ಕಾಸರಗೋಡು: ಇತಿಹಾಸ ಪ್ರಸಿದ್ಧ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮನ್ವಯದೊಂದಿಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಸಹಸ್ರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಭಕ್ತಿ ಭಾವದಲ್ಲಿ ಲೀನರಾದರು.
ಮಹೋತ್ಸವದ ಅಂಗವಾಗಿ ಉತ್ಸವದ ಕೊನೆಯ ದಿನ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.), ಕಾಸರಗೋಡು ಸಂಸ್ಥೆಯ ವತಿಯಿಂದ ಆಯೋಜಿಸಲಾದ ‘ಸಾಂಸ್ಕೃತಿಕ ಕಲಾ ವೈಭವ – ಕಲಾವಿದರ ಕಲರವ’ ಕಾರ್ಯಕ್ರಮವು ನಯನಮನೋಹರವಾಗಿ ನಡೆಯಿತು. ಕಾರ್ಯಕ್ರಮವು ಕಲಾಭಿಮಾನಿಗಳು ಮತ್ತು ಸಂಸ್ಕೃತಿ ಪ್ರೇಮಿಗಳಿಂದ ಭಾರೀ ಪ್ರಶಂಸೆಗೆ ಪಾತ್ರವಾಯಿತು.
ಗುರುರಾಜ್ ಕಾಸರಗೋಡು ಅವರ ಸಂಯೋಜನೆ ಮತ್ತು ನಿರೂಪಣೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಸಾಗಿತು. ಧಾರ್ಮಿಕ ಮುಂದಾಳು ಹಾಗೂ ಹಲವು ಪ್ರಶಸ್ತಿ ಪುರಸ್ಕೃತರಾದ ವೆಂಕಟರಮಣ ಹೊಳ್ಳ ಅವರು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು.
ವರ್ಷಾ ಶೆಟ್ಟಿ, ದೀಕ್ಷಾ ಕುಲಾಲ್, ಹಂಶಿತ್ ಆಳ್ವ, ಸುತನಿಧಿ, ಭಾನ್ವಿ ಕುಲಾಲ್, ಶ್ರಾವ್ಯ ವಿ.ಆರ್., ಭುವಿ ಶೆಟ್ಟಿ, ತಾನ್ಯ ಆರ್. ಶೆಟ್ಟಿ, ಭವಿಷ್ಯ ಪೂಜಾರಿ, ಅಶ್ವಿತಾ ಕೆ., ಧ್ರುವೀ ಎಸ್. ಶೆಟ್ಟಿ, ತೇಜೂಷಾ, ನಿಕ್ಷಿತಾ ಕೆ. ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ತಮ್ಮ ಅದ್ಭುತ ಪ್ರದರ್ಶನಗಳ ಮೂಲಕ ಕಾರ್ಯಕ್ರಮಕ್ಕೆ ಕಳೆ ತುಂಬಿದರು.
ಕಾರ್ಯಕ್ರಮದ ಸಮಾರೋಪದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಪ್ರಸಾದ್ ಹಾಗೂ ವೆಂಕಟರಮಣ ಹೊಳ್ಳ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಭಾಗವಹಿಸಿದ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


