ಕಾವೇರಮ್ಮ ಮಹಾಲಿಂಗೇಶ್ವರ ಕ್ಷೇತ್ರ: ಸಾಹಿತ್ಯ-ಗಾನ ನೃತ್ಯ ಪ್ರಸ್ತುತಿ

Upayuktha
0


ಕಾಸರಗೋಡು: ಇಲ್ಲಿನ ಕಾವೇರಮ್ಮ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ನಡೆದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ) 183 ನೇ ಸಾಹಿತ್ಯ ಗಾನ ವೈಭವ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿತು.


ಕಲಾವಿದರಾಗಿ ಸ್ಮಿತಾ ಉದಯ್, ಸೌಮ್ಯ, ಅಮೃತ್, ಐಶ್ವರ್ಯ, ಜಾಹ್ನವಿ, ಆತ್ಮಿಕ, ಯಶಸ್ವಿನಿ, ಗ್ರೀಷ್ಮ, ಹರ್ಷಿಶ್, ರಿಶಂತ್, ಹಾನಿಕ, ಮಾಳವಿಕ ಲಯ ಸೇರಿದಂತೆ ಹಲವು ಕಲಾವಿದರು ನೃತ್ಯ ಗಾನ ವೈಭವದ ಮೆರುಗನ್ನು ಇಮ್ಮಡಿಗೊಳಿಸಿದರು. ಡಾ. ವಾಣಿಶ್ರೀ ಸಾಹಿತ್ಯ ಪ್ರಸ್ತುತ ಪಡಿಸಿ ಕಲಾವಿದರಿಗೆ ಗೌರವ ಧನ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.


ದೇವಸ್ಥಾನದ ಆಡಳಿತ ಮಂಡಳಿಯು ಸಂಸ್ಥೆಯ ಮುಖ್ಯಸ್ಥೆ ಡಾ. ವಾಣಿಶ್ರೀ ಅವರಿಗೆ ಶಾಲು, ಹಾರ ದೇವರ ಪ್ರಸಾದ ಫಲ ಪುಷ್ಪ ಹಾಕಿ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಗಣ್ಯರಾದ ವಿಜಯರಾಜ, ಜಯಕರ, ರವೀಂದ್ರ ರೈ, ಅಚ್ಯುತ ಭಟ್, ಶಶಿಕಲಾ ಮುಂತಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top