ಸಂವಿಧಾನದ ಸಮಗ್ರ ಗ್ರಹಿಕೆಯಿಂದ ಪ್ರಜಾಪ್ರಭುತ್ವದ ಗೆಲುವು: ವೀರೇಂದ್ರ ಪಿ.ಎಂ

Upayuktha
0

ಉಜಿರೆ ಎಸ್.ಡಿ.ಎಂ.ನಲ್ಲಿ ಮಾಧ್ಯಮ ಕಾನೂನು-ನೀತಿ ಸಂಹಿತೆ ಕುರಿತ ವಿಶೇಷ ಉಪನ್ಯಾಸ



ಉಜಿರೆ: ಸಮೂಹ ಮಾಧ್ಯಮ ವೃತ್ತಿಪರರು ಭಾರತೀಯ ಸಂವಿಧಾನವನ್ನು ಸಮಗ್ರವಾಗಿ ಅರ್ಥೈಸಿಕೊಂಡರೆ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಸಂವಹನ ಪ್ರಕ್ರಿಯೆ ಅರ್ಥಪೂರ್ಣಗೊಳ್ಳುತ್ತದೆ. ಸಕಾರಾತ್ಮಕ ಅಭಿವ್ಯಕ್ತಿ ತೀಕ್ಷ್ಣಗೊಂಡು ಪ್ರಜಾಪ್ರಭುತ್ವದ ಮೌಲ್ಯಗಳು ಗೆಲ್ಲುತ್ತವೆಎಂದು ನ್ಯಾಯವಾದಿ, ಹಿರಿಯ ಪತ್ರಕರ್ತ ವೀರೇಂದ್ರ ಪಿ.ಎಂ ಅಭಿಪ್ರಾಯಪಟ್ಟರು.


ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವುಗುರುವಾರ ಆಯೋಜಿಸಿದ ವಿಶೇಷ ಉಪನ್ಯಾಸಕಾರ್ಯಕ್ರಮದಲ್ಲಿ 'ಮಾಧ್ಯಮ ಕಾನೂನು ಮತ್ತು ನೀತಿಸಂಹಿತೆ' ಕುರಿತುಅವರು ಮಾತನಾಡಿದರು.


ಭಾರತವು ಅನ್ವಯಿಸಿಕೊಂಡಿರುವ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಂವಿಧಾನವೇ ಬಲಾಢ್ಯವಾದುದು. ರಾಷ್ಟ್ರದ ಪರಿಕಲ್ಪನೆಗಿಂತ ಸ್ಟೇಟ್ ಎಂಬ ಪಾರಿಭಾಷಿಕ ಪದವುಆಧುನಿಕ ಪ್ರಜಾಪ್ರಭುತ್ವದ ಸುಧಾರಣಾವಾದಿ ಆಲೋಚನಾಕ್ರಮಗಳಿಗೆ ಹೆಚ್ಚು ಹತ್ತಿರವಾದುದು. ಸ್ಟೇಟ್‍ಅಥವಾರಾಜ್ಯಾಂಗವನ್ನು ಸುಧಾರಣಾವಾದಿ ನೆಲೆಯನ್ನಾಗಿಜನಪರಚಿಂತನೆಗೆಅನುಗುಣವಾಗಿ ಪರಿವರ್ತಿಸುವ ಶಕ್ತಿ ಸಂವಿಧಾನಕ್ಕಿದೆ. ಹೀಗಾಗಿ ವರದಿಗಾರರು, ಸಂಪಾದಕ ಹುದ್ದೆಯಲ್ಲಿರುವವರು, ಟೆಲಿವಿಷನ್, ಸಿನಿಮಾ ಮತ್ತು ನೂತನ ಸಮೂಹ ಮಾಧ್ಯಮ ವಲಯಗಳಲ್ಲಿ ಗುರುತಿಸಿಕೊಂಡು ವೃತ್ತಿನಿರತರಾದವರೆಲ್ಲರೂ ಸಂವಿಧಾನವನ್ನು ಆಳವಾಗಿ ತಿಳಿದುಕೊಳ್ಳಬೇಕು. ಆಗ ಮಾತ್ರ ಒಳಿತಿನ ಪರ ನಿಲ್ಲುವಖಚಿತತೆಯ ನಿಲುವುಗಳನ್ನು ತಳೆಯಲು ಅನುಕೂಲವಾಗುತ್ತದೆ. ಆ ಸ್ಪಷ್ಟತೆಯಆಧಾರದ ಮೇಲೆ ಸೃಜನಶೀಲ ಅಭಿವ್ಯಕ್ತಿಯ ಮಾದರಿಗಳನ್ನು ರೂಪಿಸಿ ಸಾಮಾಜಿಕ ಬದಲಾವಣೆಯ ಸಾಧ್ಯತೆಗಳನ್ನು ವಿಸ್ತರಿಸಬಹುದುಎಂದರು.


