ಪಚ್ಚನಾಡಿ ಎಸ್‌ಟಿಪಿ ಕಾಮಗಾರಿ: ಅವಗಣನೆಗೆ ಶಾಸಕ ಡಾ. ಭರತ್ ಶೆಟ್ಟಿ ಆಕ್ರೋಶ

Upayuktha
0


ಕಾವೂರು: ನಗರದ ಪಚ್ಚನಾಡಿ ಎಸ್‌ಟಿಪಿ ಬಳಿ ಒಳಚರಂಡಿ ಕಾಮಗಾರಿ, ಉನ್ನತೀಕರಣ ಯೋಜನೆಗೆ ಹಾಗೂ ಸುರತ್ಕಲ್ ಮತ್ತು ದಕ್ಷಿಣ ಕ್ಷೇತ್ರದ ಎಸ್‌ಟಿಪಿ ಮೇಲ್ದರ್ಜೆ ಚಾಲನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬುಧವಾರ ನೀಡಿದ್ದು, ಸ್ಥಳೀಯ ಶಾಸಕನಾಗಿ ಆಹ್ವಾನ ನೀಡದೆ ಇರುವುದಕ್ಕೆ ಶಾಸಕ ಡಾ. ಭರತ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


ಕೇಂದ್ರದ ಸ್ವಚ್ಛ ಭಾರತ್ ಹಾಗೂ ಎನ್‌ಜಿಟಿ ಅನುದಾನ 40 ಕೋಟಿ ಅನುದಾನ ಬಂದಿದೆ. ರಾಜ್ಯ ಸರಕಾರದ ಪಾತ್ರ ಕೇವಲ ಅನುಷ್ಠಾನ ಮಾತ್ರ. ಒಳಚರಂಡಿ ಯೋಜನೆಗೆ ನನ್ನ ಪ್ರಥಮ ಅವಧಿಯಲ್ಲಿ ಕಾಮಗಾರಿಗೆ ಸಂಬಂಧಿಸಿದಂತೆ ಪತ್ರ ಬರೆದು ಅನುದಾನ ತರಲು ಕ್ರಮ ವಹಿಸಲಾಗಿತ್ತು ಎಂದಿದ್ದಾರೆ.


ಸಚಿವ ಗುಂಡೂರಾವ್ ಉಸ್ತುವಾರಿ ಸಚಿವರಾಗಿ ಜಿಲ್ಲೆಗೆ ಬರುವುದೇ ಅಪರೂಪ. ಇದರ ನಡುವೆ ಸರ್ಕಾರದ ಸಭೆ, ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕ್ರಮ ಎಂಬಂತೆ ಬಿಂಬಿಸಿ ಹೋಗುತ್ತಾರೆ. ಸ್ಥಳೀಯ ಶಾಸಕನ್ನಾಗಿ ಪಚ್ಚನಾಡಿಯಲ್ಲಿ ನನ್ನ ಉಪಸ್ಥಿತಿಯಲ್ಲಿ ನಡೆಯಬೇಕಿತ್ತು. ಸ್ಥಳೀಯ ಕಾಂಗ್ರೆಸ್ ನಾಯಕರ ಕುಮ್ಮಕ್ಕುನಿಂದ ಅಧಿಕಾರಿಗಳು ಕೂಡ ಮಾಹಿತಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಪ್ರಾಬಲ್ಯ ಹಾಗೂ ಉತ್ತಮ ಕೆಲಸ ಕಾರ್ಯವನ್ನು ಕಾಂಗ್ರೆಸ್‌ಗೆ ಸಹಿಸಿಕೊಳ್ಳಲಾಗುತ್ತಿಲ್ಲ.ಇದೀಗ ತಮ್ಮದೇ ಸಾಧನೆ ಎಂಬಂತೆ ಕ್ರೆಡಿಟ್ ಪಡೆಯಲು ಹವಣಿಸುತ್ತಿದೆ ಎಂದು ವ್ಯಂಗ್ಯವಾಡಿದರು. ಸಂಬಂಧ ಪಟ್ಟವರ ಮೇಲೆ ಹಕ್ಕು ಚ್ಯುತಿ ಮಂಡನೆ ಮಾಡುವೆ ಎಂದು ಹೇಳಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top