ತುಳಸಿ ರಾಮಾಯಣದಲ್ಲಿ ಸೀತೆಯ ಅಗ್ನಿಪ್ರವೇಶ

Upayuktha
0



- ಟಿ. ದೇವಿದಾಸ್


ತೇನ ವಿನಾ ತೃಣಮಪಿ ನ ಚಲತಿ- ಭಗವಂತನ ಇಚ್ಛೆಯಿಲ್ಲದೆ ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ. ಸಂಸ್ಕೃತದ ಈ ಸುಭಾಷಿತ ಹೇಳುವಂತೆ ಅವನ ಅಣತಿ ಇಲ್ಲದೆ ಈ ಬ್ರಹ್ಮಾಂಡದಲ್ಲಿ ಏನೂ ನಡೆಯದು. ಅಯೋಧ್ಯಾಪ್ರಭು ಶ್ರೀರಾಮನ ಅವತಾರವು ಪೂರ್ವನಿಶ್ಚಿತ ಕಾರ್ಯನಿಮಿತ್ತವೇ ಆಗಿದೆ. ಆಫ್ ಕೋರ್ಸ್ ಪೂರ್ತಿ ರಾಮಾಯಣವೇ ಪೂರ್ವ ನಿಯೋಜಿತವಾದದ್ದು. ಮಹಾವಿಷ್ಣುವಿನ ಅವತಾರವಾದ ಶ್ರೀರಾಮ ಕೂಡ ಅದನ್ನು ಚೆನ್ನಾಗಿ ಬಲ್ಲವನಾಗಿದ್ದನು.


ವೈಕುಂಠದ ದ್ವಾರಪಾಲಕರಾಗಿದ್ದ ಜಯ-ವಿಜಯರು ಶಾಪಗ್ರಸ್ಥರಾಗಿ ಭೂಮಿಯಲ್ಲಿ ರಾಕ್ಷಸರಾಗಿ ಮೂರು ಜನ್ಮ ತಾಳುತ್ತಾರೆ. ಹಿರಣ್ಯಾಕ್ಷ- ಹಿರಣ್ಯಕಶ್ಯಪು, ರಾವಣ-ಕುಂಭಕರ್ಣ ಮತ್ತು ಶಿಶುಪಾಲ-ದಂತವಕ್ರ.


ತ್ರೇತಾಯುಗದಲ್ಲಿ ರಾಕ್ಷಸರಾಗಿ ಹುಟ್ಟಿದ ರಾವಣ ಮತ್ತು ಕುಂಭಕರ್ಣರನ್ನ ಸಂಹಾರ ಮಾಡುವುದಕ್ಕಾಗಿಯೇ ಶ್ರೀರಾಮನ ಅವತಾರವಾಯಿತು. ರಾವಣ ಮತ್ತು ಕುಂಭಕರ್ಣರನ್ನು ಸಂಹರಿಸಲು ಒಂದು ಬಲವಾದ ಕಾರಣ ಬೇಕಿತ್ತು. ಅದಕ್ಕಾಗಿಯೇ ಸೀತಾಪಹರಣ ನಡೆಯಿತು. ಸೀತಾಪಹರಣವನ್ನು ಮೊದಲೇ ತಿಳಿದಿದ್ದ ಶ್ರೀರಾಮನು, ವನವಾಸದ ಸಮಯದಲ್ಲಿ ಅಗ್ನಿದೇವನಲ್ಲಿ ಪ್ರಾರ್ಥನೆ ಮಾಡಿಕೊಂಡು ನಿಜವಾದ ಸೀತೆಯನ್ನು ರಾವಣ ಸಂಹಾರವಾಗುವ ತನಕ ರಕ್ಷಣೆ ಮಾಡಿಕೊಳ್ಳುವಂತೆ ಬೇಡಿಕೊಳ್ಳುತ್ತಾನೆ.


