ಪುತ್ತೂರು: ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ) ಕಾಲೇಜು ಪುತ್ತೂರು ಇಲ್ಲಿನ ಪ್ರಥಮ ಬಿಕಾಂ ವಿದ್ಯಾರ್ಥಿ ನಿಶಾಂತ್ ಪಿ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಖೋ ಖೋ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಈ ನಿಟ್ಟಿನಲ್ಲಿ ಇದೇ ಮಾರ್ಚ್ 26 ರಿಂದ 29ರ ವರೆಗೆ, ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಜರುಗಲಿರುವ 2025- 26ನೇ ಸಾಲಿನ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ವಿ.ಎಸ್ ಡಾ.ಜ್ಯೋತಿ ಕುಮಾರಿ ಮತ್ತು ಯತೀಶ್ ಕುಮಾರ್ ಬಾರ್ತಿಕುಮೇರು ಇವರು ತರಬೇತಿ ಹಾಗೂ ಮಾರ್ಗದರ್ಶನ ನೀಡಿರುತ್ತಾರೆ. ಅಲ್ಲದೆ ಪುತ್ತೂರಿನ ರಾಷ್ಟ್ರೀಯ ಖೋ ಖೋ ತರಬೇತುದಾರರಾದ ಕಾರ್ತಿಕ್ ಇವರಲ್ಲಿ ವಿಶೇಷ ತರಬೇತಿಯನ್ನು ಕೂಡ ಪಡೆದಿರುತ್ತಾರೆ.
ಈ ಒಂದು ಮೆಗಾ ಅಂತರ್ ವಿಶ್ವವಿದ್ಯಾನಿಲಯ ಪಂದ್ಯಾಟದಲ್ಲಿ ದಕ್ಷಿಣ ಭಾರತದ 89 ವಿಶ್ವವಿದ್ಯಾನಿಲಯಗಳ ಖೋ ಖೋ ತಂಡಗಳು ಭಾಗವಹಿಸಲಿವೆ. ದೇಶದ ಉತ್ತಮ 8 ಖೋ ಖೋ ತಂಡಗಳಲ್ಲಿ ಒಂದಾಗಿರುವ ಮಂಗಳೂರು ವಿಶ್ವವಿದ್ಯಾನಿಲಯ ತಂಡವು ಕಳೆದ ಬಾರಿ ಚಿನ್ನದ ಪದಕ ಪಡೆದಿತ್ತು.
ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾನಿಲಯ ಖೋ ಖೋ ತಂಡವನ್ನು ನಮ್ಮ ಕಾಲೇಜಿನ ವಿದ್ಯಾರ್ಥಿ ನಿಶಾಂತ್ ಇವರು ಪ್ರತಿನಿಧಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಚಾರ. ಇವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು ವಿಶೇಷವಾಗಿ ಅಭಿನಂದಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


