ಅನುದಾನಿತ ಇಡ್ಯಾ ವಿದ್ಯಾದಾಯಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಡೇ

Upayuktha
0


 ಸುರತ್ಕಲ್‌: ಹಿಂದೂ ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಅನುದಾನಿತ ಇಡ್ಯಾ ವಿದ್ಯಾದಾಯಿನೀ ಹಿರಿಯ ಪ್ರಾಥಮಿಕ ಶಾಲೆ ಸುರತ್ಕಲ್‌ನಲ್ಲಿ ಐದು, ಆರು ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿದ್ಯಾಗಮ ಟ್ರಸ್ಟಿನ ವತಿಯಿಂದ ಇಡಿ360 ಫೌಂಡೇಶನ್ ತರಬೇತುದಾರರಿಂದ ನಡೆಸಲಾಗುತ್ತಿದ್ದ ಆನ್‌ಲೈನ್ ಸ್ಪೋಕನ್ ಇಂಗ್ಲೀಷ್ ತರಗತಿಯ ವಿದ್ಯಾರ್ಥಿಗಳಿಂದ ಇಂಗ್ಲೀಷ್ ಡೇ ಕಾರ್ಯಕ್ರಮವು ನಡೆಯಿತು.


ಇಡಿ 360 ಟ್ರೈನಿಂಗ್ ಫೌಂಡೇಶನ್ ನ ಸಂಯೋಜಕರಾದ ಶೋಭಾ ಪೈ ಮತ್ತು ವಿದ್ಯಾಗಮ ಟ್ರಸ್ಟ್‌ನ ಟ್ರಸ್ಟಿ ವಾಸುದೇವ ಐತಾಳ್ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಇಂಗ್ಲೀಷ್ ಭಾಷೆಯ ಕಲಿಕೆಯ ಮೇಲಿನ ಹಿಡಿತ ಮತ್ತು ಅವರ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.


ಅಧ್ಯಕ್ಷತೆ ವಹಿಸಿದ್ದ ಹಿಂದೂ ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಮಾತನಾಡಿ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೂ ಕಡಿಮೆಯಿರದ ಪ್ರತಿಭಾವಂತರಾಗಿದ್ದು ಇಂಗ್ಲೀಷ್ ಭಾಷಾ ಸಾಮರ್ಥ್ಯವನ್ನು ತಮ್ಮ ಮುಂದಿನ ವಿದ್ಯಾರ್ಥಿ ಜೀವನದಲ್ಲಿ ಆಳವಡಿಸಿ ಕೊಳ್ಳ ಬೇಕು ಎಂದರು.


ಕಲಿಕಾ ಕಾರ್ಯಕ್ರಮದ ಕಾರಣಕರ್ತರಾದ ತರಬೇತುದಾರರಾದ ಸರಿತಾ, ವೃಂದಾ, ಮಂಜುಳಾ, ಅದಿಬಾ, ಮಾನಸ, ನೀನಾ ಅವರಿಗೆ ಪ್ರೀತಿ ಕೃತಜ್ಞತೆ ಸಲ್ಲಿಸಿದರು.


ಶಾಲಾ ಶಿಕ್ಷಕಿ ಪಿ. ಕಸ್ತೂರಿ, ವಿದ್ಯಾಗಮ ಟ್ರಸ್ಟ್ ನ ಟ್ರಸ್ಟಿ ಜಯಶ್ರೀ, ಮುಖ್ಯ ಶಿಕ್ಷಕಿ ಶಾಂತ, ಆಡಳಿತ ಮಂಡಳಿ ಸದಸ್ಯ ಪ್ರಸೀದ. ಪಿ., ಆಡಳಿತ ಅಧಿಕಾರಿ ಮೃದುಲಾ ಮತ್ತು ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತನಿಷ್ಕ ಸ್ವಾಗತಿಸಿದರು. ವಿದ್ಯಾಗಮ ಟ್ರಸ್ಟ್‌ನ ಟ್ರಸ್ಟಿ ಮೀನಾಕ್ಷಿ ಐತಾಳ್  ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top