ಪುತ್ತೂರು: ಸಂತ ಫಿಲೊಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು ಇದರ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗವು 14 ಮಾರ್ಚ್ 2026ರಂದು ಗಣಿತದ ಸ್ಥಿರಾಂಕವಾದ π (ಪೈ) ಯ ಮಹತ್ವವನ್ನು ಪರಿಚಯಿಸುವ ಉದ್ದೇಶದಿಂದ “ಸಂಗೀತದಲ್ಲಿನ ಗಣಿತಶಾಸ್ತ್ರ” ವಿಷಯದ ಅತಿಥಿ ಉಪನ್ಯಾಸದ ಮೂಲಕ ಪೈ ದಿನಾಚರಣೆಯನ್ನು ಆಚರಿಸಿತು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ರೇ. ಡಾ. ಆಂಟನಿ ಪ್ರಕಾಶ್ ಮೊಂಟೇರೊ ಅವರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಆಲ್ಬರ್ಟ್ ಐನ್‌ಸ್ಟೈನ್ ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿ, ಗಣಿತ ಮತ್ತು ತತ್ತ್ವಶಾಸ್ತ್ರದ ನಡುವಿನ ಸಂಬಂಧವನ್ನು ವಿವರಿಸಿ ಸಮಗ್ರ ಅಧ್ಯಯನದ ಮಹತ್ವವನ್ನು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾದ ಡಾ. ಪ್ರಕಾಶ್ ಪ್ರಭು, ಪ್ರಾಧ್ಯಾಪಕ (ನಿವೃತ್ತ), ಎಸ್‌ಡಿಎಂ ಕಾಲೇಜು, ಉಜಿರೆ, ಅವರು ಪೈ ಸಂಖ್ಯೆಯ ವಿಶೇಷತೆಗಳ ಬಗ್ಗೆ ಉಪನ್ಯಾಸ ನೀಡಿದರು. ಪೈ ಒಂದು ಅನಿರ್ಣೀತ ಸಂಖ್ಯೆ ಆಗಿದ್ದು, ಅದರ ದಶಮಾಂಶಗಳು ಅಂತ್ಯವಿಲ್ಲದೆ ಮುಂದುವರಿಯುತ್ತವೆ ಎಂಬುದನ್ನು ವಿವರಿಸಿ ಗಣಿತದ ಆಟಗಳ ಮೂಲಕ ಕಾರ್ಯಕ್ರಮವನ್ನು ಆಕರ್ಷಕವಾಗಿಸಿ, ಸಂಗೀತದ ಮೂಲಕ ಗಣಿತದ ಪರಿಕಲ್ಪನೆಗಳನ್ನು ವಿವರಿಸಿ, ವಿದ್ಯಾರ್ಥಿಗಳಿಗೆ ಕ್ಲಾಸಿಕಲ್ ಸಂಗೀತದೊಂದಿಗೆ ಗಣಿತದ ಸಂಬಂಧವನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎಂ. ಎಸ್.ಸಿ. ಗಣಿತ ವಿದ್ಯಾರ್ಥಿಗಳು ಹಾಗೂ ಗಣಿತಶಾಸ್ತ್ರ ವಿಭಾಗದ ಅಧ್ಯಾಪಕರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


