ಪುತ್ತೂರು: ತೀರಾ ಕೆಳ ಮಟ್ಟದಲ್ಲಿ ಹಾರಾಡಿದ ಲಘು ವಿಮಾನ, ಕುತೂಹಲ, ಆತಂಕ

Upayuktha
0

ಸಾಂಕೇತಿಕ ಚಿತ್ರ


ಪುತ್ತೂರು: ಸಣ್ಣ ವಿಮಾನವೊಂದು ಭೂಮಿಗೆ ತೀರಾ ಕೆಳ ಎತ್ತರದಲ್ಲಿ ಹಾರಾಟ ನಡೆಸಿದ್ದು, ಜನರಲ್ಲಿ ಆತಂಕ ಮೂಡಿಸಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.


ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದು, ಹಲವು ಕಡೆಗಳಲ್ಲಿ ವೈಮಾನಿಕ ದಾಳಿಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಆಕಾಶದಲ್ಲಿ ವಿಮಾನಗಳು ಹಾರಾಡಿದರೂ ಗೊಂದಲ ಹಾಗೂ ಆತಂಕ ಮೂಡಿಸುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಪುತ್ತೂರಿನಲ್ಲಿ ಒಂದು ಸಣ್ಣ ವಿಮಾನ ಹಲವು ಸುತ್ತು ಹಾರಾಟ ನಡೆಸಿರುವುದು ಕೆಲಕಾಲ ಗೊಂದಲ ಉಂಟು ಮಾಡಿತ್ತು.


ಪುತ್ತೂರಿನಲ್ಲಿ ಇಂದು ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಸಣ್ಣ ವಿಮಾನವೊಂದು ಭೂಮಿಗೆ ತೀರಾ ಹಲವು ಸುತ್ತು ಹಾರಾಟ ನಡೆಸಿತು. 


ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವಠಾರದ ಗದ್ದೆ ಮೇಲ್ಬಾಗದಲ್ಲಿ ಭೂಮಿಯ ತೀರಾ ಕೆಳ ಮಟ್ಟಕ್ಕೆ ಸಣ್ಣ ವಿಮಾನ ಹಾರಾಡುತ್ತಿದ್ದ ದೃಶ್ಯವನ್ನು ಜನರು ನೋಡಿದ್ದಾರೆ. ಪದೇ ಪದೇ ನಗರದ ವಿವಿಧ ಭಾಗದಲ್ಲಿ ಹಾರಾಟ ನಡೆಸಿದೆ. ಸುಮಾರು 10 ರಿಂದ 15 ಸುತ್ತು ಹಾರಾಟ ನಡೆಸಿತು. 


ಅಲ್ಲದೇ, ಬನ್ನೂರು, ರೈಲು ನಿಲ್ದಾಣ, ಪಡೀಲ್, ದರ್ಬೆ ಸೇರಿದಂತೆ ನಗರದ ಹಲವು ಬಡಾವಣೆಗಳು ಹಾಗೂ ನಗರದ ಹೊರಭಾಗದಲ್ಲೂ ಸಹ  ಸನಿಹದಲ್ಲೂ ಸಹ ವಿಮಾನ ಹಲವು ಸುತ್ತು ಹಾರಾಟ ನಡೆಸಿತು. 


ಒಂದೇ ವಿಮಾನ ಹೀಗೆ ಕೆಲವು ಕಾಲ ಹಾರಾಟ ನಡೆಸಿರುವುದು ಆತಂಕ ಮೂಡಿದ ಬೆನ್ನಲ್ಲೇ ಇದು ಭೂ ವಿಜ್ಞಾನಕ್ಕೆ ಸಂಬಂಧಿಸಿದ ಸರ್ವೇ ಕಾರ್ಯ ಎಂದು ತಿಳಿದು ಜನರು ನಿಟ್ಟುಸಿರು ಬಿಟ್ಟ ಘಟನೆ ನಡೆದಿದೆ.


ಚಿಕ್ಕಮಗಳೂರು ಮತ್ತು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಸರ್ವೆ ನಡೆಸುವ ಉದ್ದೇಶದಿಂದ ಈ ವಿಮಾನ ಮಂಗಳೂರು ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿತ್ತು. ಈ ಪ್ರದೇಶದಲ್ಲಿ ವೈಜ್ಞಾನಿಕ ಉದ್ದೇಶಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದು, ವಿಶೇಷವಾಗಿ ಭೂಭೌತಿಕ ಸಮೀಕ್ಷೆ ನಡೆಸುತ್ತಿದೆ.


ಸುಮಾರು 20 ದಿನಗಳ ಹಿಂದೇ ಇದೇ ರೀತಿಯಲ್ಲಿ ಸಣ್ಣ ವಿಮಾನವೊಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಎನ್'ಆರ್ ಪುರ ಹಾಗೂ ಶಿವಮೊಗ್ಗ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಹಾರಾಟ ನಡೆಸಿತ್ತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top