ ಸರೋವರದ ಮಧ್ಯದಲ್ಲಿರುವ ಈ ಸ್ವರ್ಣಮಯ ದೇವಾಲಯ ಅಧ್ಯಾತ್ಮಿಕತೆ ಮತ್ತು ಸಮಾನತೆಯ ಪ್ರತೀಕವಾಗಿದೆ.


- ಪ್ರೊ. ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ, ಉಡುಪಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top