ಮಂಗಳೂರು: ನಗರದ ಲ್ಯಾಂಡ್‌ಲಿಂಕ್ಸ್ ನಿವಾಸಿ ಶ್ರೀ ಸೋಮಶೇಖರ ಭಟ್ ಅವರು ತನ್ನ 86ನೇ ವಯಸ್ಸಿನಲ್ಲಿ ಸ್ವಲ್ಪ ದಿನದ ಅನಾರೋಗ್ಯದ ನಂತರ ಬುಧವಾರ (ಮಾರ್ಚ್ 25) ಲ್ಯಾಂಡ್‌ಲಿಂಕ್ಸ್ ಬಡಾವಣೆಯ ಸ್ವಗೃಹದಲ್ಲಿ ನಿಧನ ಹೊಂದಿದರು.
ಅವರು 39 ವರುಷದ ಸುದೀರ್ಘ ಕಾಲದ ಅವಧಿಗೆ ನವ ಮಂಗಳೂರು ಬಂದರಿನಲ್ಲಿ ಸೇವೆ ಸಲ್ಲಿಸಿ 2002ರಲ್ಲಿ ಟ್ರಾಫಿಕ್ ಇನ್‌ಸ್ಪೆಕ್ಟರ್ ಹುದ್ದೆಯಿಂದ ನಿವೃತ್ತಿ ಹೊಂದಿದರು. ಅವರು ಕನ್ನಡ ಕಲಾ ಅಭಿಮಾನಿಯಾಗಿದ್ದು ಕನ್ನಡ ನಾಟಕಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ಮಾಡಿದ್ದರು. ಅಲ್ಲದೆ ಎನ್‌ಎಂಪಿಟಿ ಗಣೇಶೋತ್ಸವ ಸಮಿತಿಯಲ್ಲಿಯೂ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದರು. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಲ್ಲದೆ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


