ಸಂತ ಫಿಲೋಮಿನಾ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ

Upayuktha
0


ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗ , ಕನ್ನಡ ಸಂಘ, ಮತ್ತು ಜೆ ಸಿ ಐ ಪುತ್ತೂರು ಜಂಟಿ ಆಶ್ರಯದಲ್ಲಿ "ವ್ಯಕ್ತಿತ್ವ ವಿಕಸನ" ತರಬೇತಿ ಕಾರ್ಯಕ್ರಮ ಕಾಲೇಜಿನ ಸ್ಪಂದನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಜೆ ಸಿ ಐ ವಲಯ 15ರ ವಲಯ ತರಬೇತುದಾರರಾದ ಸುಹಾಸ್ ಎಪಿಎಸ್ ಮರಿಕೆಯವರು, ವಿದ್ಯಾರ್ಥಿಗಳನ್ನು ಹಲವು ಗುಂಪುಗಳಾಗಿ ಮಾಡಿ 'ವ್ಯಕ್ತಿತ್ವವು ಹೂವು ಅರಳಿದಂತೆ ಅರಳಬೇಕಾದರೆ ನಮ್ಮ ನಡೆ ನುಡಿ ಹಾವ-ಭಾವ ವೇಷ-ಭೂಷಣ ಎಲ್ಲವೂ ಮುಖ್ಯವಾಗುತ್ತದೆ. 


ವಿದ್ಯೆಯೊಂದಿಗೆ ಉತ್ತಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು, ಆತ್ಮವಿಶ್ವಾಸ ಹಾಗೂ ಸದಾ ನಗುಮೊಗದಿಂದ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತಾಗ ಸಮಾಜ ನಮ್ಮನ್ನು ಗೌರವಿಸುತ್ತದೆ ಬದುಕಿನಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ' ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರು ವಂI ಡಾI ಆಂಟನಿ ಪ್ರಕಾಶ್ ಮೊಂತೇರೋ ಮಾತನಾಡಿ , ವ್ಯಕ್ತಿತ್ವದ ವಿಕಾಸಕ್ಕೆ ರೀಡಿಂಗ್ , ರೈಟಿಂಗ್, ಕಮ್ಯುನಿಕೇಟಿಂಗ್, ಲಿಸನಿಂಗ್, ಸೆನ್ಸಿಟಿವಿಟಿ ಮತ್ತು ಕಾಮನ್ ಸೆನ್ಸ್ ಎಂಬ ಆರು ಸರಳ ಸೂತ್ರಗಳನ್ನು ಅಳವಡಿಸಿ ಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. 


ಜೆ ಸಿ ಐ ಅಧ್ಯಕ್ಷರಾದ ಜಿತೇಶ್ ರೈ, ಜೆಜೆಸಿ ಅಧ್ಯಕ್ಷರಾದ ದೀಕ್ಷಿತ, ಕಾಲೇಜಿನ ಉಪಪ್ರಾಂಶುಪಾಲ ಡಾI ವಿಜಯ್ ಕುಮಾರ್ ಮೊಳೆಯಾರ್, ಶೈಕ್ಷಣಿಕ ಕುಲ ಸಚಿವ ಡಾI ನೋರ್ಬರ್ಟ್ ಮಸ್ಕರೇನಸ್, ಬಿಬಿಎ ವಿಭಾಗದ ಮುಖ್ಯಸ್ಥ ಡಾI ರಾಧಾಕೃಷ್ಣ ಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವೈಷ್ಣವಿ ರಶ್ಮಿತಾ ಮತ್ತು ಧನ್ಯಶ್ರೀ ಅವರು ಪ್ರಾರ್ಥಿಸಿ, ವಿದ್ಯಾರ್ಥಿನಿ ಫಾತಿಮತ್ ಮಿಝ್ನಾ ಸ್ವಾಗತಿಸಿ, ಫಾತಿಮತ್ ರಬ್ಹಾನ ವಂದಿಸಿ, ರಶ್ಮಿತಾ ನಿರೂಪಿಸಿದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top