ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ಅತ್ತಾವರ: ಬ್ರಹ್ಮ ಕಲಶೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ

Upayuktha
0


ಮಂಗಳೂರು: ನೂರಾರು ವರ್ಷಗಳ ಇತಿಹಾಸವುಳ್ಳ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಬ್ರಹ್ಮ ಕಲಶಾಭಿಷೇಕವು ಏಪ್ರಿಲ್ 19 ರಿಂದ ಮೊದಲ್ಗೊಂಡು ಏಪ್ರಿಲ್ 23ರ ತನಕ ನಡೆಯಲಿದೆ. ಇದರ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಮಾರ್ಚ್ 22 ರಂದು ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ನಡೆಯಿತು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.


ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಅಯ್ಯಪ್ಪ ದೇವಸ್ಥಾನದ ಬ್ರಹ್ಮ ಕಲಶದಲ್ಲಿ ಪಾಲ್ಗೊಳ್ಳುವ ಸೌಭಾಗ್ಯ ದೊರೆತಿರುವುದು ಪುಣ್ಯದ ಫಲ. ಒಂದು ಊರಿನಲ್ಲಿ ಬ್ರಹ್ಮ ಕಲಶ ನಡೆದರೆ ಆ ಊರಿನ ಉನ್ನತಿಗೆ ಕಾರಣವಾಗುತ್ತದೆ. ಊರಿಗೆ ಸಂಕಷ್ಟ ಬರುವುದಿಲ್ಲ. ಈ ದೇವತಾ ಕಾರ್ಯದಲ್ಲಿ ಊರ ಪರವೂರಿನ ಎಲ್ಲರೂ ಭಾಗವಹಿಸಿ ಸುಸೂತ್ರವಾಗಿ ಬ್ರಹ್ಮ ಕಲಶ ನಡೆಯುವಂತೆ ಪ್ರತಿಯೊಬ್ಬರು  ಅಳಿಲ ಸೇವೆ ಮಾಡುವ ಮೂಲಕ ಭಾಗಿಗಳಾಗೋಣ ಎಂದರು.


ಮುಖ್ಯ ಅತಿಥಿಗಳಾಗಿ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ರತೀಂದ್ರ ನಾಥ. ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರಾದ ಸೂರಜ್ ರಾಘವನ್, ಕಾರ್ಯಾಧ್ಯಕ್ಷ ಗೋಕುಲದಾಸ್ ಮತ್ತು ಮುರುಳಿಧರ್, ಗೌರವ ಕೋಶಾಧಿಕಾರಿ ಸಂತೋಷ ಶೆಟ್ಟಿ, ಸ್ವಾಗತ ಸಮಿತಿಯ ಅಧ್ಯಕ್ಷ ರಾಜರತ್ನ ಸನಿಲ್, ಗೌರವ ಕಾರ್ಯದರ್ಶಿ ಜನಾರ್ಧನ್ ಅತ್ತಾವರ, ಅಯ್ಯಪ್ಪ ದೇವಸ್ಥಾನ ಪಡೀಲ್ ಇದರ ಅಧ್ಯಕ್ಷ ಮೋಹನ್ ಪಡೀಲ್ ,ಆತ್ಮಶಕ್ತಿ ಕೋ ಆಪರೇಟಿವ್ ಸೊಸೈಟಿ ಚೇರ್ರ್ಮನ್ ಚಿತ್ತ ರಂಜನ್, ಕರುಣ್ ಇನ್ಫ್ರಾ ಸ್ಟ್ರಕ್ಚರರ್ಸ್ ಮಾಲಕ ಕರುಣಾಕರ್, ಹಿಮಾಲಯ ರೋಡ್ ಲೈನ್ ಮಂಗಳೂರು ಮಾಲೀಕ ಅಶೋಕ್ ಯೆಯ್ಯಾಡಿ, ಉದ್ಯಮಿ ಸುರೇಶ್ ಪೂಜಾರಿ ಕಣ್ಣೂರು, ಶಶಿಧರ್, ರಾಮಪ್ರಸಾದ್ ಅರ್ಥ್ ಮೂವರ್ಸನ ಅಜಿತ್, ಗುತ್ತಿಗೆದಾರ ಕೇಶವ ಬಲರಾಜ್, ಉಪಾಧ್ಯಕ್ಷ ಪದ್ಮನಾಭನ್, ಪ್ರಧಾನ ಕಾರ್ಯದರ್ಶಿ ಕ್ಷಿತಿ ಮಮ್ಲೂರು, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸೂರ್ಯಕಾಂತ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು


 ಸಾಹಿತಿ, ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ, ಬ್ರಹ್ಮ ಕಲಶ ಸಮಿತಿಯ ಉಪಾಧ್ಯಕ್ಷೆ ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ರಘುವೀರ್ ಬಾಬುಗುಡ್ಡೆ ಕಾರ್ಯಕ್ರಮ ನಿರೂಪಿಸಿ. ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top