ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯಿಂದ ಗೋಗ್ರಾಸ ಸಮರ್ಪಣೆ

Upayuktha
0


ಉಡುಪಿ: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ವತಿಯಿಂದ ಕೊಡವೂರು ಗೋಶಾಲೆಯಲ್ಲಿ ಗೋಗ್ರಾಸ ಸೇವೆ ನಡೆಯಿತು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮತ್ತು ತನು-ಮನ- ಧನದಿಂದ ಸಹಕರಿಸಿದ ಎಲ್ಲ ವಿಪ್ರಬಾಂಧವರಿಗೆ ಸಮಿತಿ ಅಧ್ಯಕ್ಷರಾದ ಕೀಳಂಜೆ ಶ್ರೀ ಕೃಷ್ಣರಾಜ ಭಟ್ ಅವರು ಧನ್ಯವಾದ ಹೇಳಿದರು.


ಈ ಸಂದರ್ಭದಲ್ಲಿ ಗೋವರ್ಧನ ಗಿರಿ ಟ್ರಸ್ಟ್ ನ ನಾಗರಾಜ್ ರಾವ್ ಅವರು ಸಮಿತಿಯ ಅಧ್ಯಕ್ಷ ಕೃಷ್ಣರಾಜ ಭಟ್ ಅವರನ್ನು ಶಾಲು ಹೊದಿಸಿ ಗೌರವಿಸಿದರು. ಉಪಾಧ್ಯಕ್ಷ ರಂಗನಾಥ ಸಾಮಗ, ಕಾರ್ಯದರ್ಶಿ ನಾಗರಾಜ ಭಟ್ ಕೋಶಾಧಿಕಾರಿ ಅಜಿತ್ ಬಿಜಾಪುರ್, ಲಕ್ಷ್ಮಿನಾರಾಯಣ ಆಚಾರ್ಯ, ಲಕ್ಷ್ಮೀಶ ಆಚಾರ್ಯ, ವಿಷ್ಣುಮೂರ್ತಿ ಭಟ್, ಶ್ಯಾಮಲಾ ರಾವ್, ಕವಿತಾ, ಸುಧಾ, ವಸುಧಾ, ರೂಪ, ಶ್ರೀಜಾ ಹಾಗೂ ಇನ್ನಿತರರು ಗೋ ಸೇವೆಯಲ್ಲಿ ಪಾಲ್ಗೊಂಡರು.


ಗೋಶಾಲೆಯಲ್ಲಿ ಗೋಗ್ರಾಸ ಸಮರ್ಪಿಸಲು ಸಹಕರಿಸಿದ ಶಶಿಧರ ಭಟ್, ಹರೀಶ್ ಆಚಾರ್ಯ ಹಾಗೂ ತಂಡದವರಿಗೆ ಸಮಿತಿ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top