ರಾಮನ ಪ್ರಾರ್ಥನೆಯಂತೆ ಅಗ್ನಿದೇವನು ಸೀತೆಯನ್ನು ತನ್ನೊಳಗೆ ವಿಲೀನ ಮಾಡಿಕೊಂಡು ಸೀತೆಯ ಛಾಯೆಯನ್ನು ಅಥವಾ ಬಿಂಬವನ್ನು ರಾಮನ ಜೊತೆ ಬಿಡುತ್ತಾನೆ. ಅದೇ ಬಿಂಬವನ್ನು ರಾವಣನು ಅಪಹರಿಸುತ್ತಾನೆ. ಈ ರಹಸ್ಯವನ್ನು ರಾವಣನ ವಧೆಯ ಅನಂತರವೇ ರಾಮನು ಲಕ್ಷ್ಮಣನಿಗೆ ಹೇಳುತ್ತಾನೆ. ರಾವಣನ ಸಂಹಾರದ ಅನಂತರ ನಿಜವಾದ ಸೀತೆಯನ್ನು ಮರಳಿ ಪಡೆಯಲು ಅಶೋಕ ವನದಲ್ಲಿದ್ದ ಸೀತೆಯ ಬಿಂಬವನ್ನು ಪುನಃ ಅಗ್ನಿಗೆ ಸಮರ್ಪಿಸಲು ನಡೆಯುವ ಪ್ರಕ್ರಿಯೆಯೇ ಸೀತೆಯ ಅಗ್ನಿಪ್ರವೇಶ. ಸೀತೆಯ ಬಿಂಬವು ಅಗ್ನಿಪ್ರವೇಶ ಮಾಡಿದ ಅನಂತರ ಸ್ವತಃ ಅಗ್ನಿದೇವನೇ ಬಂದು ನಿಜವಾದ ಸೀತೆಯನ್ನು ರಾಮನಿಗೆ ಒಪ್ಪಿಸುತ್ತಾನೆ.


ಇನ್ನೊಂದು ಉಲ್ಲೇಖದ ಪ್ರಕಾರ,  ಅತ್ಯಂತ ಆದರ್ಶ ಪುರುಷನಾದ ಮರ್ಯಾದಾ ಪುರುಷೋತ್ತಮ ಶ್ರೀರಾಮನು ತನ್ನ ಪತ್ನಿಯ ಚಾರಿತ್ರ್ಯವನ್ನು ಯಾವ ಕಾಲಕ್ಕೂ ಅನುಮಾನಿಸಿರಲಾರ. ಯಾಕೆಂದರೆ ಸೀತೆಯನ್ನು ಯಾವುದೇ ಪರಪುರುಷ ಸ್ಪರ್ಶಿಸಿದರೂ ಆತ ಆ ಕ್ಷಣದಲ್ಲಿ ಸುಟ್ಟು ಹೋಗುತ್ತಿದ್ದ ಅನ್ನುವ ಸತ್ಯ ಶ್ರೀರಾಮನಿಗೆ ತಿಳಿದಿದ್ದರೂ ರಾವಣನಿಂದ ಅಪಹರಣವಾಗಿದ್ದ ಸೀತೆಯ ಪಾವಿತ್ರ್ಯತೆಯ ಬಗ್ಗೆ ಅನುಮಾನಿತನಾದ ಶ್ರೀರಾಮನು ಸೀತೆಯನ್ನು ಅಗ್ನಿಪ್ರವೇಶ ಮಾಡುವಂತೆ ಹೇಳುತ್ತಾನೆ ಅನ್ನುವುದು ರಾಮಾಯಣದಲ್ಲಿ ಉಲ್ಲೇಖವಾಗಿದೆ.


ಆದರೆ, ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮನು ಸೀತೆಗೆ ಅಗ್ನಿಪರೀಕ್ಷೆಯನ್ನು ಒಡ್ಡಲೇ ಇಲ್ಲ. ವೀರರೇ ತುಂಬಿದ ಸಭೆಯಲ್ಲಿ ಶ್ರೀರಾಮನ ಕರ್ಣಕಠೋರವಾದ ಮಾತುಗಳನ್ನು ಕೇಳಿ ಸೀತಾಮಾತೆ ಕಣ್ಣೀರಿಟ್ಟು ಲಕ್ಷ್ಮಣನನ್ನು ಕುರಿತು “ಲಕ್ಷ್ಮಣ, ನನಗಾಗಿ ಬೆಂಕಿಯ ಚಿತೆಯನ್ನು ಸ್ಥಾಪಿಸು. ಅದು ಮಾತ್ರ ಈ ದುಃಖಕ್ಕೆ ಪರಿಹಾರ. ಸುಳ್ಳು ಆರೋಪದಿಂದ ಹೊಡೆದದ್ದರಿಂದ  ನಾನು ಬದುಕಲು ಬಯಸುವುದಿಲ್ಲ- ಕೇಳುತ್ತಾಳೆ. "ಚಿತಾಂ ಮೇ ಕುರು ಸೌಮಿತ್ರೇ ವ್ಯಸನಸ್ಯಾಸ್ಯ ಭೇಷಜಮ್ …".


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top