ಅನಂತಪುರ ಉತ್ಸವದಲ್ಲಿ ಸಾಹಿತ್ಯ–ನೃತ್ಯ–ಗಾನಾಮೃತದ ವೈಭವ

Upayuktha
0


ಕುಂಬಳೆ: ಅನಂತಪುರದ ಸರೋವರ ಕ್ಷೇತ್ರದಲ್ಲಿರುವ ಶ್ರೀ ಅನಂತಪದ್ಮನಾಭ ದೇವರ ವಾರ್ಷಿಕ ಉತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ಸಾಹಿತ್ಯ, ನೃತ್ಯ ಮತ್ತು ಸಂಗೀತದ ವೈವಿಧ್ಯಮಯ ಪ್ರಸ್ತುತಿಗಳ ಮೂಲಕ ಗಮನ ಸೆಳೆಯಿತು. ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಉತ್ಸಾಹದಿಂದ ಭಾಗವಹಿಸಿದರು.


ಕಾಸರಗೋಡಿನ “ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ” ವತಿಯಿಂದ, ಡಾ. ವಾಣಿಶ್ರೀ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅನಂತಪುರದ ಪ್ರಕೃತಿ ಯುವ ತಂಡದ ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮವು ಸಂಸ್ಥೆಯ 184ನೇ ಕಲಾ ಕಾರ್ಯಕ್ರಮವಾಗಿತ್ತು. ಸುಮಾರು 50ಕ್ಕೂ ಅಧಿಕ ಕಲಾವಿದರು ವಿವಿಧ ಕಲಾಪ್ರಕಾರಗಳನ್ನು ಪ್ರದರ್ಶಿಸಿದರು.


ಮಂಜೇಶ್ವರ ವಿಭಾಗದ ಕಲಾವಿದರು ನಾಟ್ಯ ವಿದುಷಿ ರೇಖಾ ದಿನೇಶ್ ಅವರ ಮಾರ್ಗದರ್ಶನದಲ್ಲಿ ನೃತ್ಯ ಪ್ರದರ್ಶಿಸಿದರು. ಪುತ್ತೂರು ವಿಭಾಗದ ಕಲಾವಿದರು ಸಂಗಮ್ ಬ್ರದರ್ಸ್ ಪ್ರಶಾಂತ್ ಅವರ ಶಿಷ್ಯರಾಗಿದ್ದು ಆಧುನಿಕ ಶೈಲಿಯ ನೃತ್ಯಗಳನ್ನು ಪ್ರಸ್ತುತಪಡಿಸಿದರು. ಸೌಮ್ಯ–ಅಮೃತ್ ಅವರ ಜೋಡಿ ಯಕ್ಷನೃತ್ಯ, ಸಾರ್ವಿ ಸ್ಕಂದ ಅವರ ಯಕ್ಷನೃತ್ಯ ಹಾಗೂ ಮೋಕ್ಷ–ಮುಕ್ತಿ ಅವರ ಜೋಡಿ ಯೋಗನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು. ಬಾಲಕಿ ಮಾನ್ವಿ ಅವರ ಯೋಗನೃತ್ಯವೂ ಮೆಚ್ಚುಗೆ ಪಡೆದಿತು.


ಸ್ಮಿತಾ ಉದಯ್ ಪ್ರಕಾಶ್, ಸೀತಾರಾಮ್ ಆತ್ಮಿಕ, ಜಾಹ್ನವಿ, ಹರ್ಷಿಶ್, ಯಶಸ್ವಿನಿ, ಗ್ರೀಷ್ಮ, ಸ್ಮಯ ಸ್ಕಂದ, ಭಾಗ್ಯಲಕ್ಷ್ಮಿ, ಶ್ರೀಜ, ಅಮಿತ್, ಶ್ರಾವ್ಯ, ಸಾನಿಕ, ವರ್ಷ, ಷಷ್ಠಿ, ಬಿಂದು, ವಂಶಿಕ, ಸಮಿತ, ತೇಜಸ್ವಿನಿ, ದೀಪಾಲಿ, ರಿತ್ವಿಕಾ, ಸ್ವೀಕೃತ, ಧನ್ಯಶ್ರೀ, ನವ್ಯಶ್ರೀ, ದಾನ್ವಿಕ, ಯೆಶಿಕ, ದಿಯಾ, ಸಾನ್ವಿಕ, ಹಶ್ವಿಕ್, ಹಶ್ವಿನ್ ಸೇರಿದಂತೆ ಹಲವರು ವಿವಿಧ ಕಲಾಪ್ರದರ್ಶನಗಳನ್ನು ನೀಡಿದರು.


ಕಾರ್ಯಕ್ರಮದಲ್ಲಿ ಸಮೂಹ ಭರತನಾಟ್ಯ, ಜಾನಪದ ನೃತ್ಯ, ಭಾವನೃತ್ಯ, ಕೊರವಂಜಿ ನೃತ್ಯ, ಮಕ್ಕಳ ಹಾಗೂ ಯುವತಿಯರ ಸಮೂಹ ನೃತ್ಯಗಳ ಜೊತೆಗೆ ಕನ್ನಡ ಭಾವಗೀತೆ, ಭಕ್ತಿಗೀತೆ ಮತ್ತು ಜನಪದ ಗೀತೆಗಳನ್ನೂ ಪ್ರಸ್ತುತಪಡಿಸಲಾಯಿತು.


ಈ ಸಂದರ್ಭದಲ್ಲಿ ಪ್ರಕೃತಿ ತಂಡದ ಅಧ್ಯಕ್ಷ ಲೋಕಯ್ಯ ಸಿದ್ದಿಬಯಲು ಮಾತನಾಡಿದರು. ಹಿರಿಯ ಸದಸ್ಯರಾದ ಕೃಷ್ಣ ಆಳ್ವ, ಗಿರೀಶ್ ಅಚ್ಯುತ ಭಟ್ ಹಾಗೂ ಶಶಿಕಲಾ ಅವರು ಕಲಾವಿದರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಕೆಲ ಕಲಾವಿದರಿಗೆ ನಗದು ಬಹುಮಾನಗಳನ್ನೂ ನೀಡಲಾಯಿತು.


ಡಾ. ವಾಣಿಶ್ರೀ ಮತ್ತು ವಿದುಷಿ ರೇಖಾ ದಿನೇಶ್ ಅವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸತ್ಯ ಅನಂತಪುರ ಸ್ವಾಗತಿಸಿ, ಪ್ರಮೋದ್ ಕುಮಾರ್ ಅನಂತಪುರ ಧನ್ಯವಾದ ಸಲ್ಲಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top