ಉಜಿರೆ: ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಪುರಾತನ ವಸ್ತುಗಳನ್ನು ಸಂಗ್ರಹ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಶ್ರೀಯುತ ಪುಷ್ಪದಂತ ಹೆಗ್ಡೆ ರವರು ಅಭಿಪ್ರಾಯ ಪಟ್ಟರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆ ಇಲ್ಲಿಯ ಇತಿಹಾಸ ವಿಭಾಗವು ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅಭ್ಯಾಗತರಾಗಿ ಆಗಮಿಸಿದ ಶ್ರೀಯುತ ಪುಷ್ಪದಂತ ಹೆಗ್ಡೆ ರವರು ಮಾತನಾಡಿ ಹವ್ಯಾಸವಾಗಿ ವಿದ್ಯಾರ್ಥಿಗಳು ವಿವಿಧ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಲು ಸಾಧ್ಯ. ಈ ಸಂಗ್ರಹಕ್ಕಾಗಿ ವಿಶೇಷ ಪರಿಶ್ರಮವನ್ನು ಪಡುವ ಅವಶ್ಯಕತೆ ಇಲ್ಲ ಅಂತಯೇ ಹಣದ ವಿನಿಯೋಗ ಅತಿಯಾಗಿ ಅವಶ್ಯಕತೆ ಇಲ್ಲ. ಆಸಕ್ತಿ ಇದ್ದರೆ ಎಲ್ಲವು ಸಾಧ್ಯ. ಎಂದು ವಿವರಿಸುತ್ತಾ ಯಾವೆಲ್ಲ ರೀತಿಯಲ್ಲಿ ಪ್ರಾಚೀನ ವಸ್ತುಗಳು ಹಾಗೂ ನಾಣ್ಯಗಳನ್ನು ಸಂಗ್ರಹ ಮಾಡಬಹುದು, ಹಾಗೂ ಅವುಗಳನ್ನು ರಕ್ಷಿಸುವ ಬಗೆ ಹೇಗೆ, ಆ ಕುರಿತಾದಂತಹ ಅಧ್ಯಯನವನ್ನು ಕೈಗೊಳ್ಳುವ ರೀತಿ ಇತ್ಯಾದಿ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು. ಅಂತೆಯೇ ಇತಿಹಾಸದ ವಿದ್ಯಾರ್ಥಿಗಳು ಪ್ರಾಚೀನ ವಸ್ತುಗಳನ್ನು ಸಂಗ್ರಹಿಸುವ ಕುರಿತು ಆಸಕ್ತಿಯನ್ನು ಹೊಂದುವಂತೆ ಉತ್ತೇಜಿಸಿದರು. ಅಂತೆಯೇ ವಿದ್ಯಾರ್ಥಿಗಳು ಕೇಳಿದ ಅನೇಕ ಸಂಶಯಗಳನ್ನು ಬಗೆಹರಿಸಿದರು.
ಇತಿಹಾಸ ವಿಭಾಗದ ಮುಖ್ಯಸ್ಥರಾಗಿರುವ ಡಾ. ಸನ್ಮತಿ ಕುಮಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಇತಿಹಾಸದ ವಿದ್ಯಾರ್ಥಿಗಳಾಗಿ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಬೆಳೆಸಿಕೊಂಡರೆ ದೊರೆಯುವ ಪ್ರಯೋಜನಗಳ ಕುರಿತು ಮಾತನಾಡಿದರು. ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಭಿಜ್ಞಾ ಉಪಾಧ್ಯಾಯ, ವಿದ್ಯಾರ್ಥಿ ಪ್ರತಿನಿಧಿ ಗೌರವಿ ಹಾಗೂ ಅಕ್ಷಯ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸೃಷ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಗೌರವಿ ಸ್ವಾಗತಿಸಿ ಪ್ರೀತಿ ವಂದನಾರ್ಪಣೆ ಗೈದರು 60 ಇತಿಹಾಸದ ವಿದ್ಯಾರ್ಥಿಗಳು ಭಾಗವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


