ಹೆಣ್ಣು ಶಕ್ತಿಯ ದೇವತೆ
ಮನೆಯನ್ನು ಬೆಳಗುವ ದೇವತೆ
ತಾಯಿಯೇ ಮೊದಲ ಗುರು
ಅವಳಿಗೆ ಇಲ್ಲ ಸರಿಸಮನಾರು.
ಹೆಣ್ಣು ಮಮತೆಯ ಮೂರ್ತಿ
ಅವಳೇ ನಮ್ಮೆಲ್ಲರಿಗೂ ಸ್ಪೂರ್ತಿ
ಹೆಣ್ಣು ದೇವತೆಗೆ ಸಮಾನ
ಅವಳ ನೋವಿಗಿಲ್ಲ ಸ್ಪಂದನ.
ಮನೆ ಬೆಳಗುವ ತಾರೆಯಿವಳು
ಮನ ಬೆಳಗುವ ಹೆಣ್ಣು ಇವಳು
ಸಂಸಾರದ ಕಣ್ಣು ಇವಳು
ಸಂಸ್ಕಾರವನ್ನು ಕಳಿಸುವಳು ಇವಳು.
ಹೆಣ್ಣಿಗೆ ಕನಸುಗಳು ನೂರೆಂಟು
ಆ ಭಾವನೆಯನ್ನು ಆರಿಯಲು ಯಾರುಂಟು.
ನೋವನ್ನು ಮನದಲ್ಲಿ ಬಚ್ಚಿಡುವಳು
ಎಲ್ಲರಿಗೂ ಪ್ರೀತಿಯ ಧಾರೆ ಎರೆವಳು.
- ಶಿವಾನಿ ಕೊಡಂಗಾಯಿ
ಪ್ರಥಮ ಬಿ. ಎ ಪತ್ರಿಕೋಧ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



