ಎಸ್.ಡಿ.ಎಂ. ಝೇಂಕಾರ 2026: ಮಂಗಳೂರಿನ ನಿಟ್ಟೆ ಇನ್ಸ್ಟಿಟ್ಯೂಟ್ ಕಮ್ಯುನಿಕೇಷನ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

Upayuktha
0

ಉಜಿರೆ: ಎಸ್. ಡಿ. ಎಂ. ಸ್ನಾತಕೋತ್ತರ ಕೇಂದ್ರ ಆಯೋಜಿಸಿದ ಎರಡು ದಿನಗಳ ಝೇಂಕಾರ - 2026 ರಾಷ್ಟ್ರೀಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವದ ಸಮಗ್ರ ಚಾಂಪಿಯನ್‍ಶಿಪ್ ಮನ್ನಣೆಯನ್ನು ಮಂಗಳೂರಿನ ನಿಟ್ಟೆ ಇನ್ಸ್ಟಿಟ್ಯೂಟ್ ಕಮ್ಯುನಿಕೇಷನ್ ಕಾಲೇಜಿನ ತಂಡ ತನ್ನದಾಗಿಸಿಕೊಂಡಿದೆ. ಮಂಗಳೂರಿನ ಯೆನಪೋಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ತಂಡದ ವಿದ್ಯಾರ್ಥಿಗಳು ರನ್ನರ್ಸ್ ಆಗಿ ದ್ವಿತೀಯ ಪ್ರಾಶಸ್ತ್ಯ ಪಡೆದಿದ್ದಾರೆ.


ಸಮಾರೋಪ ಸಮಾರಂಭದಲ್ಲಿ ಎಸ್.ಡಿ.ಎಂ. ಸ್ನಾತಕೋತ್ತರ ವಿಭಾಗದ ಡೀನ್ ಸೌಮ್ಯಾ ಬಿ. ಪಿ.,  ಉಜಿರೆಯ ಎಸ್.ಡಿ.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ಧನ, ಎಸ್. ಡಿ. ಎಂ. ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ., ಝೇಂಕಾರ ಉತ್ಸವದ ಸಂಯೋಜಕರಾದ ಡಾ ರವಿಶಂಕರ, ಡಾ. ಪ್ರಿಯಾಕುಮಾರಿ,  ಪ್ರವೀಣ ಮತ್ತು  ಪ್ರದೀಪ ಅವರು ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಿದರು.


ಪ್ರೊ. ವಿಶ್ವನಾಥ್ ಪಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಪ್ರತಿಭೆಯನ್ನು ಪ್ರದರ್ಶಿಸಲು ದೊರೆಯುವ ವೇದಿಕೆ ಎಂದು ಹೇಳಿದರು.


ಯಶಸ್ಸು ಕೇವಲ ಅಂಕಗಳು ಮತ್ತು ಪದವಿಗಳಿಂದ ಮಾತ್ರ ನಿರ್ಧರಿಸಲ್ಪಡುವುದಿಲ್ಲ,  ಜನರೊಂದಿಗೆ ಕೆಲಸ ಮಾಡುವ ಸಾಮಥ್ರ್ಯ, ನಂಬಿಕೆಯಿಂದ ನಿರ್ಧರಿಸಲ್ಪಡುತ್ತದೆ ಎಂದು ಉಜಿರೆಯ ಎಸ್.ಡಿ.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ಧನ ಹೇಳಿದರು.


ವಿಜೇತರ ವಿವರ 

ಮಿಸ್ಟರ್ ಅಂಡ್ ಮಿಸ್ ಝೇಂಕಾರ: 

ಮಿಸ್ಟರ್ ಝೇಂಕಾರ - ಮಂಗಳೂರಿನ ನಿಟ್ಟೆ ಇನ್ಸ್ಟಿಟ್ಯೂಟ್ ಕಮ್ಯುನಿಕೇಷನ್ ಕಾಲೇಜಿನ ಅಜಯ ಪಾಂಡಿ

ಮಿಸ್ ಝೇಂಕಾರ - ಮಂಗಳೂರಿನ ಯೆನೆಪೆÇೀಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ಜ್ಯೋತಿ ಚಂದನ


ಮಾಕ್ ಪ್ರೆಸ್:

ಮಂಗಳೂರಿನ ನಿಟ್ಟೆ ಇನ್ಸ್ಟಿಟ್ಯೂಟ್ ಕಮ್ಯುನಿಕೇಷನ್ ಕಾಲೇಜು(ಪ್ರಥಮ)

ಮಂಗಳೂರಿನ ಎಸ್.ಡಿ.ಎಮ್. ಲಾ ಕಾಲೇಜು(ದ್ವಿತೀಯ)


ಸೈಕಾಲಜಿ ಮಾಯ್ಸ್‍ಸ್ಟ್ರೋ :

ಮೈಸೂರಿನ ಎಸ್.ಬಿ.ಆರ್.ಆರ್. ಮಹಾಜನ ಕಾಲೇಜು(ಪ್ರಥಮ)

ಮಂಗಳೂರಿನ ಡಾ. ಪಿ. ದಯಾನಂದ ಕಾಲೇಜು (ದ್ವಿತೀಯ)


ದ ರೈಟರ್ಸ್ ರಿಲೆ:

ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು(ಪ್ರಥಮ)

ಮಂಗಳೂರಿನ ಯೆನೆಪೆÇೀಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್(ದ್ವಿತೀಯ)


ಮೈಂಡ್ ಕ್ರಾಫ್ಟ್: (ವಿಜ್ಞಾನ ಕ್ವಿಜ್)

ಹಾಸನದ ಸರಕಾರಿ ವಿಜ್ಞಾನ ಕಾಲೇಜು (ಪ್ರಥಮ)

