ಅಡೂರು ಜಾತ್ರೋತ್ಸವ: ವರ್ಣರಂಜಿತ ಸಾಂಸ್ಕೃತಿಕ ವೈಭವ

Upayuktha
0


ಅಡೂರು: ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಹಲವು ವಿಧ ಧಾರ್ಮಿಕ, ವೈದಿಕ ವಿಧಿ ವಿಧಾನಗಳಿಂದ ಅತ್ಯಂತ ವೈಭವಪೂರಿತವಾಗಿ ಸಂಪನ್ನಗೊಂಡಿತು. ಸಹಸ್ರಾರು ಭಕ್ತರು ಶ್ರೀ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.


ಈ ಮಹೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವವು ವರ್ಣ ರಂಜಿತವಾಗಿ ಪ್ರಸ್ತುತಗೊಂಡು ಜನ ಮನ ಗೆದ್ದಿತು.


ಗುರುರಾಜ್ ಕಾಸರಗೋಡು ಅವರ ಸಂಯೋಜನೆ ಹಾಗೂ ನಿರೂಪಣೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ವರ್ಷಾ ಶೆಟ್ಟಿ, ಧೀಕ್ಷಾ ಕುಲಾಲ್, ಭಾನ್ವಿ ಕುಲಾಲ್, ಭವಿಷ್ಯ ಪೂಜಾರಿ, ಸಾನ್ವಿ ಆರ್ ರೈ, ತೇಜೂಷಾ, ಶ್ರಾವ್ಯ ವಿ ಆರ್, ತ್ರಿಷಾ ಅಡಕಲಕಟ್ಟೆ, ಆನ್ಮೇತಾ ಶೆಟ್ಟಿ ಕೋಡಿಜಲ್, ಸುಚಿತಾ, ಸಾಯಿ ಶರಣ್, ಶಿಯಾ ಶರಣ್, ಹರೀಶ್ ಪಂಜಿಕಲ್ಲು ಮುಂತಾದ ಸಂಸ್ಥೆಯ ಅಪ್ರತಿಮ ಕಲಾವಿದರು ಹಲವು ವಿಧ ಕಲಾ ಪ್ರಕಾರಗಳನ್ನು ಪ್ರಸ್ತುತಗೊಳಿಸಿದರು.


ದೇವಸ್ಥಾನದ ವತಿಯಿಂದ ಸಂಸ್ಥೆಗೆ ಶ್ರೀ ದೇವರ ಪ್ರಸಾದ ನೀಡಿದರು. ಕೊನೆಯಲ್ಲಿ ಭಾಗವಹಿಸಿದ ಸಂಸ್ಥೆಯ ಕಲಾವಿದರಿಗೆ ದೇವಸ್ಥಾನದ ಆಡಳಿತ ಮಂಡಳಿಯ ಶ್ರೀ ಗಂಗಾಧರ ಕಾಂತಡ್ಕ, ಬಾಲ ಸುಬ್ರಹ್ಮಣ್ಯ ಭಟ್ ಇವರ ಉಪಸ್ಥಿತಿಯಲ್ಲಿ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top