ಕೂಡ್ಲು ಜಾತ್ರೆ: ಸಾಂಸ್ಕೃತಿಕ ಕಲಾ ವೈಭವ

Upayuktha
0


ಕಾಸರಗೋಡು: ಇತಿಹಾಸ ಪ್ರಸಿದ್ಧ ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ವೈದೀಕ, ಧಾರ್ಮಿಕ, ವಿಧಿ ವಿಧಾನಗಳೊಂದಿಗೆ ಅತ್ಯಂತ ವೈಭಪೂರಿತವಾಗಿ ಜರುಗಿತು. ಸಹಸ್ರಾರು ಭಕ್ತರು ಶ್ರೀ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾದರು.


ಈ ಮಹೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವವು ಯಶಸ್ವಿಯಾಗಿ ನಡೆದು ಜನ ಮೆಚ್ಚುಗೆ ಪಡೆಯಿತು. ಗುರುರಾಜ್ ಕಾಸರಗೋಡು ಅವರ ಸಂಯೋಜನೆ ಹಾಗೂ ನಿರೂಪಣೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ವರ್ಷಾ ಶೆಟ್ಟಿ, ದೀಕ್ಷಾ ಕುಲಾಲ್, ಭಾನ್ವಿ ಕುಲಾಲ್, ಆರಾಧ್ಯ ಪೂಜಾರಿ, ತನುಜಾ ಕಡಿಯವರ್, ಅನ್ವಿತ್ ಪೂಜಾರಿ, ತ್ರಿಷಾ ಅಡಕಲಕಟ್ಟೆ, ಆನ್ಮೇತಾ ಶೆಟ್ಟಿ ಕೊಡಿಜಲ್, ರಕ್ಷಾ ಕುಲಾಲ್, ಅರ್ಚನಾ ಹೇರೂರ್, ಅಶ್ವಿತಾ, ತೇಜೂಶಾ, ವೃದ್ಧಿ, ದ್ರಿಷಾ, ಲಕ್ಷ್ಯ, ಸುಶ್ಮಿತಾ, ಅಂಜನಾ, ಅನನ್ಯ, ಜೀನ, ಶ್ರೇಯಾ, ಫ್ಲೇವಿಯಾ, ಆರ್ಯಲಕ್ಷ್ಮಿ, ತನುಶ್ರೀ, ವೈಷ್ಣವಿ, ರಿಷಿಕಾ, ಅಕ್ಷಿತಾ, ಲಾಸ್ಯ, ಹರಿನಂದನ ಮುಂತಾದ ಸಂಸ್ಥೆಯ ಅಪ್ರತಿಮ ಕಲಾವಿದರು ಕಲಾ ಪ್ರಸ್ತುತಿಗೈದರು.


ಕಾರ್ಯಕ್ರಮದ ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ಕೂಡ್ಲು ಗೋಪಾಲಕೃಷ್ಣ ಶ್ಯಾನುಭೋಗ್, ಜಗದೀಶ್ ಕೂಡ್ಲು ಮುಂತಾದ ಗಣ್ಯರ ಸಮ್ಮುಖದಲ್ಲಿ ಸಂಸ್ಥೆಗೆ ಮತ್ತು ಸಂಸ್ಥೆಯ ಕಲಾವಿದರಿಗೆ ಅತ್ಯಂತ ಕೈಗೆಟಕುವ ದರದಲ್ಲಿ ವಸ್ತ್ರಾಭರಣಗಳನ್ನು ಬಾಡಿಗೆಗೆ ನೀಡಿ ಸಹಕರಿಸುತ್ತಿರುವ ಶ್ರೀನಿಧಿ ಡಾನ್ಸ್ ಕಾಸ್ಟ್ಯೂಮ್ಸ್ ನ ಮಳಿಗೆಯ ಯಜಮಾನರಲ್ಲಿ ಒಬ್ಬರಾದ ಶ್ರೀಮತಿ ಸ್ಮಿತಾ ಹಾಗೂ ಕಲೆಗೆ ಪ್ರೋತ್ಸಾಹ ನೀಡುತ್ತಾ ಹಲವಾರು ಕಲಾ ಪ್ರತಿಭೆಗಳನ್ನು ಸಂಸ್ಥೆಗೆ ಪರಿಚಯಿಸಿದ ನೃತ್ಯ ನಿರ್ದೇಶಕರು ಆಗಿರುವ ಶ್ರೀಮತಿ ನಿಶ್ಮಿತಾ ಅವರನ್ನು ಸಂಸ್ಥೆಯ ವತಿಯಿಂದ ಅಭಿನಂದನೆ ಸಲ್ಲಿಸಿ ಗೌರವಾರ್ಪಣೆ ಮಾಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಸಂಸ್ಥೆಯ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top