ಅಜಾತಶತ್ರು ಶ್ರೀ ರಾಮಚಂದ್ರ

Upayuktha
0



ಯುಗಾದಿ ಬಂದಿತೆಂದರೆ ಹಬ್ಬಗಳ ಸಾಲು ಸಾಲು ಬರುತ್ತವೆ. ಇದರಲ್ಲಿ ಮೊದಲನೆಯದಾಗಿ ಬರುವುದೇ ಶ್ರೀ ರಾಮ ನವಮಿ. ಆಶ್ವೀಜ ಮಾಸದಲ್ಲಿ ಬರುವ  ನವರಾತ್ರಿ, ಪುಷ್ಯ ಮಾಸದಲ್ಲಿ ಬರುವ ಶಾಕಂಭರಿ ನವರಾತ್ರಿಯಂತೆ ಚೈತ್ರ ಮಾಸದಲ್ಲಿ ಕೂಡ ಕೆಲವು ಜನ ನವರಾತ್ರಿ ಆಚರಿಸುತ್ತಾರೆ. ಅದರಲ್ಲಿ ಬರುವುದೇ ರಾಮ ನವಮಿ.


ರಾಮನ ಚರಿತ್ರೆಯೇ ರಾಮಾಯಣದ. ಮೂಲ ತಿರುಳು. ಜೀವನದಲ್ಲಿ ಹೇಗೆ ಬದುಕಬೇಕೆಂಬುದು ಎಂಬುದನ್ನೂ ರಾಮಾಯಣ ತಿಳಿಸುತ್ತದೆ.


ರಾಮ ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ವಿಯೆಟ್ನಾಮ್, ಇಂಡೋನೇಷಿಯಾ, ಶ್ರೀಲಂಕಾಗಳಲ್ಲಿಯೂ ಕೂಡ ಶ್ರೀ ರಾಮನ ದೇವಾಲಯಗಳನ್ನು ಕಾಣಬಹುದು.


ಈಗಲೂ ವಿಮಾನದಲ್ಲಿ ಪ್ರಯಾಣಿಸುವಾಗ ಜನ ರಾಮಸೇತು ನೋಡಿ ಕೈ ಮುಗಿಯುವುದನ್ನು ಕಾಣಬಹುದು. ರಾಮ ಕೇವಲ ಅಯೋಧ್ಯೆಯ ರಾಜನಷ್ಟೇ ಅಲ್ಲ, ಅವನು ಭಾರತೀಯ ಜನ ಮಾನಸದಲ್ಲಿ ಬೆರೆತು ಹೋಗಿದ್ದಾನೆ. ಉತ್ತರದ ರಾಮಚರಿತ ಮಾನಸ, ದಕ್ಷಿಣದ ಕಂಭ ರಾಮಾಯಣ ಉತ್ತರ ಮತ್ತು ದಕ್ಷಿಣ ಜನತೆಗಳನ್ನು ಸೇರಿಸುವ ಸೇತುವೆಯಾಗಿದೆ. ರಾಮ ಕೇವಲ ಮರ್ಯಾದಾ ಪುರುಷೋತ್ತಮ ಅಷ್ಟೇ ಅಲ್ಲ, ಜೀವನದಲ್ಲಿ ಕಷ್ಟಗಳು ಬಂದಾಗ ತಾಳ್ಮೆಯನ್ನು ಹೇಗೆ  ಹೊಂದಿರಬೇಕು ಎಂದು ತೋರಿಸಿದ್ದಾನೆ.


ಉತ್ತರ ಭಾರತದಲ್ಲಿ ರಾಮ ನವಮಿ ಹೇಗೆ ಸಂಭ್ರಮದ ಹಬ್ಬವಾದರೆ ದಕ್ಷಿಣದಲ್ಲಿ ಪಾನಕ, ಕೋಸಂಬರಿಯನ್ನು ನೆನೆಸುವ ಆಚರಣೆಯನ್ನು ಹೊಂದಿದೆ.

ದಿಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಪ್ರಖ್ಯಾತ ಧಾರಾವಾಹಿಯಾಗಿ ಜನತೆಯನ್ನು ಸೂರೆಗೊಂಡಿತ್ತು.


ರಾಮಾಯಣದಲ್ಲಿ ಬರುವ ಸುಂದರ ಕಾಂಡವನ್ನು ಪಠಣ ಮಾಡುವ ಕ್ರಮ ಈಗಲೂ ಇದೆ. ಹಿಂದೂಗಳಲ್ಲಿ ಈಗಲೂ ಪ್ರತಿ ಮನೆಯಲ್ಲಿ ಮಕ್ಕಳಿಗೆ ರಾಮನ ಹೆಸರಿಡುವ ಪದ್ಧತಿ ಇದೆ. ಶ್ರೀ ರಾಮ ಜಯ ರಾಮ ಜಯ ಜಯ ರಾಮ ಎನ್ನುವ ತಾರಕ ಮಂತ್ರದ ಸ್ಮರಣೆ ಈಗಲೂ ಮಾಡುತ್ತಾರೆ.

ಮಹಾರಾಷ್ಟ್ರದಲ್ಲಿ ಜನ ಈಗಲೂ ಜನ ಭೇಟಿಯಾದಾಗ ರಾಮ ರಾಮ ಎನ್ನುವ ಪದ್ಧತಿ ಈಗಲೂ ಇದೆ.


ಶ್ರೀ ರಾಮ ರಕ್ಷಾ, ರಾಮ ಅಷ್ಟೋತ್ತರ ನಾಮಾವಳಿ, ಸುಂದರ ಕಾಂಡ, ರಾಮ ಸಹಸ್ರ ನಾಮಾವಳಿ ಈಗಲೂ ಆಸ್ತಿಕರ ಮನ ಗೆದ್ದಿವೆ. ಅಯೋಧ್ಯಾ, ಕಿಷ್ಕಿಂಧೆ, ಜನಕ ಪುರಿ, ಧನುಷ್ಕೋಟಿ, ಅಶೋಕ  ವಾಟಿಕ, ಜನರ ತೀರ್ಥ ಕ್ಷೇತ್ರವಾಗಿವೆ.


ರಾಮ ಹುಟ್ಟಿದ್ದು ಭಾರತವಾದರೆ, ಸೀತೆ ನೇಪಾಳದ ಜನಕಪುರಿ, ಮತ್ತು ಸೀತೆಯ ಅಪಹರಣವಾಗಿ ಸೀತೆ ಇದ್ದ ಶ್ರೀಲಂಕಾ, ಹೀಗೆ ಮೂರು ದೇಶಗಳ ಬಾಂಧವ್ಯ ಬೆಳೆಸಿದ  ಕೀರ್ತಿ ರಾಮಾಯಣಕ್ಕಿದೆ.


ಬನ್ನಿ, ರಾಮ ನವಮಿಯ ದಿನ ಸಂಭ್ರಮದಿಂದ ಆಚರಿಸೋಣ.


-ಗಾಯತ್ರಿ ಸುಂಕದ, ಬದಾಮಿ


Post a Comment

0 Comments
Post a Comment (0)
To Top