ಕವನ: ಹಕ್ಕಿ ಹಾರಿದಷ್ಟು

Upayuktha
0



ಹಕ್ಕಿ ಹಾರಿದಷ್ಟು ಬಾನು 

ಇನ್ನೂ ಮೇಲಕೆ 

ಬಾ ಎಂದು ಕರೆವಳಲ್ಲಿ 

ಉಷಾಬಾಲಿಕೆ 


ಉಷೆಯ ಮುದ್ದು ಮೊಗವ ಕಂಡು 

ಹಕ್ಕಿ ಹಾರಿದೆ 

ಹಾರಿದಷ್ಟೂ ಬಾನು ದೂರ 

ದೂರವಾಗಿದೆ 


ಏರಿ ಹಾರಿ ನಲಿದ ಹಕ್ಕಿ-

-ಗೀಗ ಬಳಲಿಕೆ 

ಕಾಡುಮರದ ರೆಂಬೆಹಸ್ತ 

ಪಕ್ಷಿಪಾದಕೆ 


ಕಾಡುಹಣ್ಣುಗಳನು ತಿಂದು 

ಹಸಿವು ತೀರಲು

ಉಷೆಯು ಕರೆಯುತಿಹಳು ಮತ್ತೆ 

ಮೇಲೆ ಏರಲು 


ಹಕ್ಕಿ ನಕ್ಕು ಉಲಿಯಿತೀಗ 

ನೀನೆ ಕೆಳಗೆ ಬಾ 

ಹೊಂಬೆಳಕಿನ ಜರಿಸೀರೆಯ 

ಚೆಲುವೆ ಕೆಳಗೆ ಬಾ 


ಹಕ್ಕಿ ಹಾಡಿ ಹಾಡಿ ಉಷೆಯ 

ಕೆಳಗೆ ಕರೆಯಿತು 

ಹೊಸಬೆಳಕಿನ ಮುಂಜಾವಿನ 

ಪರದೆ  ತೆರೆಯಿತು 


- ಚಿಂತಾಮಣಿ ಕೊಡ್ಲೆಕೆರೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top