ನಿರಂತರ ಕಲಿಕೆ ಪ್ರಾಮಾಣಿಕತೆಯಿಂದ ಯಶಸ್ಸು

Upayuktha
0

ಶ್ರೀನಿವಾಸ ವಿವಿ ಘಟಿಕೋತ್ಸವದಲ್ಲಿ ಗಂಟಿ ವೆಂಕಟ ಕಿರಣ್ ಸಲಹೆ



ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಎಂಟನೇ ಘಟಿಕೋತ್ಸವ ಸಮಾರಂಭದ ದ್ವಿತೀಯ ಭಾಗವು ಶ್ರೀನಿವಾಸ ವಿಶ್ವವಿದ್ಯಾಲಯದ ಮುಕ್ಕ ಕ್ಯಾಂಪಸ್‌ನಲ್ಲಿ ಮಾರ್ಚ್‌ ೨೮ರಂದು ಮಧ್ಯಾಹ್ನ ಶ್ರೀನಿವಾಸ ವಿಶ್ವ ವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಡಾ.ಎ. ಶ್ರೀನಿವಾಸ ರಾವ್‌ ಅಧ್ಯಕ್ಷತೆಯಲ್ಲಿ ನಡೆಯಿತು.


ಮುಖ್ಯ ಅತಿಥಿ ಗಂಟಿ ವೆಂಕಟ ಕಿರಣ್ (ಕುದುರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್ ಮಂಗಳೂರು ಸಂಸ್ಥೆಯ ಅಧ್ಯಕ್ಷರು, ಹಾಗೂ ಉತ್ಪಾದನೆ, ಯೋಜನೆ ಮತ್ತು ಹಣಕಾಸು ವಿಭಾಗದ ನಿರ್ದೇಶಕರು) ಮಾತನಾಡಿ, ನೀವು ಗಳಿಸಿದ ಜ್ಞಾನ ಮತ್ತು ಕೌಶಲಗಳು ನಿಮ್ಮ ಜೀವನಕ್ಕೆ ದೃಢವಾದ ಅಡಿಪಾಯವಾಗಿದ್ದು, ನಿರಂತರವಾಗಿ ಕಲಿಯುವ ನಿಮ್ಮ ಪ್ರಾಮಾಣಿಕತೆಯೇ ನಿಮ್ಮ ಯಶಸ್ಸನ್ನು ನಿರ್ಧರಿಸುತ್ತದೆ. ಶ್ರೀನಿವಾಸ ವಿಶ್ವವಿದ್ಯಾಲಯದ ಪರಂಪರೆಯು ಸಂಸ್ಥಾಪಕ ಕುಲಾಧಿಪತಿ ಡಾ. ಸಿ.ಎ. ಎ. ರಾಘವೇಂದ್ರ ರಾವ್ ಅವರ ಕಠಿಣ ಪರಿಶ್ರಮದ ಯಶಸ್ಸಿಗೆ ಸಾಕ್ಷಿಯಾಗಿದೆ. ಕೇವಲ 7 ವಿದ್ಯಾರ್ಥಿಗಳಿಂದ ಆರಂಭವಾದ ಈ ಸಂಸ್ಥೆಯಲ್ಲಿ ಇಂದು ವಿವಿಧ ವಿಭಾಗಗಳಲ್ಲಿ 16,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಮಹಾತ್ಮ ಗಾಂಧಿ ಯವರು ಹೇಳಿದಂತೆ, “ತನ್ನನ್ನು ಕಂಡುಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ ಇತರರ ಸೇವೆಯಲ್ಲಿ ತನ್ನನ್ನು ತಾನೇ ತೊಡಗಿಸಿಕೊಳ್ಳುವುದು. ದೃಷ್ಟಿ ಎಂದರೆ ಕಾಣದದ್ದನ್ನು ಕಾಣುವ ಕಲೆಯಾಗಿದೆ. ನಮ್ಮ ಕನಸುಗಳನ್ನು ನಿಜಗೊಳಿಸಲು ಅವಕಾಶಗಳನ್ನು ಸೃಷ್ಟಿಸಿ, ಜಾಗತಿಕ ಸವಾಲುಗಳನ್ನು ಸಮಗ್ರವಾಗಿ ಎದುರಿಸುವ ದಿಶೆಯಲ್ಲಿ ನಾವು ಮುನ್ನಡೆಯಬೇಕು ಎಂದರು.


