ಮಾನವೀಯ ಸೇವೆಗೆ ರೆಡ್‌ಕ್ರಾಸ್ ಸದಾ ಬದ್ಧ: ಸಿಎ ಶಾಂತಾರಾಮ ಶೆಟ್ಟಿ

Upayuktha
0



ಮಂಗಳೂರು: ಮಾನವೀಯ ಸೇವೆಯೇ ರೆಡ್‌ಕ್ರಾಸ್ ಸಂಸ್ಥೆಯ ಧ್ಯೇಯವಾಗಿದ್ದು ರಕ್ತನಿಧಿ ಸೇವೆ, ಅಗತ್ಯ ಇರುವ ವಿಕಲ ಚೇತನರಿಗೆ ಗಾಲಿಕುರ್ಚಿ ವಿತರಣೆ, ಉಚಿತ ವೈದ್ಯಕೀಯ ಶಿಬಿರ ಮುಂತಾದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಅಶಕ್ತರ ಸೇವೆಗೆ ದ.ಕ.ಜಿಲ್ಲಾ ಸದಾ ರೆಡ್‌ಕ್ರಾಸ್ ಸಂಸ್ಥೆ ಸದಾ ಬದ್ಧವಾಗಿದೆ ಎಂದು ದ.ಕ. ಜಿಲ್ಲಾ ರೆಡ್‌ಕ್ರಾಸ್ ಸಮಿತಿಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.


ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಪದವಿನಂಗಡಿಯ ಮಹಿಳೆಯೋರ್ವರಿಗೆ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರ ವಿನಂತಿ ಮೇರೆಗೆ ದ.ಕ. ಜಿಲ್ಲಾ ರೆಡ್‌ಕ್ರಾಸ್ ಸಮಿತಿ ವತಿಯಿಂದ ವಿಶೇಷ ಆರಾಮದಾಯಕ ಮಂಚ ವಿತರಿಸಿ ಅವರು ಮಾತನಾಡಿದರು.


ಮಾಜಿ ಮೇಯರ್ ಜಯಾನಂದ ಅಂಚನ್, ರೆಡ್‌ಕ್ರಾಸ್ ಜಿಲ್ಲಾ ಸಮಿತಿಯ ನಿರ್ದೇಶಕ ಪಿ.ಬಿ.ಹರೀಶ್ ರೈ, ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ಪ್ರಮುಖರಾದ ಪ್ರಜ್ವಲ್ ಶೆಟ್ಟಿ, ಹರಿಪ್ರಸಾದ್, ಉಮೇಶ್ ಶೆಟ್ಟಿ, ರವೀಂದ್ರ ಅಮೀನ್, ಸಂಜೀತ್ ಶೆಟ್ಟಿ, ಸರೋಜಿನಿ, ದಿವ್ಯ, ಜಯ ಮೇರಿಹಿಲ್, ಮಾಧವ, ಫಲಾನುಭವಿಯ ತಾಯಿ ಮೀನಾಕ್ಷಿ, ರೆಡ್‌ಕ್ರಾಸ್ ಸಿಬ್ಬಂದಿ ಗಿರೀಶ್ ಕುಮಾರ್, ಅನಿತಾ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top