ಮೂಡಬಿದರೆಯ ಆಳ್ವಾಸ್ ಕಾಲೇಜು(ದ್ವಿತೀಯ)


ಟ್ರೆಜರ್ ಹಂಟ್

ಉಡುಪಿಯ ಪೂರ್ಣಪ್ರಜ್ಞಾ ಕಾಲೇಜು(ಪ್ರಥಮ)

ಪುತ್ತೂರಿನ ವಿವೇಕಾನಂದ ಕಾಲೇಜು(ದ್ವಿತೀಯ)


ಫ್ಯೂಜಿಯಾಂಕ್ಸ್ (ಇಂಟಿಗ್ರೇಟಿಂಗ್ ಲಾಜಿಕ್ ನಂಬರ್ಸ್ ಆಂಡ್ ಕೋಡ್ ಸ್ಪರ್ಧೆ):

ಮೈಸೂರಿನ ಎಸ್.ಬಿ.ಆರ್.ಆರ್. ಮಹಾಜನ ಕಾಲೇಜು(ಪ್ರಥಮ)

ಉಜಿರೆಯ ಎಸ್. ಡಿ. ಎಂ. ಕಾಲೇಜು(ದ್ವಿತೀಯ)


ಎಮಿನಿಶಿಯಾ ( ಮಾರ್ಕೆಟಿಂಗ್)

ಮಂಗಳೂರಿನ ಎಸ್.ಡಿ.ಎಮ್. ಲಾ ಕಾಲೇಜು (ಪ್ರಥಮ)

ಪುತ್ತೂರಿನ ವಿವೇಕಾನಂದ ಕಾಲೇಜು (ದ್ವಿತೀಯ)


ಯುವೆಕ್ಸಾ (ಹ್ಯೂಮನ್ ರಿಸೋರ್ಸ್)

ಮಂಗಳೂರಿನ ಎಸ್.ಡಿ.ಎಮ್. ಲಾ ಕಾಲೇಜು(ಪ್ರಥಮ)

ಉಜಿರೆಯ ಎಸ್. ಡಿ. ಎಂ. ಕಾಲೇಜು(ದ್ವಿತೀಯ)


ಪ್ಲೆನೆಕ್ಸಾ (ಬೆಸ್ಟ್ ಮ್ಯಾನೇಜ್ಮೆಂಟ್ ಟೀಮ್):

ಪುತ್ತೂರಿನ ವಿವೇಕಾನಂದ ಕಾಲೇಜು(ಪ್ರಥಮ)

ಮೈಸೂರಿನ ಎಸ್.ಬಿ.ಆರ್.ಆರ್. ಮಹಾಜನ ಕಾಲೇಜು(ದ್ವಿತೀಯ)


ಸಮನ್ವಯ (ಐಸ್ ಬ್ರೇಕರ್)

ಮಂಗಳೂರಿನ ನಿಟ್ಟೆ ಇನ್ಸ್ಟಿಟ್ಯೂಟ್ ಕಮ್ಯುನಿಕೇಷನ್ ಕಾಲೇಜು(ಪ್ರಥಮ)

ಮಂಗಳೂರಿನ ಎಸ್.ಡಿ.ಎಮ್. ಲಾ ಕಾಲೇಜು(ದ್ವಿತೀಯ)


ಗ್ರುಪ್ ಡ್ಯಾನ್ಸ್ :

ಮೈಸೂರಿನ ಎಸ್.ಬಿ.ಆರ್.ಆರ್. ಮಹಾಜನ ಕಾಲೇಜು (ಪ್ರಥಮ)

ನಾರಾವಿಯ ಸಂತ ಅಂತೋನಿ ಕಾಲೇಜ್ ಆಫ್ ಕಾಮರ್ಸ್ (ದ್ವಿತೀಯ)


ಫ್ಯಾಶನ್ ಶೋ: 

ಮಂಗಳೂರಿನ ನಿಟ್ಟೆ ಇನ್ಸ್ಟಿಟ್ಯೂಟ್ ಕಮ್ಯುನಿಕೇಷನ್ ಕಾಲೇಜು(ಪ್ರಥಮ)

ಮಂಗಳೂರಿನ ಯೆನೆಪೋಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ (ದ್ವಿತೀಯ)


ಸ್ಪಾಟ್ ಫೋಟೋಗ್ರಫಿ:

ಉಡುಪಿಯ ಪೂರ್ಣಪ್ರಜ್ಞಾ ಕಾಲೇಜು(ಪ್ರಥಮ)

ಪುತ್ತೂರಿನ ವಿವೇಕಾನಂದ ಕಾಲೇಜು(ದ್ವಿತೀಯ)


ರೀಲ್ ಮೇಕಿಂಗ್:

ಮಂಗಳೂರಿನ ಯೆನೆಪೋಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್(ಪ್ರಥಮ)

ಬೆಳ್ತಂಗಡಿಯ ಗುರುದೇವ ಪ್ರಥಮ ದರ್ಜೆ ಕಾಲೇಜು (ದ್ವಿತೀಯ)


ಗಲ್ಲಿ ಕ್ರಿಕೆಟ್ :

ಬೆಳ್ತಂಗಡಿಯ ಗುರುದೇವ ಪ್ರಥಮ ದರ್ಜೆ ಕಾಲೇಜಿನ ತಂಡ-ಎ(ಪ್ರಥಮ)

ಬೆಳ್ತಂಗಡಿಯ ಗುರುದೇವ ಪ್ರಥಮ ದರ್ಜೆ ಕಾಲೇಜಿನ ತಂಡ-ಬಿ(ದ್ವಿತೀಯ)


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top