ಆಕೃತಿ ಸಾಂಸ್ಕೃತಿಕ ಉತ್ಸವದಲ್ಲಿ ನಿಟ್ಟೆ ವಿದ್ಯಾರ್ಥಿಗಳಿಗೆ ಬಹುಮಾನ

Upayuktha
0


ಕಾರ್ಕಳ: ಕೆನರಾ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ಕಳೆದ ವಾರ ನಡೆದ ಇಂಟರ್ ಕಾಲೇಜಿಯೇಟ್ ಸಾಂಸ್ಕೃತಿಕ ಉತ್ಸವ ಆಕೃತಿ 2026 ರಲ್ಲಿ, ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ರಚನಾ ಮತ್ತು ಕಲಾಂಜಲಿ ಕ್ಲಬ್ ಗಳ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನಗಳನ್ನು ಪಡೆದರು.


ರಚನಾ ಕ್ಲಬ್ ನ ಎಂ.ಸಿಂಚನ ಸುಭಾಸ್ ಅವರು ಲೈವ್ ಆರ್ಟ್ ಸ್ಪರ್ಧೆ ಮತ್ತು ಫೇಸ್ ಪೇಂಟಿಂಗ್ ಎರಡರಲ್ಲೂ ಪ್ರಥಮ ಸ್ಥಾನ ಪಡೆದರು. ರಂಗ್ ರಿಲೇ ತಂಡ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸುವ ಮೂಲಕ ರಚನಾ ಕ್ಲಬ್ ತಂಡವು ಸಂಸ್ಥೆಯ ಸಾಧನೆಗೆ ಮತ್ತಷ್ಟು ಕೊಡುಗೆ ನೀಡಿದೆ. ವಿಜೇತ ತಂಡವು ಎಂ. ಸಿಂಚನಾ ಸುಭಾಸ್, ಸೃಜನ್ ಮೂಲ್ಯ ಮತ್ತು ಆಯುಷ್ ಕುಲಾಲ್ ಅವರನ್ನು ಒಳಗೊಂಡಿತ್ತು.


ಪರ್ಫಾಮಿಂಗ್ ಆರ್ಟ್ಸ್ ವಿಭಾಗದಲ್ಲಿ, ಕಲಾಂಜಲಿ ಕ್ಲಬ್ ನ ಟೀಮ್ ಟಿಪ್ಟೋ "ನೃತ್ಯ ನಿರ್ವಾಣ" ಎಂಬ ಶೀರ್ಷಿಕೆಯ ತಂಡನೃತ್ಯ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಗಳಿಸಿತು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top