ಒಬ್ಬ ಅಹಂಕಾರಿ ವಕೀಲನು ತನ್ನ ಬಾವಿಯನ್ನು ನಿವೃತ್ತ ಶಿಕ್ಷಕರಿಗೆ ಮಾರಿಬಿಟ್ಟನು. ಎರಡು ದಿನಗಳ ನಂತರ, ಆ ವಕೀಲನು ಶಿಕ್ಷಕರ ಬಳಿಗೆ ಬಂದು ಹೇಳಿದನು:
“ಸರ್, ನಾನು ನಿಮಗೆ ಬಾವಿಯನ್ನು ಮಾತ್ರ ಮಾರಿದ್ದೇನೆ, ಅದರೊಳಗಿನ ನೀರನ್ನು ಅಲ್ಲ. ನೀವು ಆ ನೀರನ್ನು ಬಳಸಬೇಕಾದರೆ ಪ್ರತ್ಯೇಕವಾಗಿ ಹಣ ಪಾವತಿಸಬೇಕು.”
ಶಿಕ್ಷಕರು ನಗುತ್ತಾ ಹೇಳಿದರು:
“ಹೌದು, ನಾನು ಕೂಡ ನಿಮ್ಮನ್ನು ಭೇಟಿಯಾಗಲು ಬರುತ್ತಿದ್ದೆ. ನಿಮ್ಮ ನೀರನ್ನು ನನ್ನ ಬಾವಿಯಿಂದ ತೆಗೆದುಕೊಂಡು ಹೋಗಿ, ಇಲ್ಲವಾದರೆ ನಾಳೆಯಿಂದ ನನ್ನ ಬಾವಿಯಲ್ಲಿ ನೀರನ್ನು ಇಟ್ಟುಕೊಂಡಿದ್ದಕ್ಕೆ ನೀವು ನನಗೆ ಬಾಡಿಗೆ ಕೊಡಬೇಕಾಗುತ್ತದೆ.”
ಇದನ್ನು ಕೇಳಿದ ವಕೀಲನು ಬೆಚ್ಚಿಬಿದ್ದು, “ಅಯ್ಯೋ, ನಾನು ಕೇವಲ ಹಾಸ್ಯ ಮಾಡಿದ್ದೆ!” ಎಂದನು.
ಅದಕ್ಕೆ ಶಿಕ್ಷಕರು ನಕ್ಕು ಹೇಳಿದರು: “ಮಗನೇ, ನಿನ್ನಂತ ಹಲವಾರು ಮಕ್ಕಳಿಗೆ ನಾನು ಪಾಠ ಹೇಳಿ ವಕೀಲರನ್ನಾಗಿ ಮಾಡಿದ್ದೇನೆ!”
ಗುರು ಯಾವತ್ತೂ ಗುರುವೇ..!
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


