ರಾಮನಾಮ ಪಠಣದಿಂದ ಸಂಕಷ್ಟಗಳು ದೂರ
ಹುಬ್ಬಳ್ಳಿ/ಬೆಳಧಡಿ: ರಾಮನ ಧ್ಯಾನದಿಂದ ಬೆಟ್ಟದಷ್ಟು ಸಂಕಷ್ಟಗಳು ಮಂಜಿನಂತೆ ಕರಗುವವು. ನಾಮಸಾಧಕರಿಗೆ ಲೋಕದ ವಿಷಾಯಸಕ್ತಿ ಕ್ಷೀಣಿಸಿ ನಾನು ನನ್ನದು ಹೋಗಿ ಭಗವಂತನಿಂದೇ ಎಲ್ಲ ಎಂಬ ಸ್ಪಷ್ಟತೆ ಅರಿವಾಗುತ್ತದೆ ಎಂದು ಹೆಬ್ಬಳ್ಳಿ ಬ್ರಹ್ಮಚೈತನ್ಯಾಶ್ರಮದ ಪಪೂ ದತ್ತಾವಧೂತ ಗುರುಗಳು ಹೇಳಿದರು.
ಅವರು ಗದಗ ಜಿಲ್ಲೆಯ ಬೆಳಧಡಿಯ (ಬ್ರಹ್ಮಾನಂದಪುರಿ) ಶ್ರೀರಾಮಮಂದಿರದಲ್ಲಿ ನಡೆದ ಶ್ರೀರಾಮ ನವಮಿ ಉತ್ಸವದಲ್ಲಿ ಪತ್ರಕರ್ತ ಹನುಮಂತ ಮ. ದೇಶಕುಲಕರ್ಣಿ ಅವರ ರಾಮಾಂತರ್ಯಾಮಿ ಕೃತಿ ಬಿಡುಗಡೆ ಮಾಡಿ ಮಾತನಾಡಿ, ರಾಮನ ವ್ಯಕ್ತಿತ್ವ, ಗುಣ, ಆಡಳಿತ ಮಾದರಿಯಾಗಿದ್ದು ಆತನ ಮನದಲ್ಲಿ ಧ್ಯಾನಿಸಲು ಪ್ರೇರೇಪಿಸುವ ಹಾಗೂ ರಾಮನಾಮ ತಾರಕ ಮಂತ್ರವನ್ಮು ಪ್ರಚುರಗೊಳಿಸಿದ ಸಂತಮಹಾತ್ಮರ ಸಂಕ್ಷಿಪ್ತ ಚರಿತ್ರೆಯ ಒಳಗೊಂಡ ಕೃತಿಯಾಗಿದ್ದು ಇದರಲ್ಲಿ ಬೆಳಧಡಿ ಬ್ರಹ್ಮಾನಂದ ಮಹಾರಾಜರ ಕಿರುಚರಿತ್ರೆ ಒಳಗೊಂಡಿದ್ದು ರಾಮನವಮಿ ಶುಭಸಂದರ್ಭದಲ್ಲಿ ಲೋಕಾರ್ಪಣೆಯಾಗಿದ್ದು ಆಸ್ತಿಕ ಬಂಧುಗಳಿಗೆ ಸಂತಸದ ಸಂಗತಿ ಎಂದರು.
ಇದೇ ವೇಳೆ ಕರ್ಮವೀರ ವಾರಪತ್ರಿಕೆ ಶ್ರೀರಾಮನವಮಿ ಅಂಗವಾಗಿ ಹೊರತಂದ ವಿಶೇಷ ಸಂಚಿಕೆಯನ್ನು ಪೂಜ್ಯರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಲೇಖಕ ಹನುಮಂತ ಮ. ದೇಶಕುಲಕರ್ಣಿ ಅವರು ಕೃತಿಯ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. ಬಿಡುಗಡೆಯ ಸಂದರ್ಭದಲ್ಲಿ ಲೇಖಕಿ ವೀಣಾ ಬರಗಿ, ಚಿದಂಬರ ಪಾಟೀಲ ಕುಲಕರ್ಣಿ, ಗುರುರಾಜ ದೇಶಕುಲಕರ್ಣಿ, ರಾಧಾ ಕುಲಕರ್ಣಿ, ಹರೀಶ ಬೊಮ್ಮನಹಳ್ಳಿ, ಚೈತನ್ಯ ಜೋಶಿ, ಆದರ್ಶ ಕುಲಕರ್ಣಿ ಸೇರಿದಂತೆ ರಾಮಭಕ್ತರು ಇದ್ದರು.
ಶ್ರೀರಾಮನವಮಿ ಪ್ರಯುಕ್ತ ಬೆಳಿಗ್ಗೆ ಶ್ರೀರಾಮ ಸೀತಾ ಸಹಿತ ಲಕ್ಷ್ಮಣ ದೇವರಿಗೆ ಕಾಕಡಾರತಿ, ಅಭಿಷೇಕ, ಪೂಜೆ, ಅಲಂಕಾರ ನಡೆದವು. ನಂತರ ಅಲಂಕೃತ ತೊಟ್ಟಿಲಲ್ಲಿ ಶ್ರೀರಾಮ ದೇವರ ವಿಗ್ರಹವನ್ನು ಇರಿಸಿ ಪೂಜೆಗೈದ ನಂತರ ಸುಹಾಸಿನಿಯರಿಂದ ನಾಮಕರಣಶಾಸ್ತ್ರ ನಡೆದು ಬಾಲರಾಮನಿಗೆ ಜೋಗುಳ ಹಾಡಲಾಯಿತು. ಆರತಿಶಾಸ್ತ್ರ ಮುಗಿದ ನಂತರ ಹೆಬ್ಬಳ್ಳಿ ದತ್ತಾವಧೂತರಿಂದ ಪ್ರವಚನ ಜರುಗಿತು. ಬಂದ ಭಕ್ತರಿಗೆ ಕೋಸಂಬರಿ, ಪಾನಕ, ಹಣ್ಣು, ಲಘು ಉಪಹಾರ, ಪ್ರಸಾದ ವಿತರಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