ಸ್ಟೇಟ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಈ ಮೂರೂ ನೆಲೆಗಳಲ್ಲಿ ನ್ಯಾಯಾಂಗವೇ ಹೆಚ್ಚು ಪ್ರಾಧಾನ್ಯತೆ ಪಡೆದಿದೆ. ನ್ಯಾಯಾಲಯದ ತೀರ್ಪುಗಳು ಚಾಲ್ತಿಯಲ್ಲಿರುವ ಕಾನೂನುಗಳನ್ನು ಸಂವಿಧಾನಾತ್ಮಕವಾಗಿ ವಿಶ್ಲೇಷಿಸುತ್ತವಾದ್ದರಿಂದ ನ್ಯಾಯಾಂಗಕ್ಕೆ ವಿಶೇಷ ಆದ್ಯತೆಇದೆ. ಶಾಸಕಾಂಗವು ರೂಪಿಸುವ ನೀತಿಗಳು ಸಂವಿಧಾನ ಬದ್ಧವಾಗಿರದಿದ್ದರೆ ಅವುಗಳನ್ನು ಪರಾಮರ್ಶಿಸಿ ತಿದ್ದುವ ಕೆಲಸ ಈ ಬಗೆಯ ವಿಶ್ಲೇಷಣೆಯಿಂದ ಆಗುತ್ತದೆ. ನ್ಯಾಯಿಕತೀರ್ಪು ಮತ್ತು ವಿಶ್ಲೇಷಣೆಗಳು ಸಂವಿಧಾನದ ಪಾರಮ್ಯವನ್ನೇಎತ್ತಿಹಿಡಿಯುತ್ತವೆ. ಈ ಆಯಾಮವನ್ನು ದೃಷ್ಟಿಯಲ್ಲಿರಿಸಿಕೊಂಡೇ ನ್ಯಾಯಾಂಗಕಾರ್ಯನಿರತವಾಗಿರುತ್ತದೆಎಂದು ತಿಳಿಸಿದರು.


ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಅಥವಾ ಫೋರ್ಥ್‍ ಎಸ್ಟೇಟ್‍ ಎಂದು ಗುರುತಿಸಲಾಗುತ್ತದೆ. ಇದು ಲೋಕ ರೂಢಿಯ ಗ್ರಹಿಕೆಯೇ ಹೊರತು ಎಲ್ಲೂಅಧಿಕೃತವಾಗಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ನಂತರದ ನಾಲ್ಕನೇ ಅಂಗ ಎಂಬುದಾಗಿ ಗುರುತಿಸಲ್ಪಟ್ಟಿಲ್ಲ. ಮೊದಲ ಮೂರೂ ಪ್ರಜಾಪ್ರಭುತ್ವದ ನೆಲೆಗಳನ್ನು ಸುಸ್ಥಿತಿಯಲ್ಲಿರುವಂತೆ ನಿಗಾವಹಿಸುವ ಕ್ಷೇತ್ರವನ್ನಾಗಿ ಮಾಧ್ಯಮವನ್ನು ಪರಿಗಣಿಸುವ ಪರಿಪಾಠ ಮುಂದುವರೆದು 'ನಾಲ್ಕನೇ ಅಂಗ' ಎಂದುಗ್ರಹಿಸುವುದುರೂಢಿಯಾಗಿದೆ. ಇಂತಹ ಲೋಕರೂಢಿಯಗ್ರಹಿಕೆಯು ಮಾಧ್ಯಮ ವೃತ್ತಿಪರರನ್ನು ಹೆಚ್ಚು ಜವಾಬ್ದಾರಿಯುತಆಗಿಸುವುದಕ್ಕೆ ನೆರವಾಗಿದೆ. ಈ ದೃಷ್ಟಿಯಿಂದ ಮಾಧ್ಯಮ ವೃತ್ತಿಪರತೆಯೊಂದಿಗೆ ಗುರುತಿಸಿಕೊಂಡ ಹೊಸ ಪೀಳಿಗೆ ಸಂವಿಧಾನವನ್ನು ಸಮಗ್ರವಾಗಿ ತಿಳಿದುಕೊಂಡು ಎಚ್ಚರದ ಹೊಣೆಗಾರಿಕೆ ನಿಭಾಯಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೆಲ್ಲಿಸಬೇಕುಎಂದು ನುಡಿದರು.


