ಕೋಟ: ಸಾಲಿಗ್ರಾಮ ಶ್ರೀಗುರುನರಸಿಂಹ ದೇವಳದ 2026–31ನೇ ಸಾಲಿನ ಆಡಳಿತ ಮಂಡಳಿಗೆ ಮಾರ್ಚ್ 15ರಂದು ಚುನಾವಣೆ ಯಶಸ್ವಿಯಾಗಿ ನಡೆಯಿತು.
ಒಟ್ಟು ಆರು ಮತಕ್ಷೇತ್ರಗಳಲ್ಲಿ, ಕರ್ನಾಟಕೇತರ ರಾಜ್ಯಗಳ ಮತಕ್ಷೇತ್ರದಿಂದ ಎಂ. ಲಕ್ಷ್ಮೀನಾರಾಯಣ ಹೊಳ್ಳ ಅವರು ಅವಿರೋಧವಾಗಿ ಆಯ್ಕೆಯಾದರು.
ಉಳಿದ ಐದು ಮತಕ್ಷೇತ್ರಗಳಿಗೆ ಮತದಾನ ನಡೆಯಿತು. ಈ ಐದು ಕ್ಷೇತ್ರಗಳಿಗೆ ಒಟ್ಟು 8 ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದ್ದು, ಒಟ್ಟು 2,829 ಮತಗಳು ಚಲಾವಣೆಯಾದವು.
ಆಯ್ಕೆಯಾದ ಅಭ್ಯರ್ಥಿಗಳು:
ಉಡುಪಿ ಜಿಲ್ಲೆಯ ಉಳಿದ ಭಾಗಗಳು ಮತಕ್ಷೇತ್ರ:
ಬಿ. ಚಂದ್ರಶೇಖರ ನಾವಡ (ಬೈಂದೂರು)– ಬಹುಮತದಿಂದ ಆಯ್ಕೆ
ಬೆಂಗಳೂರು ಕಾರ್ಪೋರೇಶನ್ ಮತಕ್ಷೇತ್ರ:
ಜಿ. ಪ್ರಕಾಶ ಮಯ್ಯ – ಬಹುಮತದಿಂದ ಆಯ್ಕೆ
ದಕ್ಷಿಣ ಕನ್ನಡ ಜಿಲ್ಲೆಯ ಮತಕ್ಷೇತ್ರ:
ಪ್ರಕಾಶ ಕಾರಂತ– ಬಹುಮತದಿಂದ ಆಯ್ಕೆ
ಕರ್ನಾಟಕದ ಇತರ ಭಾಗಗಳು ಮತಕ್ಷೇತ್ರ:
ಬಿ.ಜಿ. ಕೃಷ್ಣಮೂರ್ತಿ– ಬಹುಮತದಿಂದ ಆಯ್ಕೆ
ಸಾಲಿಗ್ರಾಮ ಮತಕ್ಷೇತ್ರ: ಪ್ರಸನ್ನ ತುಂಗ, ಪರಶುರಾಮ ಭಟ್ಟ, ಕೆ. ತಾರಾನಾಥ ಹೊಳ್ಳ, ಚಂದ್ರಶೇಖರ ಉಪಾಧ್ಯ- ಇವರು ಬಹುಮತದಿಂದ ಆಯ್ಕೆಯಾಗಿದ್ದಾರೆ.