ಅಧ್ಯಕ್ಷೀಯ ಭಾಷಣದಲ್ಲಿ ಡಾ. ಎ. ಶ್ರೀನಿವಾಸ ರಾವ್ ರವರು ಮಾತನಾಡಿ, ಎಲ್ಲಾ ಪದವೀಧರರನ್ನು ಹಾಗೂ ಅವರ ಪೋಷಕರನ್ನು ಅಭಿನಂದಿಸಿದರು. ರೋಬೋಟಿಕ್ಸ್, ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್), ಸೈಬರ್ ಸೆಕ್ಯೂರಿಟಿ ಮತ್ತು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಇವುಗಳು ಇಂದಿನ ಕೈಗಾರಿಕಾ ಕ್ಷೇತ್ರದ ಪ್ರಮುಖ ಅಗತ್ಯಗಳಾಗಿವೆ.


ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಕೈಗಾರಿಕಾ ಕ್ಷೇತ್ರಗಳ ಅವಶ್ಯಕತೆಗೆ ಅನುಗುಣವಾಗಿ ವಿವಿಧ ತಾಂತ್ರಿಕ ಕೌಶಲ್ಯಗಳನ್ನು ಮತ್ತು ಗ್ಲೋಬಲ್ ಸರ್ಟಿಫಿಕೇಷನ್ ಒಳಗೊಂಡಂತೆ ಪಠ್ಯಕ್ರಮ ರೂಪಿಸಲಾಗಿದೆ. ಶ್ರೀನಿವಾಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ವಿದ್ಯಾರ್ಥಿಗಳು ಹೊರ ಜಗತ್ತಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಮರ್ಥರಾಗಿದ್ದಾರೆ ಎಂದು ಹೇಳಿದರು.


ಶ್ರೀನಿವಾಸ ವಿವಿ ವಿಶ್ವಸ್ತ ಮಂಡಳಿ ಸದಸ್ಯರಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್. ರಾವ್ , ಪ್ರೊ. ಇಆರ್‌.  ಎ. ಮಿತ್ರಾ ಎಸ್. ರಾವ್, ಇಶಾನ್ ರಾವ್ , ಡಾ. ಕೆ. ಸತ್ಯನಾರಾಯಣ ರೆಡ್ಡಿ (ಉಪಕುಲಪತಿಗಳು), ವಸುಂಧರಾ ಕಿರಣ್, ಡಾ. ಅನಿಲ್ ಕುಮಾರ್ (ಕುಲಸಚಿವರು), ಡಾ. ಶ್ರೀನಿವಾಸ ಮಯ್ಯ ಡಿ. (ಕುಲಸಚಿವರು, ಮೌಲ್ಯಮಾಪನ ವಿಭಾಗ), ಡಾ. ಅಜಯ್ ಕುಮಾರ್‌ (ಕುಲಸಚಿವರು, ಅಭಿವೃದ್ಧಿ) ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪ್ರೊ. ಇಆರ್‌. ಎ. ಮಿತ್ರಾ ಎಸ್. ರಾವ್ ರವರು ಪದವೀಧರರಿಗೆ ಪ್ರಮಾಣ ವಚನವನ್ನು ಬೋಧಿಸಿದರು.


ಡಾ. ಅನಿಲ್ ಕುಮಾರ್ ಸ್ವಾಗತಿಸಿ, ಸಹಾಯಕ ಕುಲಸಚಿವರಾದ ಡಾ. ಜಯಶ್ರೀ ಬೋಳಾರ್ ವಂದಿಸಿದರು. ಪ್ರೊ. ರೋಹನ್ ಫೆರ್ನಾಂಡಿಸ್ ಮತ್ತು ಡಾ. ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. 



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top