ನ್ಯಾಯಾಂಗ ಮತ್ತು ಮಾಧ್ಯಮರಂಗ ಹೆಚ್ಚು ಜವಾಬ್ದಾರಿಯುತವಾಗಿ ಕಾರ್ಯಗಳನ್ನು ನಿರ್ವಹಿಸಿದಾಗ ಜನಪರ ಕಾನೂನುಗಳು ರೂಪುಗೊಳ್ಳುವುದಕ್ಕೆ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಕಾನೂನು ನಿರೂಪಕರೇಜನವಿರೋಧಿ ನೀತಿಗಳನ್ನು ರೂಪಿಸಲು ಪ್ರಯತ್ನಿಸಿದರೆ ನ್ಯಾಯಾಂಗಛಾಟಿ ಬೀಸುತ್ತದೆ. ಇಂತಹ ಸಂದರ್ಭಗಳಲ್ಲಿ ನ್ಯಾಯಾಂಗದ ವಿವೇಚನಾತ್ಮಕ ನಿಲುವುಗಳು ಸಂವಿಧಾನದ ಸದಾಶಯಗಳನ್ನು ಬದುಕಿಸುತ್ತವೆ. ಮಾಧ್ಯಮಗಳವರು ಅವುಗಳಿಗೆ ಕನ್ನಡಿ ಹಿಡಿದು ಸಕಾರಾತ್ಮಕ ಹೆಜ್ಜೆಗಳಿಗೆ ಕಸುವು ತುಂಬಿಕೊಡುವ ವೃತ್ತಿಪರತೆಯನ್ನು ಮೆರೆಯಬೇಕು. ಹಾಗಾದಾಗ ಮಾತ್ರಅಭಿವ್ಯಕ್ತಿಗೆತೀಕ್ಷ್ಣತೆ ಮತ್ತುತೀವ್ರತೆದಕ್ಕಿಜನಸಮೂಹಕ್ಕೆ ಅನುಕೂಲವಾಗುತ್ತದೆಎಂದರು.


ವಿಭಾಗದ ಮುಖ್ಯಸ್ಥರಾದಡಾ.ಭಾಸ್ಕರ ಹೆಗಡೆಅಧ್ಯಕ್ಷತೆ ವಹಿಸಿ ಮಾತನಾಡಿ ಮಾಧ್ಯಮ ಕಾನೂನುಗಳು ಮತ್ತು ನೀತಿ ಸಂಹಿತೆ ಸಂಬಂಧಿತ ಸಂವಾದಗಳು ಅಧ್ಯಯನನಿರತ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಎಂದರು. ವಸುಧಾಕಾರ್ಯಕ್ರಮ ನಿರೂಪಿಸಿದರು. ವೀರೇಂದ್ರ ಪಿ.ಎಂ ಅವರನ್ನುಗ್ರೀಷ್ಮಾ ಪರಿಚಯಿಸಿದರು. ಪ್ರಜ್ಞಾ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top