ಪುತ್ತೂರು: ನಾರಾಯಣೀಯಮ್ ಆಧಾರವಾಗಿ ಕೇರಳದ ನಾರಾಯಣ ಭಟ್ಟತ್ತಿರಿ ಅವರು ಸಂಸ್ಕೃತದಲ್ಲಿ ರಚಿಸಿದ ಶ್ರೇಷ್ಠ ಭಕ್ತಿ ಕಾವ್ಯವಾದ ನಾರಾಯಣೀಯಮ್, ಭಕ್ತಿಭಾವದ ಪರಾಕಾಷ್ಠೆಯನ್ನು ಪ್ರತಿಬಿಂಬಿಸುವ ಕೃತಿ. ಅನನ್ಯ ಭಕ್ತಿಯಿಂದ ಗುರುವಾಯೂರ ಶ್ರೀ ಕೃಷ್ಣನನ್ನು ಆರಾಧಿಸಿದ ಭಟ್ಟತ್ತಿರಿ, ತಮ್ಮ ಗುರುವಿಗೆ ಬಂದಿದ್ದ ಮಹಾರೋಗವನ್ನು ತನ್ನ ಮೇಲೆ ತೆಗೆದುಕೊಂಡು ಬಳಿಕ ಭಕ್ತಿಯ ಶಕ್ತಿಯಿಂದ ಅದರಿಂದ ವಿಮುಕ್ತರಾದ ಘಟನೆಯು ವಿಶಿಷ್ಟವಾಗಿದೆ.
ಈ ಕೃತಿಯ ಮಹತ್ವವನ್ನು ಮನಗಂಡ ಪಿ. ಮಾಹಾಲಿಂಗ ಭಟ್ ಬೆಳ್ಳಾರೆ ಅವರು, ತಮ್ಮ ಶಿಷ್ಯರಿಗೆ ನಾರಾಯಣೀಯಮ್ ಪಾಠ ಮಾಡಿಸುವ ಮೂಲಕ ಪುತ್ತೂರಿನಲ್ಲಿ ಪ್ರಜ್ಞಾನ ಪ್ರತಿಷ್ಠಾನಮ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಬೆಳೆಸುತ್ತಿದ್ದಾರೆ. ಸಂಸ್ಥೆಯ ಆಶ್ರಯದಲ್ಲಿ ನಾರಾಯಣೀಯಮ್ ವ್ಯಾಖ್ಯಾನ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು, ಗೂಢಭಾವಾರ್ಥಗಳನ್ನು ಸರಳವಾಗಿ ಮನದಟ್ಟು ಮಾಡಿಸುವ ಕಾರ್ಯವೂ ನಡೆಯುತ್ತಿದೆ.
ಸುಲಭವಾಗಿ ಅರ್ಥೈಸಲು ಕಷ್ಟವಾಗುವ ಶ್ಲೋಕಗಳ ಭಾವಾರ್ಥವನ್ನು ಸರಳ ಕನ್ನಡ ಕಗ್ಗ ರೂಪದಲ್ಲಿ ಜನಸಾಮಾನ್ಯರಿಗೆ ತಲುಪಿಸಲು, ಸಂಸ್ಥೆಯ ಶಿಷ್ಯರಾದ ಪಕಳಕುಂಜ ಗೋಪಾಲಕೃಷ್ಣ ಭಟ್ ಅವರು ‘ನಾರಾಯಣೀಯಮ್ ಕಗ್ಗ’ ಎಂಬ ಗ್ರಂಥವನ್ನು ರಚಿಸಿದ್ದಾರೆ.
ಈ ಗ್ರಂಥವನ್ನು ಕಳೆದ ತಿಂಗಳ 26ರಂದು ಗುರುವಾಯೂರು ದೇವಸ್ಥಾನದಲ್ಲಿ ಕೃಷ್ಣಾರ್ಪಣ ಮಾಡಲಾಗಿದ್ದು, ಇತ್ತೀಚೆಗೆ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳು ಅವರ ದಿವ್ಯ ಹಸ್ತಗಳಿಂದ ಭಕ್ತರ ಸಮಕ್ಷಮದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


