ಮಹಿಳೆಯರ ಮೂಲಕ ಸಾಮಾಜಿಕ ಪ್ರಜ್ಞೆ ಮೂಡಿಸಿದ ನಾರಾಯಣಗುರು: ಡಾ. ಜ್ಯೋತಿ ಚೇಳ್ಯಾರ್

Upayuktha
0


ಮಂಗಳೂರು: ಗುರು ಎಂದಾಕ್ಷಣ ನೆನಪಾಗುವುದು ನಾರಾಯಣ ಗುರುಗಳು. ಇವರು ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಬೆಳಕು ನೀಡಿದವರಲ್ಲ; ಇಡೀ ಸಮಾಜಕ್ಕೆ ಬೆಳಕನ್ನು ನೀಡಿದವರುಎಂದು ಚೇಳ್ಯಾರು ಸರ್ಕಾರಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲೆಡಾ. ಜ್ಯೋತಿ ಚೇಳ್ಯಾರ್ ಅಭಿಪ್ರಾಯಪಟ್ಟರು.


ನಗರದ ವಿಶ್ವವಿದ್ಯಾನಿಲಯಕಾಲೇಜಿನರವೀಂದ್ರ ಕಲಾ ಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಹಾಗೂ ವಿಶ್ವವಿದ್ಯಾನಿಲಯ ಕಾಲೇಜಿನ ಸಂಯುಕ್ತದ ಆಶ್ರಯದಲ್ಲಿ ಗುರುಕಂಡಂತೆ ಮಹಿಳೆ ವಿಷಯದ ಕುರಿತು ಮಹಿಳಾ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 


ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಕೇವಲ ಪದವಿ ಅಥವಾಅಕ್ಷರ ಕಲಿಕೆ ಮಾತ್ರವಷ್ಟೇ ಸಾಕಾರಗೊಳ್ಳುವುದಿಲ್ಲ. ಹೆಣ್ಣು ಮಕ್ಕಳ ಮೂಲಕ ಸಾಮಾಜಿಕ ಪ್ರಜ್ಞೆ, ಸಾಮಾಜಿಕ ತಿಳುವಳಿಕೆಯನ್ನು ಇಡೀ ಸಮಾಜಕ್ಕೆತಲುಪಿಸಲು ಸಾಧ್ಯವಾಗುತ್ತದೆ. ಆ ಮೂಲಕ ಬದುಕಿನ ವೈಯಕ್ತಿಕತೆ, ಧಾರ್ಮಿಕತೆ, ಸಾಮಾಜಿಕತೆ ಮತ್ತುಆಧ್ಯಾತ್ಮಿಕತೆ ಎಂಬ ನಾಲ್ಕು ಮಜಲುಗಳನ್ನು ಸಶಕ್ತವಾಗಿ ತಲುಪಲು ಸಾಧ್ಯವಾಗುತ್ತದೆಎಂದುಅಭಿಪ್ರಾಯಪಟ್ಟರು. 


ನಾರಾಯಣ ಗುರುಗಳು ಇದ್ದ ಸಮಾಜದಲ್ಲಿ ಮಹಿಳೆಯು ಅವಕಾಶಗಳಿಂದ ವಂಚಿತರಾಗಿದ್ದ ಸಮಾಜದಲ್ಲಿ ಸ್ಥಾನಮಾನ ನೀಡುವ ಮೂಲಕ ಸಮಾಜದಲ್ಲಿಜಾಗೃತಿ ಎಂಬ ಕ್ರಾಂತಿ ಮೂಡಿಸಿದವರು ನಾರಾಯಣಗುರುಎಂದರು. ಸಮಾಜದಲ್ಲಿ ಹಾಸುಹೊಕ್ಕಾಗಿದ್ದಕಟ್ಟುಪಾಡು, ಸಂಪ್ರದಾಯಗಳಲ್ಲಿ ಬದಲಾವಣೆತರುವ ಮೂಲಕ ಹೊಸ ಚಿಂತನೆಗಳಿಗೆ ನಾಂದಿ ಹಾಡಿದರು. ಆ ಮೂಲಕ ಸಮಾಜದ ಮಹಿಳೆಯರ ವ್ಯಕ್ತಿತ್ವ ನಿರ್ಮಾಣಕ್ಕೆಅಡಿಗಲ್ಲು ಹಾಕಿದರು. ಮಹಿಳೆ ತನ್ನ ಸ್ವಂತ ಅವಕಾಶಕ್ಕಾಗಿ ಪ್ರತಿಭಟಿಸುವುದಕ್ಕೂ, ಮಹಿಳೆ ಪರವಾಗಿ ಪ್ರತಿಭಟಿಸುವುದಕ್ಕೂ ವ್ಯತ್ಯಾಸವಿದೆಎಂದುಕಥೆಗಾರ್ತಿ ರಾಜಶ್ರೀ ಟಿ. ರೈ ಪೆರ್ಲ ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿಗೌಡ, ನಾರಾಯಣಗುರುಗಳು ಕೇವಲ ಪ್ರಚಾರ ಬಯಸದೇತಮ್ಮಇಡೀ ಬದುಕನ್ನೇ ಸಮಾಜ ಸೇವೆಗಾಗಿ ಮುಡಿಪಿಟ್ಟಿದ್ದರುಎಂದು ಹೇಳಿದರು. 


ಕಾರ್ಯಕ್ರಮದಲ್ಲಿ ನಗರದ ಎಸ್ಡಿಎಂ ಕಾನೂನು ಕಾಲೇಜಿನ ಪ್ರಾಧ್ಯಾಪಕಿಡಾ. ಮೀನಾಕ್ಷಿರಾಮಚಂದ್ರ ಅವರು ವಿಶೇಷ ಉಪನ್ಯಾಸ ನೀಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ನೆಹರೂಚಿಂತನಕೇಂದ್ರದ ಸಂಶೋಧನಾ ಸಹಾಯಕಿ ಡಾ. ನಯನಕಾರ್ಯಕ್ರಮ ಸಮನ್ವಯ ಮಾಡಿದರು. ಬ್ರಹ್ರಶ್ರೀ ನಾರಾಯಾಣಗುರು ಅಧ್ಯಯನ ಪೀಠದ ನಿರ್ದೇಶಕ ಡಾ. ಜಯರಾಜ್ ಸೇರಿದಂತೆ ಕಾಲೇಜಿನ ನಾನಾ ಉಪನ್ಯಾಸಕರು ಉಪಸ್ಥಿತರಿದ್ದರು.  



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top